ಹುಬ್ಬಳ್ಳಿ: ಧಾರವಾಡದ ತಡಸಿನಕೊಪ್ಪದಲ್ಲಿ ನಡೆದ ಫೈರಿಂಗ್ ಪ್ರಕರಣದ ಹಿಂದೆ ಭೂ ಮಾಫಿಯಾದವರ ಕೈವಾಡವಿದ್ದು, ಅದಕ್ಕೆ ರಾಜಕಾರಣಿಗಳ ಮತ್ತು ಪೊಲೀಸರ ಬೆಂಬಲವಿರುವ ಶಂಕೆ ವ್ಯಕ್ತವಾಗುತ್ತಿದೆ. ಪ್ರಾಮಾಣಿಕ ತನಿಖೆಯಿಂದ ಸತ್ಯಾಸತ್ಯತೆ ಹೊರಗೆ ಬರಬೇಕು ಎಂದು ಹು–ಧಾ ಮಹಾನಗರ ಜಿಲ್ಲಾ ಬಿಜೆಪಿ ಘಟಕ ಆಗ್ರಹಿಸಿದೆ.

ಬುಧವಾರ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪಕ್ಷದ ಕಾರ್ಯಕರ್ತರು, ‘ಹುಬ್ಬಳ್ಳಿ–ಧಾರವಾಡ ಮಹಾನಗರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಪೊಲೀಸ್ ಕಮಿಷನರ್ ಕಚೇರಿ ಗೂಂಡಾಗಳ ಅಡ್ಡೆಯಾಗುತ್ತಿದೆ. ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳ ನಿರ್ಲಕ್ಷ್ಯದಿಂದ ರಾಜ್ಯದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿದೆ’ ಎಂದು ಆರೋಪಿಸಿದರು. ಸಿಎಂ, ಡಿಸಿಎಂ ಹಾಗೂ ಕಮಿಷನರ್ ಎನ್.ಶಶಿಕುಮಾರ್ ಅವರ ಭಾವಚಿತ್ರವನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ತಡಸಿನಕೊಪ್ಪದಲ್ಲಿ ನಡೆದ ಗಲಾಟೆ ವೇಳೆ ಪಿಸ್ತೂಲ್ನಿಂದ ಯಾರು ಗುಂಡು ಹಾರಿಸಿದ್ದಾರೆ ಎನ್ನುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿ, ಜಗಜ್ಜಾಹೀರಾಗಿದೆ. ಆದರೆ, ಪೊಲೀಸ್ ಕಮಿಷನರ್ ತನಗೆ ಮಾಹಿತಿಯಿಲ್ಲ ಎನ್ನುವ ಹೇಳಿಕೆ ನೀಡುತ್ತಾರೆ. ಪ್ರಕರಣದ ನಂತರ ಕಮಿಷನರ್ ಕಚೇರಿಗೆ ಯಾರ್ಯಾರು ಬಂದು ಹೋಗಿದ್ದರು ಎಂದು ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದರೆ, ಸತ್ಯಾಸತ್ಯತೆ ಹೊರಗೆ ಬರುತ್ತದೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

‘ಸಿಸಿಬಿಯಲ್ಲಿ ಈವರೆಗೆ ಎಷ್ಟು ತನಿಖೆಗಳಾಗಿವೆ ಎನ್ನುವ ಕುರಿತು ಸಿಐಡಿ ತನಿಖೆಗೆ ಒಪ್ಪಿಸಬೇಕು. ಕಮಿಷನರ್ ಕಚೇರಿಯಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದ್ದು, ಇತ್ತೀಚಿಗೆ ಕಮಿಷನರ್ ಅವರ ವರ್ತನೆ ಸಹ ಅನುಮಾನ ಹುಟ್ಟಿಸುತ್ತಿದೆ. ಅನೇಕ ಪೊಲೀಸರು ಅವರ ಕೈಕೆಳಗೆ ಕೆಲಸ ಮಾಡಲು ಆಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಅವರ ವಿರುದ್ಧ ಪಕ್ಷಾತೀತವಾಗಿ ಆಕ್ರೋಶ ವ್ಯಕ್ತಪಡಿಸಿದರೂ, ಅವರು ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ’ ಎಂದು ಕಿಡಿಕಾರಿದರು.

‘ಬಿಹಾರ, ಉತ್ತರ ಪ್ರದೇಶವನ್ನು ಗೂಂಡಾ ರಾಜ್ಯ ಎನ್ನುತ್ತಿದ್ದೆವು. ಅಂತಹ ಪರಿಸ್ಥಿತಿ ಈಗ ಅವಳಿನಗರದಲ್ಲಿ ನಿರ್ಮಾಣವಾಗಿದೆ. ಗೃಹ ಇಲಾಖೆ, ಗೃಹ ಸಚಿವರು ಇದ್ದಾರೆಯೋ ಇಲ್ಲವೋ ತಿಳಿಯುತ್ತಿಲ್ಲ. ಶಾಂತಿ ನೆಲೆಸಿದ್ದ ನಗರದಲ್ಲಿ ಗೂಂಡಾ ಸಂಸ್ಕೃತಿ ಹೆಚ್ಚುತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಆರೋಪಿಸಿದರು.

ಮುಖಂಡರಾದ ಶಿವು ಮೆಣಸಿನಕಾಯಿ, ಪ್ರೀತಮ್ ಅರಕೇರಿ, ನಾರಾಯಣ ಜರತಾಘರ, ಸೀಮಾ ಲದ್ವಾ ಮಾತನಾಡಿದರು. ಅನೂಪ್ ಬಿಜವಾಡ, ಸಂತೋಷ ಅರಕೇರಿ, ದತ್ತಮೂರ್ತಿ ಕಲಕುರ್ಣಿ, ಪ್ರಭು ನವಲಗುಂದಮಠ, ವೀಣಾ ಬರದ್ವಾಡ, ರೂಪಾ ಶೆಟ್ಟಿ, ಮಂಜುನಾಥ ಹೆಬಸೂರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-24-1239637206

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.