ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಂದೂಗಳ ಮೇಲಿನ ದೂರು ಹಿಂಪಡೆಯಿರಿ’

‘ಹಿಂದೂಗಳ ಮೇಲಿನ ದೂರು ಹಿಂಪಡೆಯಿರಿ’
Last Updated 10 ಮಾರ್ಚ್ 2018, 7:46 IST
ಅಕ್ಷರ ಗಾತ್ರ

ಕಾರವಾರ: ‘ಹೊನ್ನಾವರ ತಾಲ್ಲೂಕಿನ ಕರ್ಕಿನಾಕಾ ಬಳಿ ಅಕ್ರಮವಾಗಿ ಗೋ ಸಾಗಣೆ ಮಾಡುತ್ತಿದ್ದ ಆರೋಪದಡಿ ಇಬ್ಬರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ, 150 ಹಿಂದೂ ಕಾರ್ಯಕರ್ತರ ಮೇಲೆ ದಾಖಲಿಸಿರುವ ದೂರನ್ನು ಹಿಂತೆಗೆದುಕೊಳ್ಳಬೇಕು’ ಎಂದು ಬಿಜೆಪಿ ಜಿಲ್ಲಾ ಘಟಕದ ವಕ್ತಾರ ರಾಜೇಶ ನಾಯಕ ಒತ್ತಾಯಿಸಿದರು.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ಬುಧವಾರ ರಾತ್ರಿ ಗೋಕರ್ಣದ ಮಾದನಗೇರಿಯಿಂದ ಭಟ್ಕಳದ ಕಡೆಗೆ ಇಬ್ಬರು ವ್ಯಕ್ತಿಗಳು ಬೊಲೆರೊ ವಾಹನದಲ್ಲಿ ಅಕ್ರಮವಾಗಿ ತಮ್ಮ ಯಜಮಾನನ ಸೂಚನೆ ಮೇರೆಗೆ ಗೋವುಗಳನ್ನು ಸಾಗಾಟ ಮಾಡುತ್ತಿದ್ದರು. ಹೊನ್ನಾವರ– ಕುಮಟಾದ ಕೆಲವು ಸ್ಥಳೀಯರು ಕರ್ಕಿ ಬಳಿ ವಾಹನ ತಡೆದು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೇ ವೇಳೆ ಕುತೂಹಲದಿಂದಾಗಿ ಅಲ್ಲಿ ಜನರ ಗುಂಪು ಸೇರತೊಡಗಿದ್ದರಿಂದ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಅಲ್ಲಿಂದ ಓಡಲು ಯತ್ನಿಸಿ ಅವರು ಕೆಳಕ್ಕೆ ಬಿದ್ದಿದ್ದಾರೆ. ಇದರಿಂದಾಗಿ ಅವರು ಗಾಯಗೊಂಡಿದ್ದಾರೆ’ ಎಂದರು.

‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ರಾಜ್ಯದ ಕರಾವಳಿ ಪ್ರದೇಶದಲ್ಲಿ ಗೋ ಕಳ್ಳ ಸಾಗಣಿ ಯತೇಚ್ಛವಾಗಿ ನಡೆಯುತ್ತಿದೆ. ಅವರಿಗೆ ಕಾನೂನಿನ ಭಯವೇ ಇಲ್ಲ. ಭಟ್ಕಳ ತಾಲ್ಲೂಕಿನಲ್ಲಿನ ಅಕ್ರಮ ಕಸಾಯಿಖಾನೆ ಮಾಫಿಯಾಗಳನ್ನು ಹದ್ದುಬಸ್ತಿನಲ್ಲಿಡಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ಆರೋಪಿಸಿದರು.

‘ಪೊಲೀಸ್ ತನಿಖೆಗಳಲ್ಲಿಕಾಂಗ್ರೆಸ್ ರಾಜಕಾರಣಿಗಳು ಮೂಗು ತೂರಿಸುವುದನ್ನು ಬಿಡಬೇಕು. ಅಲ್ಲದೇ ಈಗ ಬಂಧನಕ್ಕೆ ಒಳಗಾಗಿರುವ ಎಲ್ಲ ಅಮಾಯಕ ಹಿಂದೂ ಯುವಕರನ್ನು ಬಿಡುಗಡೆ ಮಾಡಬೇಕು. ಸುಳ್ಳು ಮೊಕದ್ದಮೆಗಳನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಪೊಲೀಸರ ಪಕ್ಷಪಾತ ಧೋರಣೆ ವಿರೋಧಿಸಿ ಬಿಜೆಪಿ ಪ್ರತಿಭಟನೆ ಕೈಗೊಳ್ಳಲಿದೆ’ ಎಂದು ಎಚ್ಚರಿಸಿದರು.

‘ಇದನ್ನೇ ನೆಪವಾಗಿಟ್ಟುಕೊಂಡ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದೂ ಕಾರ್ಯಕರ್ತರು ಹಾಗೂ ಗೋ ಪ್ರೇಮಿಗಳ ವಿರುದ್ಧ ಕೊಲೆಯತ್ನದಂತಹ ಗಂಭೀರ ಆರೋಪ ಹೊರಿಸಿ, ಅವರನ್ನು ಜೈಲಿಗೆ ಕಳುಹಿಸಲು ಯತ್ನಿಸುತ್ತಿದೆ. 7 ಮಂದಿಯ ಹೆಸರಿನ ಮೇಲೆ ಇನ್ನಿತರರು ಎಂದು ಸೇರಿಸಿ ಒಟ್ಟು 100ರಿಂದ 150 ಮಂದಿ ವಿರುದ್ಧ ಪೊಲೀಸರು ಸೆಕ್ಷನ್‌ 307 ರಡಿ ಪ್ರಕರಣ ದಾಖಲಿಸಿರುವುದು ಖಂಡನೀಯ’ ಎಂದು ಆರೋಪಿಸಿದರು.

‘ಎಸ್ಪಿ ಅವರು ಘಟನೆ ಕುರಿತು ತನಿಖೆಗೆ ವಿಶೇಷ ತಂಡವನ್ನು ರಚಿಸಿದ್ದಾರೆ ಎಂದು ತಿಳಿದು ಬಂದಿದೆ. ಜತೆಗೆ ಭಟ್ಕಳದಲ್ಲಿರುವ ಎಲ್ಲ ಕಸಾಯಿಖಾನೆ ಮಾಫಿಯಾಗಳನ್ನು ತಕ್ಷಣ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು’ ಎಂದೂ ಒತ್ತಾಯಿಸಿದರು.

ಗ್ರಾಮೀಣ ಘಟಕದ ಅಧ್ಯಕ್ಷ ಮಾರುತಿ ನಾಯ್ಕ, ನಗರ ಘಟಕದ ಅಧ್ಯಕ್ಷ ಮನೋಜ ಭಟ್, ಕುಮಟಾ ಮಂಡಳದ ಅಧ್ಯಕ್ಷ ಕುಮಾರ ಮಾರ್ಕಾಂಡೇಯ, ಪ್ರಮುಖರಾದ ಗಣಪತಿ ಉಳ್ವೇಕರ, ಕಿಶನ್ ಕಾಂಬ್ಳೆ, ನಾಗೇಶ್ ಬುರ್ಡೇಕರ್ ಇದ್ದರು.

**

ಹಲ್ಲೆಗೊಳಗಾದವರು ದೂರು ನೀಡಲು ಹೋದರೆ, ಅವರನ್ನೂ ಕೂಡ ಪೊಲೀಸರು 150 ಮಂದಿ ಜತೆ ಸೇರಿಸಿ ಬಂಧಿಸುತ್ತಿದ್ದಾರೆ. ಇದು ಖಂಡನೀಯ.

–ರಾಜೇಶ ನಾಯಕ, ಬಿಜೆಪಿ ಜಿಲ್ಲಾ ಘಟಕದ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT