ಭಾನುವಾರ, ಮೇ 22, 2022
24 °C

ಆರ್‌ಆರ್‌ಬಿ ಪರೀಕ್ಷೆಗೆ ವಿಶೇಷ ರೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ರೈಲ್ವೆ ನೇಮಕಾತಿ ಮಂಡಳಿಯ (ಆರ್‌ಆರ್‌ಬಿ) ವಿವಿಧ ಪರೀಕ್ಷೆಗಳು ಮೇ 9 ಮತ್ತು 10ರಂದು ನಡೆಯುತ್ತಿರುವುದರಿಂದ, ಅಭ್ಯರ್ಥಿಗಳಿಗೆ ಅನುಕೂಲವಾಗಲೆಂದು ನೈರುತ್ಯ ರೈಲ್ವೆಯು ವಿವಿಧ ನಗರಗಳಿಗೆ ವಿಶೇಷ ರೈಲುಗಳ ಸಂಚಾರ ವ್ಯವಸ್ಥೆ ಮಾಡಿದೆ.

ಹುಬ್ಬಳ್ಳಿಯಿಂದ ಔರಂಗಾಬಾದ್‌ಗೆ ಮೇ 7ರಂದು ರಾತ್ರಿ 8.45ಕ್ಕೆ ಹೊರಡುವ ರೈಲು ಮರುದಿನ ಸಂಜೆ 6ಕ್ಕೆ ತಲುಪಲಿದೆ. ಅಲ್ಲಿಂದ 9ರಂದು ರಾತ್ರಿ 10ಕ್ಕೆ ಬಿಡುವ ರೈಲು ಮರು ದಿನ ರಾತ್ರಿ 7ಕ್ಕೆ ಹುಬ್ಬಳ್ಳಿಗೆ ಬರಲಿದೆ.

ಮಂಗಳೂರು ಸೆಂಟ್ರಲ್‌ನಿಂದ 7ರಂದು ರಾತ್ರಿ 11ಕ್ಕೆ ಬೆಳಗಾವಿಗೆ ಹೊರಡುವ ರೈಲು 9ರಂದು ಬೆಳಿಗ್ಗೆ 3 ಗಂಟೆಗೆ ತಲುಪಲಿದೆ. ಬೆಳಗಾವಿಯಿಂದ 9ರಂದು ರಾತ್ರಿ 10ಕ್ಕೆ ಹೊರಡುವ ರೈಲು ಮರು ದಿನ ರಾತ್ರಿ 10.50ಕ್ಕೆ ಮಂಗಳೂರು ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು