ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಕೂಟ: 34 ಪದಕ ಗೆದ್ದ ಹಿರಿಯ ನಾಗರಿಕರು

Last Updated 17 ಮೇ 2022, 16:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪ್ಯಾನ್ ಇಂಡಿಯಾ ಮಾಸ್ಟರ್ ಗೇಮ್ ಫೆಡರೇಷನ್ ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಹುಬ್ಬಳ್ಳಿಯ ಹಿರಿಯ ನಾಗರಿಕರ ಕ್ಷೇಮಾಭಿವೃದ್ದಿ ಸಂಘದ ಕ್ರೀಡಾಪಟುಗಳು 13 ಸ್ವರ್ಣ ಪದಕ, 12 ರಜತ ಪದಕ ಹಾಗೂ 9 ಕಂಚು ಸೇರಿದಂತೆ ಒಟ್ಟು 34 ಪದಕಗಳನ್ನು ಗಳಿಸಿದ್ದಾರೆ.

ಸ್ಪರ್ಧೆಯಲ್ಲಿ 60 ವರ್ಷ ಮೇಲ್ಪಟ್ಟ ತಲಾ ಐವರು ಪುರುಷರು ಹಾಗೂ ಮಹಿಳೆಯರು ಭಾಗವಹಿಸಿದ್ದು, ಮುಂದೆ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ.

ಪದಕ ವಿಜೇತರು: ಪುರುಷರ ವಿಭಾಗ:ಪಿ.ಬಿ. ಹಿರೇಮಠ (85 ವರ್ಷ ಮೇಲ್ಪಟ್ಟವರ ವಿಭಾಗ): 3 ಕಿ.ಮೀ. ನಡಿಗೆ, ಡಿಸ್ಕಸ್‌ ಥ್ರೋ, ಜಾವಲಿನ್ ಥ್ರೋ (3 ಸ್ವರ್ಣ ಪದಕ).ಹೇಮಗಿರಿ ಪಟ್ಟಣಶೆಟ್ಟಿ (70 ವರ್ಷ ಮೇಲ್ಪಟ್ಟ ವಿಭಾಗ): ತ್ರಿಫಲ್ ಜಂಪ್ 1ನೇ ಬಹುಮಾನ, ಜಾವಲಿನ್ ಥ್ರೋ 2ನೇ ಬಹುಮಾನ, ಮಿಕ್ಸ್ ರಿಲೆ 400 ಮೀ. ಓಟ 1ನೇ ಸ್ಥಾನ.ಜಿ.ಸಿ. ಹರಳಿ (65 ವರ್ಷ ಮೇಲ್ಪಟ್ಟು): ಮಿಶ್ರ ರಿಲೆ 1ನೇ ಸ್ಥಾನ, 100 ಮೀ. ಓಟ 2ನೇ ಸ್ಥಾನ, ಮಿಡ್ ಹರ್ಡಲ್ಸ್ ಮತ್ತು ಟ್ರಿಫಲ್ ಜಂಪ್ 3ನೇ ಸ್ಥಾನ.ಎಸ್.ಎಂ. ಸಲಕಿ (70 ವರ್ಷ ಮೇಲ್ಪಟ್ಟು): ಓಟ 400 ಮೀ. ಮತ್ತು ರಿಲೆ 100 ಮೀ. 1ನೇ ಸ್ಥಾನ, 800 ಮೀ. ಓಟ 3ನೇ ಸ್ಥಾನ. ರಾಜಶೇಖರ ತುರಮುರಿ (65 ವರ್ಷ ಮೇಲ್ಪಟ್ಟು) ಮಿಕ್ಸ್ ರಿಲೆ 1ನೇ ಸ್ಥಾನ, ಜಾವಲಿನ್ ಥ್ರೋ, 3 ಕಿ.ಮೀ. ರನ್ನಿಂಗ್, 400 ಮೀ. ರಿಲೆ 2ನೇ ಸ್ಥಾನ.

ಮಹಿಳಾ ವಿಭಾಗ:ಸುನಂದಾ ಬೆನ್ನೂರ (65 ವರ್ಷ ಮೇಲ್ಪಟ್ಟು): 400 ಮೀ. ಮಿಕ್ಸ್ ರಿಲೆ 1ನೇ ಸ್ಥಾನ, ಹ್ಯಾಮರ್ ಥ್ರೋ ಮತ್ತು 100 ಮೀ. ಓಟ 2ನೇ ಸ್ಥಾನ, ಜಾವಲಿನ್ ಥ್ರೋ 3ನೇ ಸ್ಥಾನ.ಪದ್ಮಾವತಿ ಸಂಗಮಿ (60 ವರ್ಷ ಮೇಲ್ಪಟ್ಟು): ಜಾವಲಿನ್ ಥ್ರೋ ಮತ್ತು 200 ಮೀ. ಓಟ 2ನೇ ಸ್ಥಾನ, ಡಿಸ್ಕ್ ಥ್ರೋ 3ನೇ ಸ್ಥಾನ.ಭವಾನಿ ಭಂಡಾರಿ (70 ವರ್ಷ ಮೇಲ್ಪಟ್ಟು) ಲಾಂಗ್ ಜಂಪ್, ಮಿಕ್ಸ್ ರಿಲೆ 1ನೇ ಸ್ಥಾನ, ಜಾವಲಿನ್ ಥ್ರೋ 2ನೇ ಸ್ಥಾನ, ಡಿಸ್ಕ್ ಥ್ರೋ 3 ನೇ ಸ್ಥಾನ.ಲಕ್ಷ್ಮೀ ಮಂಗಳವೇಡೆ (70 ವರ್ಷ ಮೇಲ್ಪಟ್ಟು) 200 ಮೀ. ರನ್ನಿಂಗ್ 2ನೇ ಸ್ಥಾನ, ಜಾವಲಿನ್ ಥ್ರೋ ಮತ್ತು ಡಿಸ್ಕ್ ಥ್ರೋ 3ನೇ ಸ್ಥಾನ.

ಅಭಿನಂದನೆ:ಪದಕ ಗೆದ್ದ ಸಂಘದ ಸದಸ್ಯರಿಗೆ ನಗರದಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷರಾದ ಬಿ.ಎ. ಪಾಟೀಲ, ಎಂ.ಪಿ. ಕುಂಬಾರ, ಎ.ಎಫ್. ರೇಶ್ಮಿ, ಆರ್. ಎಸ್. ಹಾಲಿವಾಡಿಮಠ, ಈರಣ್ಣ ಕಾಡಪ್ಪನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT