ಶುಕ್ರವಾರ, ಮೇ 27, 2022
21 °C

‘ಕನಸು ನನಸಾಗಿಸುವತ್ತ ಹೆಜ್ಜೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಳ್ನಾವರ: ಆರ್ಥಿಕವಾಗಿ ಹಿಂದುಳಿದವರಿಗೆ ಸುಲಭವಾಗಿ ಸಾಲ ನೀಡಲು ದಿವಂಗತ ಮುಜಾಹಿದ್ ಕಾಂಟ್ರ್ಯಾಕ್ಟರ್ ಅವರ ಮುಂದಾಳತ್ವದಲ್ಲಿ ಹುಟ್ಟುಹಾಕಿದ ಇಲ್ಲಿನ ದಿ ಮದೀನಾ ಕೋ ಆಫ್ ಕ್ರೆಡಿಟ್ ಸೊಸಾಯಿಟಿ ಪ್ರಗತಿ ಪಥದಲ್ಲಿ ಸಾಗಿದೆ. ಅಂದುಕೊಂಡ ಅಭಿವೃದ್ಧಿಯ ಕನಸು ನನಸು ಮಾಡಲು ದಿಟ್ಟ ಹೆಜ್ಜೆ ಇಟ್ಟಿದೆ ಎಂದು ‌ಸಹಕಾರಿಯ ಅಧ್ಯಕ್ಷ ನದೀಮ ಕಾಂಟ್ರ್ಯಾಕ್ಟರ್ ಹೇಳಿದರು.

ಸ್ಥಳೀಯ ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಶಾದಿಮಹಲ್‌ನಲ್ಲಿ ಈಚೆಗೆ ನಡೆದ 28ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು ‘ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರಕ್ಕೆ ಸಹಕಾರಿ ವಲಯ ತನ್ನದೆ ಆದ ಕೊಡುಗೆ ನೀಡಿದೆ. ಮುಜಾಹಿದ್ ಕಾಂಟ್ರ್ಯಾಕ್ಟರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ಮುನ್ನಡೆಯುತ್ತಿದ್ದೇವೆ’ ಎಂದರು.

‘ಸಹಕಾರಿಯು ₹43 .17 ಕೋಟಿಗೂ ಹೆಚ್ಚು ವ್ಯವಹಾರ ಮಾಡಿದೆ. ₹8.25 ಕೋಟಿಗೂ ಹೆಚ್ಚು ಸಾಲ ನೀಡಿದೆ. ₹87.50 ಲಕ್ಷ ಷೇರು ಬಂಡವಾಳವಿದ್ದು, ₹35.15 ಲಕ್ಷ ನಿವ್ವಳ ಲಾಭ ಗಳಿಸಿದೆ’ ಎಂದರು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕರ ಬಹುಮಾನ ನೀಡಲಾಯಿತು. 

ಅಂಜುಮನ್‌ ಸಂಸ್ಥೆ ಅಧ್ಯಕ್ಷ ಫಹೀಮ್ ಕಾಂಟ್ರ್ಯಾಕ್ಟರ್, ಸಹಕಾರಿಯ ಉಪಾಧ್ಯಕ್ಷ ಆರ್.ಎಚ್. ಮೀರಜಕರ, ನಿರ್ದೇಶಕರಾದ ನೂರಅಹ್ಮದ್ ಕಿತ್ತೂರ, ಇಮಾಮಸಾಬ ಕಿತ್ತೂರ, ಫಾರೂಕ ಅಂಬಡಗಟ್ಟಿ, ಸಲೀಂ ತಾಳಿಕೋಟಿ, ನಬಿಸಾಬ ಮುಜಾವರ್, ಜೋಹದಅಲಿ ಕಾಮನಗಾರ, ಇಮಾಮಹುಸೇನ ಮುಲ್ಲಾ, ಶಬ್ಬೀರಅಹ್ಮದ್ ಮುಲ್ಲಾ, ಶಮಿವುಲ್ಲಾ ಮಕಾನದಾರ, ಎಸ್.ಎ. ಜಮಾದಾರ, ಎಫ್. ಎ. ಅಂಚಿ, ಹನಮಂತ ವಡ್ಡರ, ಮಹಾದೇವ ಮೇದಾರ ಹಾಗೂ ಕಾರ್ಯದರ್ಶಿ ಎ.ಎ. ಮುಲ್ಲಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು