ಶನಿವಾರ, ನವೆಂಬರ್ 28, 2020
22 °C
ವಿವಿಧೆಡೆ ಕರ್ನಾಟಕ ರಾಜ್ಯೋತ್ಸವ, ಸಾಧಕರಿಗೆ ಸನ್ಮಾನ

‘ಕನ್ನಡದ ಉಳಿವು; ಆತ್ಮಾವಲೋಕನ ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕನ್ನಡ ಉಳಿಸಿ, ಬೆಳೆಸಲು ನಾವೆಲ್ಲರೂ ಬದ್ಧರಾಗಿರಬೇಕು. ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಸಿದ್ಧಪ್ಪ ಉಡಿಕೇರಿ ಹೇಳಿದರು.

ಸೋಮವಾರ ಇಲ್ಲಿನ ಕಾಡಸಿದ್ಧೇಶ್ವರ ಕಲಾ ಮತ್ತು ಎಚ್.ಎಸ್. ಕೋತಂಬ್ರಿ ವಿಜ್ಞಾನ ಸಂಸ್ಥೆಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಮಾತೃಭಾಷೆಯಲ್ಲಿ ಶಿಕ್ಷಣ ಪಡೆದಾಗ ಮಾತ್ರ ಸಂಪೂರ್ಣ ಜ್ಞಾನ ಸಿಗುತ್ತದೆ. ಇದರ ಅರ್ಥ ಇಂಗ್ಲಿಷ್‌ ದ್ವೇಷಿಸಬೇಕು ಎಂದಲ್ಲ. ಕನ್ನಡವನ್ನು ಹೆಚ್ಚು ಬಳಸುವ ಮೂಲಕ ಬೆಳೆಸಬೇಕಾಗಿದೆ’ ಎಂದರು.

ಕಾಲೇಜು ಒಕ್ಕೂಟದ ಕಾರ್ಯಾಧ್ಯಕ್ಷೆ ಪ್ರೊ. ಪ್ರಭಾ ಎನ್. ಮುನವಳ್ಳಿ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ವಿಜಯಶ್ರೀ ಜಿ. ಹಿರೇಮಠ, ಕನ್ನಡ ಉಪನ್ಯಾಸಕ ಡಾ.ಆರ್.ಐ. ಹರಕುಣಿ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಸುಭಾಸ. ಎನ್. ಎಮ್ಮಿ ಇದ್ದರು.

ಕರ್ನಾಟಕ ಸಂಗ್ರಾಮ ಸೇನೆ ಹಾಗೂ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಉದ್ಯಮಿ ಸಂತೋಷ ಆರ್‌. ಶೆಟ್ಟಿ, ಧಾರವಾಡ ರಂಗಾಯಣ ಮಾಜಿ ನಿರ್ದೇಶಕ ಸುಭಾಷ್ ನರೇಂದ್ರ, ಮೋತಿಲಾಲ್ ರಾಠೋಡ್, ಶಿವಾನಂದ ನಾಗೂರ, ರಂಜನಾ ಪಾಂಚಾಳ, ಮಂಜುಳಾ ಕಾಮಧೇನು, ರಾಮಚಂದ್ರ ಪತ್ತಾರ, ಡಾ. ಸುರೇಶ್ ಕಳಸಣ್ಣವರ, ವೀಣಾ ಅಠವಲೆ, ಸುನಂದಾ ಬೆನ್ನೂರ, ಮಂಜುನಾಥ ಮೆಣಸಿನಕಾಯಿ ಇದ್ದರು.

ಗ್ರೋ ಗ್ರೀನ್‌: ರಾಜ್ಯೋತ್ಸವ ಪ್ರಶಸ್ತಿ ಪಡೆದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಶೆಟ್ಟರ್ ಮತ್ತು ಕಲಾವಿದ ಎಂ.ಜಿ. ವಾಚೇದಮಠ ಅವರನ್ನು ಗ್ರೋ ಗ್ರೀನ್ ಪೆಡಲ್ಲರ್ಸ್ ವತಿಯಿಂದ ಪಾಲಿಕೆಯ ವಿದ್ಯಾನಗರದ ಉದ್ಯಾನದಲ್ಲಿ ಸನ್ಮಾನಿಸಲಾಯಿತು. ಕೋವಿಡ್‌ ವಾರಿಯರ್ಸ್‌ ಪೊಲೀಸ್‌ ಸಿಬ್ಬಂದಿ ಕನ್ನಡ ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು.

ಪೆಡಲ್ಲರ್ಸ್ ಅಧ್ಯಕ್ಷ ಬಾಲಚಂದ್ರ ಡಂಗನವರ, ಪೊಲೀಸ್‌ ಇನ್‌ಸ್ಪೆಕ್ಟರ್ ಆನಂದ ಒನಕುದುರೆ, ಶಿವಾನಂದ ಬನ್ನಿಕೊಪ್ಪ, ನಬಿ ನಾಯಕವಾಡಿ, ಚಂದ್ರಶೇಖರ ಏರಿಮನಿ, ಚೆನ್ನು ದೇವಕ್ಕಿ, ಪ್ರವೀಣ ಪಾಟೀಲ, ರಾಜು ರಾಜೋಳಿ, ಕೃತಿಕ ಕಠಿಗಾರ, ಕಿರಣ ಶೆಟ್ಟಿ, ಅಭಿಷೇಕ ಹೂಲಿ, ವೃಷಭ ಡಂಗನವರ, ಆಯುಷ್, ಕೃಷ್ಣ ತಂಬೂರ ಇದ್ದರು.

ಎಸ್.ಜೆ.ಎಂ.ವಿ.ಎಸ್. ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಕನ್ನಡ ವಿಭಾಗ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜಂಟಿಯಾಗಿ ರಾಜ್ಯೋತ್ಸವ ಆಚರಣೆ ನಡೆಯಿತು.

ಕಾಲೇಜಿನ ಪ್ರಾಚಾರ್ಯ ಡಾ.ಎಲ್.ಆರ್‌. ಅಂಗಡಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ.ಎಸ್.ನವಲಗುಂದ, ಸಂಗೀತ ವಿಭಾಗದ ಮುಖ್ಯಸ್ಥೆ ಡಾ. ಜ್ಯೋತಿಲಕ್ಷ್ಮೀ ಡಿ.ಪಿ., ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ಅನುರಾಧಾ ಹೊಸಕೋಟೆ, ಡಾ. ಸಿಸಿಲಿಯಾ ಡಿಕ್ರೂಜ್‌, ಡಾ. ಮಹದೇವ ಹರಿಜನ, ಪ್ರೊ. ಶಿವಕುಮಾರ ಬನ್ನಿಹಟ್ಟಿ, ಪ್ರೊ. ಶಿವಕುಮಾರ ಪ್ರಭಯ್ಯನವರಮಠ, ಡಾ. ದಾಕ್ಷಾಯಣಿ ಉಡಕೇರಿ, ಡಾ. ಸುಪ್ರಿಯಾ ಮಲಶೆಟ್ಟಿ, ಶಿಲ್ಪಾ ವಗ್ಗರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.