ಬುಧವಾರ, ಡಿಸೆಂಬರ್ 2, 2020
25 °C
puc

ಹುಬ್ಬಳ್ಳಿ: ಅಂತರ ಕಾಯ್ದುಕೊಳ್ಳದ ವಿದ್ಯಾರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಪಿಯುಸಿ ದ್ವಿತೀಯ ಇಂಗ್ಲಿಷ್‌ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳು ಅಂತರ ಕಾಯ್ದುಕೊಳ್ಳದೆ ಸಾಲಾಗಿ ನಿಂತಿರುವುದು ನಗರದ ಹಲವಾರು ಕಾಲೇಜುಗಳ ಮುಂದೆ ಕಂಡು ಬಂದಿತು.

ಬೆಳಿಗ್ಗೆ 10.15ಕ್ಕೆ ಪರೀಕ್ಷೆ ಆರಂಭವಾಗಲಿದ್ದರೂ, ವಿದ್ಯಾರ್ಥಿಗಳು ಬೆಳಿಗ್ಗೆ 8.30ರಿಂದಲೇ ಸಾಲಿನಲ್ಲಿ ನಿಂತಿದ್ದರು. ಆದರೆ, ಅಂತರ ಕಾಯ್ದುಕೊಂಡಿರಲಿಲ್ಲ. ಒತ್ತೊತ್ತಾಗಿಯೇ ನಿಂತಿದ್ದರು. ಬಹುತೇಕರು ಮಾಸ್ಕ್‌ ಧರಿಸಿದ್ದು ಕಂಡು ಬಂದಿತು.

ಬಹು ದಿನಗಳ ಬಳಿಕ ಸ್ನೇಹಿತರು ಸಿಕ್ಕಿದ್ದರಿಂದ ಗುಂಪು, ಗುಂಪಾಗಿ ಚರ್ಚಿಸುತ್ತಿದ್ದು ಕಾಣಿಸಿತು.ಅವರನ್ನು ತಡೆಯಲು ಯಾವ ಅಧಿಕಾರಿಗಳು ಇದ್ದದ್ದು ಕಂಡು ಬರಲಿಲ್ಲ.

ಥರ್ಮಲ್‌ ಸ್ಕ್ರೀನಿಂಗ್‌ ಮಾಡಿ, ಸ್ಯಾನಿಟೈಸರ್ ಹಾಕಿಯೇ ವಿದ್ಯಾರ್ಥಿಗಳನ್ನು ಒಳ ಬಿಡಲಾಗುತ್ತಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು