ಮಂಗಳವಾರ, ಡಿಸೆಂಬರ್ 10, 2019
19 °C
ವಾರ್ಷಿಕ ₹84.4 ಕೋಟಿ ಇಂಧನ ದರ ಉಳಿತಾಯ

10 ರೈಲುಗಳಲ್ಲಿ ಎಚ್‌ಒಜಿ ತಂತ್ರಜ್ಞಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಪರಿಸರ ಸ್ನೇಹಿ ಕಾರ್ಯಾಚರಣೆಗೆ ಮುಂದಾಗಿರುವ ನೈರುತ್ಯ ರೈಲ್ವೆಯು, ಮೊದಲ ಹಂತದಲ್ಲಿ ಹತ್ತು ಜೋಡಿ ರೈಲುಗಳಿಗೆ ‘ಹೆಡ್‌ ಆನ್‌ ಜನರೇಷನ್‌’ (ಎಚ್‌ಒಜಿ) ತಂತ್ರಜ್ಞಾನ ಅಳವಡಿಸಿಕೊಂಡಿದೆ. 

ಎಲ್‌ಎಚ್‌ಬಿ (ಲಿಂಕ್‌ ಹೋಫ್‌ಮ್ಯಾನ್ ಬುಶ್) ಬೋಗಿಗಳೊಂದಿಗೆ ವಿದ್ಯುತ್‌ ಮಾರ್ಗದ ಸೌಲಭ್ಯ ಹೊಂದಿರುವ ರೈಲುಗಳಲ್ಲಿ, ಈ ತಂತ್ರಜ್ಞಾನ ಪರಿಚಯಿಸಲಾಗಿದೆ. ಇದರಿಂದಾಗಿ ಪ್ರತಿ ರೈಲಿನ ವಾರ್ಷಿಕ ಇಂಧನ ದರ ₹3.5 ಲಕ್ಷದಂತೆ, ಒಟ್ಟು 10 ರೈಲುಗಳಿಂದ ವರ್ಷಕ್ಕೆ ₹84.4 ಕೋಟಿ ಇಂಧನ ಮೊತ್ತ ಉಳಿತಾಯವಾಗಲಿದೆ.

ಹೊಸ ತಂತ್ರಜ್ಞಾನದಿಂದಾಗಿ, ರೈಲಿಗೆ ಡಿಸೇಲ್ ಹಾಗೂ ಆಯಿಲ್ ಅಗತ್ಯವಿಲ್ಲದಿರುವುದಿಲ್ಲ. ಹಾಗಾಗಿ, ಈ ರೈಲುಗಳಲ್ಲಿ ವಾಯು ಮತ್ತು ಶಬ್ದ ಮಾಲಿನ್ಯ ಇರುವುದಿಲ್ಲ ಎಂದು ನೈರುತ್ಯ ರೈಲ್ವೆಯ ಪ್ರಕಟಣೆ ತಿಳಿಸಿದೆ.

ಎಚ್‌ಒಜಿ ವಿಶೇಷವೇನು?:

ಸದ್ಯ ರೈಲುಗಳಿಗೆ ಡೀಸೆಲ್‌ ಜನರೇಟರ್‌ ಹೊಂದಿರುವ ಬೋಗಿಗಳನ್ನು ಜೋಡಿಸಲಾಗಿದೆ. ಇವುಗಳ ಸಹಾಯದಿಂದ ಎಲ್ಲ ಕೋಚ್‌ಗಳಿಗೆ ವಿದ್ಯುತ್‌ ಪೂರೈಕೆಯಾಗುತ್ತದೆ. ವಿದ್ಯುತ್‌ ದೀಪ ಬೆಳಗಲು, ಫ್ಯಾನ್‌ ಹಾಗೂ ಎ.ಸಿ ಕಾರ್ಯ ನಿರ್ವಹಿಸಲು ಇದೇ ವಿದ್ಯುತ್‌ ಬಳಸಲಾಗುತ್ತದೆ. 

ಎಚ್‌ಒಜಿ ತಂತ್ರಜ್ಞಾನದಲ್ಲಿ, ಕೋಚ್‌ಗಳ ಮೇಲಿಂದ ಹಾಯ್ದು ಹೋಗುವ ತಂತಿಗಳ ಮೂಲಕ ವಿದ್ಯುತ್ ಪೂರೈಕೆಯಾಗುತ್ತದೆ. ಇದರಿಂದಲೇ ವಿದ್ಯುತ್ ದೀಪಗಳು ಮತ್ತು ಎ.ಸಿ.ಗಳು ಕಾರ್ಯನಿರ್ವಹಣೆಯಾಗುತ್ತವೆ.

ಎಚ್‌ಒಜಿ ರೈಲುಗಳು: ಬೆಂಗಳೂರು–ಹಜರತ್ ನಿಜಾಮುದ್ದೀನ್– ಬೆಂಗಳೂರು ರಾಜಧಾನಿ ಎಕ್ಸ್‌ಪ್ರೆಸ್, ಬೆಂಗಳೂರು–ದಾನಪುರ–ಬೆಂಗಳೂರು ಸಂಘಮಿತ್ರ ಎಕ್ಸ್‌ಪ್ರೆಸ್, ಬೆಂಗಳೂರು–ಕನ್ಯಾಕುಮಾರಿ–ಬೆಂಗಳೂರು ಐಸ್‌ಲ್ಯಾಂಡ್‌ ಎಕ್ಸ್‌ಪ್ರೆಸ್, ಬೆಂಗಳೂರು–ಎಂಜಿಆರ್ ಚೆನ್ನೈ ಸೆಂಟ್ರಲ್–ಬೆಂಗಳೂರು ಶತಾಬ್ದಿ ಎಕ್ಸ್‌ಪ್ರೆಸ್, ಬೆಂಗಳೂರು–ಎಂಜಿಆರ್ ಚೆನ್ನೈ ಸೆಂಟ್ರಲ್–ಬೆಂಗಳೂರು ಲಾಲ್‌ಬಾಗ್ ಎಕ್ಸ್‌ಪ್ರೆಸ್, ಎಂಜಿಆರ್‌ ಚೆನ್ನೈ ಸೆಂಟ್ರಲ್–ಮೈಸೂರು–ಎಂಜಿಆರ್‌ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್, ಬೆಂಗಳೂರು–ನಾಂದೇಡ್–ಬೆಂಗಳೂರು ಎಕ್ಸ್‌ಪ್ರೆಸ್, ಬೆಂಗಳೂರು– ದೆಹಲಿ ಸರೈ ರೊಹಿಲ್ಲಾ–ಬೆಂಗಳೂರು ಎಸಿ ದುರಂತೊ ಎಕ್ಸ್‌ಪ್ರೆಸ್, ಯಶವಂತಪುರ–ಕೊಚುವೇಲಿ–ಯಶವಂತಪುರ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್, ಯಶವಂತಪುರ–ಬಗಲ್ಪುರ–ಯಶವಂತಪುರ ಅಂಗಾ ಎಕ್ಸ್‌ಪ್ರೆಸ್.

ಪ್ರತಿಕ್ರಿಯಿಸಿ (+)