ಹುಬ್ಬಳ್ಳಿ: ಬೆಂಗಳೂರಿನ ಬೆಳ್ಳಿ ವ್ಯಾಪಾರಿಯೊಬ್ಬರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ, ಹುಬ್ಬಳ್ಳಿಯಲ್ಲಿ ₹59 ಲಕ್ಷ ಮೌಲ್ಯದ ಸುಮಾರು 24 ಕೆ.ಜಿ. ಬೆಳ್ಳಿ ಆಭರಣಗಳನ್ನು ಕಳವು ಮಾಡಿರುವ ಪ್ರಕರಣ ಶಹರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಬೆಂಗಳೂರಿನ ಮಾಗಡಿ ಕ್ರಾಸ್ನ ವ್ಯಾಪಾರಿ ಅಶಿಸಕುಮಾರ ಜೈನ್ ಅವರು, ರಾಜಸ್ಥಾನದ ಯೋಗೇಶ ಸಿಂಗ್ ವಿರುದ್ಧ ದೂರು ನೀಡಿದ್ದಾರೆ.

ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯ ಮಹಾದೇವಿ ಸಿಲ್ಕ್ ಸಾರೀಸ್ ಬಟ್ಟೆ ಅಂಗಡಿ ಎದುರು ಕಾರಿನಲ್ಲಿ ಎರಡು ಬ್ಯಾಗ್ನಲ್ಲಿ ಇದ್ದ ಕಾಲುಗಜ್ಜೆ, ಕತ್ತಿನ ಚೈನ್, ಬ್ರಾಸ್ಲೇಟ್, ಕೈ ಕಡಗ, ಕಾಲ ಕಡಗಗಳನ್ನು ಬ್ಯಾಗ್ ಸಮೇತ ಕಳವು ಮಾಡಿದ್ದಾನೆ ಎಂದು ಆರೋಪಿಸಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಏನಿದು ಪ್ರಕರಣ?: ವ್ಯಾಪಾರಿ ಆಶಿಸಕುಮಾರ ಅವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಮೀತ ಪುರೋಹಿತ ಮತ್ತು ಯೋಗೇಶ ಸಿಂಗ್ ಅವರಿಗೆ ಬೆಳ್ಳಿಯ ಆಭರಣಗಳನ್ನು ಮಾರಾಟ ಮಾಡಿಕೊಂಡು ಬರುವಂತೆ, ತಮ್ಮದೇ ಕಾರು ನೀಡಿ 29ಕೆಜಿ ಬೆಳ್ಳಿ ಆಭರಣಗಳನ್ನು ನೀಡಿದ್ದರು. ಚಿತ್ರದುರ್ಗ, ದಾವಣಗೆರೆಯಲ್ಲಿ 3.167ಕೆ.ಜಿ. ಆಭರಣಗಳನ್ನು ಮಾರಾಟ ಮಾಡಿ, ಉಳಿದ 24.760 ಕೆ.ಜಿ. ಆಭರಣವನ್ನು ಮಾರಾಟ ಮಾಡಲು ಫೆ. 28ರಂದು ಹುಬ್ಬಳ್ಳಿಗೆ ಬಂದಿದ್ದರು.

ಲ್ಯಾಮಿಂಗ್ಟನ್ ರಸ್ತೆಯ ಮಹಾದೇವಿ ಸಿಲ್ಕ್ ಸಾರೀಸ್ ಬಟ್ಟೆ ಅಂಗಡಿ ಎದುರು ಕಾರು ನಿಲ್ಲಿಸಿ, ಅಲ್ಲಿರುವ ಕೆ.ಜಿ.ಪಿ. ಜ್ಯೂವಲರ್ಸ್ ಅಂಗಡಿಗೆ ಹೋಗಿದ್ದರು. ನಂತರ ಆಭರಣ ತರುವಂತೆ ಅಮಿತ ಅವರು, ಯೋಗೇಶ ಸಿಂಗ್ಗೆ ಹೇಳಿ ಕಾರಿನ ಚಾವಿ ಕೊಟ್ಟಿದ್ದರು. ಅವನು ಕಾರನ್ನು ಲಾಕ್ ಮಾಡಿ ಚಾವಿ ಸಮೇತ ಬೆಳ್ಳಿಯ ಆಭರಣಗಳಿರುವ ಎರಡು ಬ್ಯಾಗಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.