ಹುಬ್ಬಳ್ಳಿ ವಿಭಾಗದಲ್ಲಿ ಐದು ಡಿಪೊಗಳು, ವಿಭಾಗೀಯ ಕಾರ್ಯಾಗಾರ ಹಾಗೂ ವಿಭಾಗೀಯ ಕಚೇರಿಯಲ್ಲಿ ಒಟ್ಟು 2,004 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2023-24ನೇ ಸಾಲಿನಲ್ಲಿ ಪ್ರಯಾಣಿಕರು ಬಸ್ಸಿನಲ್ಲಿ ಬಿಟ್ಟುಹೋಗಿದ್ದ ಚಿನ್ನ-ಬೆಳ್ಳಿ ಆಭರಣ, ನಗದು ಹಿಂದಿರುಗಿಸಿದ್ದು, ಜಾತ್ರೆ ಸಮಯದಲ್ಲಿ ಹೆಚ್ಚು ಆದಾಯ ಸಂಗ್ರಹ, ಉತ್ತಮ ಹಾಜರಾತಿ, ಅಪರಾಧ–ಅಪಘಾತ ರಹಿತ ಹಾಗೂ ದೂರುಗಳಿಲ್ಲದ ಸೇವೆ ಮೊದಲಾದ ಮಾನದಂಡಗಳ ಆಧಾರದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.