ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾಜ ಸೇವೆ ಲಯನ್ಸ್ ಕ್ಲಬ್ ಉದ್ದೇಶ’

Last Updated 18 ಮಾರ್ಚ್ 2022, 2:41 IST
ಅಕ್ಷರ ಗಾತ್ರ

ಅಳ್ನಾವರ: ಸಮಾಜ ಸೇವೆ ಧ್ಯೇಯವಾಗಿಟ್ಟುಕೊಂಡು ಮುನ್ನುಗ್ಗುತ್ತಿರುವ ಲಯನ್ಸ್ ಕ್ಲಬ್‌ ಸದಸ್ಯರು ಸಮಾಜದ ಹಿತಕ್ಕಾಗಿ ಸದಾ ಶ್ರಮಿಸಬೇಕು ಎಂದು ಜಿಲ್ಲಾ ಗವರ್ನರ್ ಶ್ರೀಕಾಂತ ಮೋರೆ ಹೇಳಿದರು.

ಸ್ಥಳೀಯ ಲಯನ್ಸ್ ಕ್ಲಬ್‌ಗೆ ಗುರುವಾರ ಭೇಟಿ ನೀಡಿದ ಅವರು ಪ್ರಗತಿ ಪರಿಶೀಲಿಸಿದ ನಂತರ ಮಾತನಾಡಿ ‘ಪ್ರಪಂಚದಾದ್ಯಂತ ಸುಮಾರು 21 ದೇಶದಲ್ಲಿ ಲಯನ್ಸ್ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. 14 ಲಕ್ಷಕ್ಕೂ ಹೆಚ್ಚು ಸದಸ್ಯ ಬಲ ಹೊಂದಿದೆ’ ಎಂದರು.

ನಾಲ್ಕು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಎಸ್.ಬಿ. ಪಾಟೀಲ, ಬಿ.ಎ. ಪಾಟೀಲ, ಗುರು ಹಟ್ಟಿಹೋಳಿ ಅವರಿಗೆ ವಿಶೇಷ ಗೌರವ ಪೀನ್ ನೀಡಲಾಯಿತು. ಜಾಗತಿಕ ಶಾಂತಿಗಾಗಿ ಮೌನ ಆಚರಿಸಲಾಯಿತು.

ಸ್ಥಳೀಯ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜಶೇಖರ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ನೂತನ ಸದಸ್ಯ ಮಂಜುನಾಥ ಬಡಿಗೇರ ಅವರಿಗೆ ಪ್ರಮಾಣ ವಚನ ಬೋಧಿಸಲಾಯಿತು.

ಶೀತಲ ಬೆಟದೂರ, ಡಾ. ಅಶೋಕ ಕುಂಟನ್ನವರ, ಯುಹಾನ್ ಸಿಂಗೆನಮ್, ಪ್ರೇಮನಾಥ ಜಿತೂರಿ, ಪಿ.ಎ. ಸೋನಾರ, ಆರ್.ಎಸ್. ಬಿಜಾಪೂರ, ಮಂಜುನಾಥ ಬಾಳೆಕುಂದ್ರಿ, ಎಂ.ಕೆ. ಬಡಿಗೇರ, ಅಮೃತ ಪಟೇಲ, ಎಸ್.ಆರ್. ಹಿರೇಹಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT