ಮಂಗಳವಾರ, ಜನವರಿ 25, 2022
28 °C

ಹುಬ್ಬಳ್ಳಿ: ಬೀದಿಬದಿ ಮಹಿಳಾ ವ್ಯಾಪಾರಿಗೆ ಲಸಿಕೆ ಹಾಕಲು ಆರೋಗ್ಯ ಸಿಬ್ಬಂದಿ ಹರಸಾಹಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೋವಿಡ್ ‌ಲಸಿಕೆ ಪಡೆಯಲು ಹಿಂದೇಟು ಹಾಕಿದ ಇಲ್ಲಿನ ಜನತಾ ಬಜಾರ್ ಮಾರುಕಟ್ಟೆಯ ಬೀದಿಬದಿ ಮಹಿಳಾ ವ್ಯಾಪಾರಿಗೆ ಆರೋಗ್ಯ ಸಿಬ್ಬಂದಿ ಹರಸಾಹಸ ಪಟ್ಟು ಲಸಿಕೆ ಹಾಕಿದ ವಿಡಿಯೊ ಸಾಮಾಜಿಕ ತಾಣದಲ್ಲಿ ಬುಧವಾರ ವೈರಲ್ ಆಗಿದೆ.

ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಕಾಯಿಪಲ್ಲೆ ವ್ಯಾಪಾರ ಮಾಡುತ್ತಿದ್ದ ಮಹಿಳೆಗೆ ಲಸಿಕೆ ಪಡೆಯುವಂತೆ ಅರೋಗ್ಯ ‌ಇಲಾಖೆ ಸಿಬ್ಬಂದಿ ಮೊದಲು‌ ಮನವೊಲಿಸಿದರೂ, ಅವರು ನಿರಾಕರಿಸಿದರು. ಬಳಿಕ‌ ಬಲವಂತವಾಗಿ ಲಸಿಕೆ ಹಾಕಿದ ದೃಶ್ಯ ವಿಡಿಯೊದಲ್ಲಿದೆ.

ಲಸಿಕೆ ಹಾಕುತ್ತಿದ್ದಾಗ ವ್ಯಾಪಾರಿ ಜೋರಾಗಿ ಚೀರಾಡಿದರು. ಆರೋಗ್ಯ ಸಿಬ್ಬಂದಿ ಸಮಾಧಾನ ಪಡಿಸಿದರು ಎಂದು ಸ್ಥಳೀಯರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು