ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ನಾಗರಿಕರಿಗೆ ಕ್ರೀಡಾಕೂಟದ ಸಂಭ್ರಮ

Last Updated 3 ಅಕ್ಟೋಬರ್ 2019, 15:32 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅಂಗವಿಕಲರ ಕಲ್ಯಾಣ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಗುರುವಾರ ಹಿರಿಯ ನಾಗರಿಕರಿಗಾಗಿ ಆಯೋಜಿಸಿದ್ದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ನಡೆಯಿತು.

ವಯಸ್ಸಿನ ಹಂಗಿಲ್ಲದೆ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ನಾ ಮುಂದು ತಾ ಮುಂದು ಎಂದು ಭಾಗವಹಿಸಿದ ಹಿರಿಯ ನಾಗರಿಕರ ಹುರುಪು ಎಳೆಯರನ್ನೂ ನಾಚಿಸುವಂತಿತ್ತು. ಓಟ, ನಡಿಗೆ, ಗುಂಡು ಎಸೆತ, ಚೆಂಡು ಎಸೆತ ಹಾಗೂ ಏಕ ಪಾತ್ರಾಭಿನಯ, ಜಾನಪದ ಗೀತೆ ಗಾಯನಗಳಲ್ಲಿ ತಮ್ಮ ವರಸೆ ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು.

ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಮಹಾವೀರ ಲಿಂಬ್ ಸೆಂಟರ್‌ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಮಹೇಂದ್ರ ಸಿಂಘಿ, ‘ಆಧುನಿಕ ಜಗತ್ತಿನಲ್ಲಿ ವಯಸ್ಸಾದ ತಂದೆ– ತಾಯಿಯನ್ನು ನಿರ್ಲಕ್ಷಿಸಲಾಗುತ್ತಿದೆ. ಪ್ರೀತಿಯಿಂದ ಸೇವೆ ಮಾಡುವುದರ ಬದಲು, ವೃದ್ಧಾಶ್ರಮಕ್ಕೆ ಕಳಿಸುವ ಪರಿಪಾಠ ಬೆಳೆಯುತ್ತಿದೆ. ವೃದ್ಧಾಶ್ರಮಗಳು ಹೆಚ್ಚುವುದು ಸಮಾಜಕ್ಕೆ ಒಳಿತಲ್ಲ’ ಎಂದರು.

ರಾಜ್ಯ ನಿವೃತ್ತ ಸರಕಾರಿ ಹಾಗೂ ಹಿರಿಯ ನಾಗರಿಕರ ಕೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಎ. ಪಾಟೀಲ ಮಾತನಾಡಿ, ‘ಹಿರಿಯ ನಾಗರಿಕರ ಸೌಲಭ್ಯಗಳನ್ನು ಪಡೆಯಲು ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಬೇಕು’ ಎಂದು ಹೇಳಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಕೆ.ಎಂ. ಅಮರನಾಥ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವನಿತಾ ಹೆಗಡೆ ಪ್ರಾರ್ಥನಿಸಿದರು. ಅಂಧ ಮಕ್ಕಳ ಶಿಕ್ಷಣ ಸಂಸ್ಥೆಯ ಐ.ಕೆ. ಲಕ್ಕುಂಡಿ, ಕಿಮ್ಸ್ ವೈದ್ಯಾಧಿಕಾರಿ ಡಾ. ಸುನೀಲ, ರಮಾ ನೀಲಪ್ಪಗೌಡರ ಹಾಗೂ ಮಹಾವೀರ ಕುಂದೂರ ಇದ್ದರು.

ಕ್ರೀಡಾಕೂಟದ ವಿಜೇತರು

ಪುರುಷರ ವಿಭಾಗ: 60ರಿಂದ 70 ವಯೋಮಿತಿಯ ಪುರುಷರ 100 ಮೀ. ಓಟದಲ್ಲಿ ಕೆ.ಬಿ. ಹುಬ್ಬಳ್ಳಿ ಪ್ರಥಮ, ಈರಪ್ಪ ಕಾಡಪ್ಪನವರ ದ್ವಿತೀಯ ಹಾಗೂ ಜಿ.ಸಿ. ಅರಳಿ ತೃತೀಯ ಸ್ಥಾನ. ಗುಂಡು ಎಸೆತದಲ್ಲಿ ಎಂ.ಎಂ. ಕುರಗೋಡಿ ಪ್ರಥಮ, ಈರಪ್ಪ ಕಾಡಪ್ಪನವರ ದ್ವಿತೀಯ, ಎಂ.ಎ.ಕಪ್ಪಸೂರ ತೃತೀಯ ಸ್ಥಾನ ಪಡೆದರು.

71ರಿಂದ 80 ವಯೋಮಿತಿಯ ಪುರುಷರ 75 ಮೀ. ಓಟದಲ್ಲಿ ಎಸ್.ಎಂ. ಸಲಕಿ ಪ್ರಥಮ, ಜಿ.ಸಿ. ಮೋರೆ ದ್ವಿತೀಯ, ಎ.ವಿ. ಶೇಖ್ ತೃತಿಯ. ಗುಂಡು ಎಸೆತದಲ್ಲಿ ಎಂ.ಸಿ. ರವದಿ ಪ್ರಥಮ, ಗುಡ್ಡದ ಮಠ ದ್ವಿತೀಯ, ಎಂ.ವಿ.ಶೇಖ್ ತೃತೀಯ ಸ್ಥಾನ ಗಳಿಸಿದರು. 81 ವಯೋಮಾನದವರ 200 ಮೀ. ನಡಿಗೆಯಲ್ಲಿ ಪಿ.ಎನ್. ಸಣ್ಣಮನಿ ಪ್ರಥಮ, ಪಿ.ಬಿ. ಹಿರೇಮಠ ದ್ವಿತೀಯ, ಮಲ್ಲಪ್ಪ ಬಿ. ಗಂಗಣ್ಣನವರ ತೃತೀಯ. ಕ್ರಿಕೆಟ್ ಬಾಲ್ ಎಸೆತದಲ್ಲಿ ಪಿ.ಬಿ. ಹಿರೇಮಠ ಪ್ರಥಮ, ಪಿ.ಎನ್. ಸಣ್ಣಮನಿ ದ್ವಿತೀಯ, ಆರ್.ಟಿ. ದೊಡ್ಡಮನಿ ತೃತೀಯ ಸ್ಥಾನ ಪಡೆದರು.

ಮಹಿಳಾ ವಿಭಾಗ: 60ರಿಂದ 70 ವಯೋಮಾನದವರ 400 ಮೀ. ನಡಿಗೆಯಲ್ಲಿ ಭವಾನಿ ಭಂಡಾರಿ ಪ್ರಥಮ, ನಿತಾ ಹೆಗಡೆ ದ್ವಿತೀಯ, ವಿಮಲಾ ಎಸ್. ಜಾಧವ ತೃತೀಯ. ಕ್ರಿಕೆಟ್ ಬಾಲ್ ಎಸೆತದಲ್ಲಿ ಭವಾನಿ ಭಂಡಾರಿ ಪ್ರಥಮ, ಪಾರ್ವತಿ ಸಂಕದಾಳ ದ್ವಿತೀಯ, ದೌಶಾದೇವಿ ಕುಸುಗಲ್ ತೃತೀಯ. 71ರಿಂದ 80 ವಯೋಮಾನದವರ 200 ಮೀ. ನಡಿಗೆಯಲ್ಲಿ ಅನಸೂಯಾ ಪ್ರಥಮ, ಕಮಲಾಕ್ಷಿ ದ್ವೀತಿಯ, ಎಸ್.ಎಂ. ಗೀತಾ ತೃತೀಯ. ಕ್ರಿಕೆಟ್ ಬಾಲ್ ಎಸೆತದಲ್ಲಿ ಕಮಲಾಕ್ಷ್ಮಿ ಹಿರೇಗೌಡರ ಪ್ರಥಮ, ಕೃಷ್ಣಾಬಾಯಿ ಕುಲಕರ್ಣಿ ದ್ವಿತೀಯ, ರಂಗರೇಜ ತೃತೀಯ ಸ್ಥಾನ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT