ಸುಮಲತಾ ಕಾಂಗ್ರೆಸ್ ವಿರುದ್ಧವಾಗಿ ಹೋಗುವುದಿಲ್ಲವೆಂಬ ವಿಶ್ವಾಸವಿದೆ: ಡಿಕೆಶಿ

ಮಂಗಳವಾರ, ಮಾರ್ಚ್ 26, 2019
22 °C
ರೇವಣ್ಣ ಸುಮಲತಾ ವಿರುದ್ದ ವೈಯಕ್ತಿಕ ಟೀಕೆ ಮಾಡಿರುವು ಸರಿಯಲ್ಲ: ದೇಶಪಾಂಡೆ

ಸುಮಲತಾ ಕಾಂಗ್ರೆಸ್ ವಿರುದ್ಧವಾಗಿ ಹೋಗುವುದಿಲ್ಲವೆಂಬ ವಿಶ್ವಾಸವಿದೆ: ಡಿಕೆಶಿ

Published:
Updated:

ಹುಬ್ಬಳ್ಳಿ: ಸುಮಲತಾ ಅಂಬರೀಷ್ ಕಾಂಗ್ರೆಸ್ ಮೂಲಕವಾಗಿ ಮಂಡ್ಯದಿಂದ ರಾಜಕೀಯ ಪ್ರವೇಶಿಸಲು ಇಚ್ಛಿಸಿದ್ದಾರೆ. ಆದರೆ, ಈ ಕ್ಷೇತ್ರವನ್ನು ಈಗಾಗಲೇ ಜೆಡಿಎಸ್ ಗೆ ಬಿಟ್ಟುಕೊಡಲಾಗಿದೆ. ಹೀಗಾಗಿ ಸುಮಲತಾ ಕಾಂಗ್ರೆಸ್ ವಿರುದ್ಧವಾಗಿ ಹೋಗುವುದಿಲ್ಲ ಎಂಬ ವಿಶ್ವಾಸ ಇದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಹೇಳಿದರು.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಲತಾ ಅವರ ಮನವೊಲಿಸಲು ಪಕ್ಷದಿಂದ ನನಗೆ ಹೇಳಿರಲಿಲ್ಲ. ಆದರೂ ಕೂಡ ಅವರೊಂದಿಗೆ ಚರ್ಚಿಸಿದ್ದೇನೆ ಎಂದರು.

ಮಹದಾಯಿ ನ್ಯಾಯಮಂಡಳಿಯ ಅಂತಿಮ ತೀರ್ಪನ್ನು ಕೇಂದ್ರ ಸರ್ಕಾರ ಗೆಜೆಟ್ ನಲ್ಲಿ ಪ್ರಕಟಿಸಿದ ತಕ್ಷಣ ಕಾಮಗಾರಿಯನ್ನು ಆರಂಭಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಆದರೆ, ಕೇಂದ್ರ ಸರ್ಕಾರ ಗೆಜೆಟ್ ನೋಟಿಪಿಕೇಶನ್ ಮಾಡದೇ ನಿರಾಸೆ ಮಾಡಿತು. ಹೀಗಾಗಿ ನಾವು ಅಫೀಲ್ ಹೋಗಿದ್ದೇವೆ. ಅಂತಿಮ ತೀರ್ಪು ಬಂದು, ಗೆಜೆಟ್  ನೋಟಿಪಿಕೇಶನ್ ಆದ ಬಳಿಕ ಯೋಜನೆ ಅನುಷ್ಠಾನಕ್ಕೆ ಬದ್ಧರಿದ್ದೇವೆ ಎಂದು ಹೇಳಿದರು.

ಮಹದಾಯಿಗೆ ಗೋವಾ ಸರ್ಕಾರವು ₹100 ಕೋಟಿ ಮೊತ್ತದ ಹೊಸ ನೀರಾವರಿ ಯೋಜನೆ ರೂಪಿಸುತ್ತಿರುವ ಬಗ್ಗೆ ಗಮನಕ್ಕೆ ಬಂದಿಲ್ಲ. ವ್ಯರ್ಥವಾಗಿ ಹರಿದುಹೋಗುವ ನೀರು ಬಳಕೆಗೆ ಗೋವಾ ಸರ್ಕಾರ ಯೋಜನೆ ರೂಪಿಸುವುದರಿಂದ ನಮ್ಮ ರಾಜ್ಯಕ್ಕೆ ಯಾವುದೇ ಸಮಸ್ಯೆ ಆಗದು. ಎರಡು ರಾಜ್ಯದ ವಿವಾದಕ್ಕೂ ಇದಕ್ಕೂ ಸಂಬಂಧವಿಲ್ಲ. ಆದರೂ ತಜ್ಞರೊಂದಿಗೆ ಚರ್ಚಿಸುತ್ತೇನೆ ಎಂದರು.

ರೇವಣ್ಣ ಸುಮಲತಾ ವಿರುದ್ದ ವೈಯಕ್ತಿಕ ಟೀಕೆ ಮಾಡಿರುವು ಸರಿಯಲ್ಲ: ದೇಶಪಾಂಡೆ

ಸಚಿವ ಎಚ್.ಡಿ.ರೇವಣ್ಣ ಅವರು ಸುಮಲತಾ ವಿರುದ್ಧ ವೈಯಕ್ತಿಕ ಟೀಕೆ ಮಾಡಿರುವುದು ಸರಿಯಲ್ಲ. ಆ ರೀತಿ ಅವರು ಮಾತನಾಡಬಾರದಿತ್ತು ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಕಾಂಗ್ರೆಸ್ ಮೇಲಿನ ಅಭಿಮಾನದಿಂದ ಅವರು ಟಿಕೆಟ್ ಕೇಳಿದ್ದಾರೆ. ಆದರೆ, ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಈಗಾಗಲೇ  ಬಿಟ್ಟು ಕೊಡಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !