ಶನಿವಾರ, ಜನವರಿ 25, 2020
16 °C
ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ನವೀಕರಣ

ಈಜುಕೊಳ ಉದ್ಘಾಟನೆ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಬರೋಬ್ಬರಿ ಎರಡು ವರ್ಷಗಳ ಹಿಂದೆ ಮುಚ್ಚಿದ್ದ ಪಾಲಿಕೆಯ ಈಜುಕೊಳ ಈಗ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ನವೀಕರಣಗೊಂಡಿದ್ದು, ಭಾನುವಾರ (ಜ.5) ಉದ್ಘಾಟನೆಯಾಗಲಿದೆ.

ಡೈವಿಂಗ್‌ ಸೌಲಭ್ಯ ಹೊಂದಿರುವ ಉತ್ತರ ಕರ್ನಾಟಕದ ಏಕೈಕ ಈಜುಕೊಳ ಎನ್ನುವ ಹೆಗ್ಗಳಿಕೆ ಹೊಂದಿರುವ ಇಲ್ಲಿನ ಈಜುಕೊಳವನ್ನು ನೀರಿನ ಅಭಾವ ಹಾಗೂ ನವೀಕರಣದ ಕಾರಣಕ್ಕಾಗಿ 2018ರ ಜನವರಿಯಲ್ಲಿ ಮುಚ್ಚಲಾಗಿತ್ತು. ಈಗ ₹3.03 ಕೋಟಿ ವೆಚ್ಚದಲ್ಲಿ ನವೀಕರಣಗೊಂಡಿದೆ.  ಅಂದಾಜು ಆರು ಲಕ್ಷ ಬ್ರಿಟನ್‌ ಗ್ಯಾಲನ್‌ (27.2 ಲಕ್ಷ ಲೀಟರ್‌) ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ.

ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಚಿಟಗುಪ್ಪಿ ಆಸ್ಪತ್ರೆಯಲ್ಲಿ ₹3.6 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸ್ಟಾರ್ಟ್‌ ಹೆಲ್ತ್‌, ಲ್ಯಾಮಿಂಗ್ಟನ್‌ ಬಾಲಕ ಹಾಗೂ ಬಾಲಕಿಯರ ಶಾಲೆಯಲ್ಲಿ ₹1.17 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸ್ಮಾರ್ಟ್‌ ಸ್ಕೂಲ್‌ ಯೋಜನೆಗಳ ಉದ್ಘಾಟನೆ ಕೂಡ ಇದೇ ವೇಳೆ ಜರುಗಲಿದೆ.

ಇದೇ ವೇಳೆ ಬೆಂಗೇರಿ ಮಾರುಕಟ್ಟೆ, ಉಣಕಲ್‌ ಮಾರುಕಟ್ಟೆ, ಬಹುವಾಹನಗಳ ನಿಲುಗಡೆ ಮತ್ತು ಪುಟಾಣಿ ರೈಲು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು