ಮಂಗಳವಾರ, ಏಪ್ರಿಲ್ 20, 2021
29 °C

ಹಾಸ್ಟೆಲ್ ವಿದ್ಯಾರ್ಥಿಗಳಿಗೂ ಸಿರಿಧಾನ್ಯ ಆಹಾರ: ಸಚಿವ ಬಿ.ಸಿ. ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: 'ಶಾಲೆಗಳಲ್ಲಿ ಬಿಸಿಯೂಟಕ್ಕೆ ಮತ್ತು ವಿದ್ಯಾರ್ಥಿನಿಲಯದಲ್ಲೂ ಸಿರಿಧಾನ್ಯ ಆಹಾರ ನೀಡಲು ನಿರ್ಧರಿಸಲಾಗಿದೆ' ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ನವಲಗುಂದ ತಾಲ್ಲೂಕಿನ ಮೊರಬದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ವಾರಕ್ಕೊಮ್ಮೆ ಮಧ್ಯಾಹ್ನದ ಬಿಸಿಯೂಟಕ್ಕೆ ಮತ್ತು ಹಾಸ್ಟೆಲ್ ನಲ್ಲಿ ದಿನಕ್ಕೊಮ್ಮೆ ಸಿರಿಧಾನ್ಯ ಆಹಾರ ನೀಡಲಾಗುವುದು. ಮೊದಲಿಗೆ ಕೃಷಿ ವಿಶ್ವವಿದ್ಯಾಲಯದ ಹಾಸ್ಟೆಲ್ ನಲ್ಲಿ ಆಹಾರ ನೀಡಲು ನಿರ್ಧರಿಸಲಾಗಿದೆ. ಇದರಿಂದ ಸಿರಿಧಾನ್ಯ ಬೆಳೆಯುವ ರೈತರಿಗೂ ಉತ್ತೇಜನ ಸಿಕ್ಕಂತಾಗುತ್ತದೆ" ಎಂದರು.

"ರೈತರ ಅನುಕೂಲಕ್ಕಾಗಿ ಇಪ್ಪತ್ತು ಮಂದಿಯ ಕೃಷಿ ಸಹಕಾರ ಸಂಘ  ಮಾಡಲಾಗುವುದು. ಸಂಘದ ಸದಸ್ಯರ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಒಂದು ಟ್ರಾಕ್ಟರ್ ನೀಡಲಾಗುವುದು‌. ಈ ವರ್ಷದಿಂದ ರಾಜ್ಯದಾದ್ಯಂತ ನೂರು ಸಂಘಗಳನ್ನು ಸ್ಥಾಪಿಸಲಾಗಿದ್ದು, ಮುಂದೆ ಗ್ರಾಮಕ್ಕೊಂದು ಸಂಘ ಮಾಡಲಾಗುವುದು" ಎಂದರು.

ಇದನ್ನೂ ಓದಿ: 

"ಕೃಷಿ ಮಿತ್ರ ಯೋಜನೆಯಡಿ ಡಿಪ್ಲೊಮಾ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳುವ ಕುರಿತು ಮುಖ್ಯಮಂತ್ರಿ ಬಜೆಟ್ ನಲ್ಲಿ ಘೋಷಣೆ ಮಾಡಲಿದ್ದಾರೆ" ಎಂದು ಹೇಳಿದರು.

ಕಡಲೆ ಖರೀದಿ ಕೇಂದ್ರ, ದಾಸ್ತಾನು ಮಳಿಗೆ ಉದ್ಘಾಟನೆ
ನವಲಗುಂದ ತಾಲ್ಲೂಕಿನ ಮೊರಬದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ ಅವರು, ಬೆಂಬಲ ಬೆಲೆಯಡಿ ಕಡಲೆ ಖರೀದಿ ಕೇಂದ್ರ, ಕೃಷಿ ಯಂತ್ರಧಾರೆ ಹಾಗೂ ದಾಸ್ತಾನು ಮಳಿಗೆಯನ್ನು ಭಾನುವಾರ ಉದ್ಘಾಟಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು