ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಫೋನಿ: ಎರಡು ಮಾಡೆಲ್‌ ಬಿಡುಗಡೆ

Last Updated 8 ಮಾರ್ಚ್ 2022, 15:51 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ಕಾಟನ್‌ ಕೌಂಟಿ ಕ್ಲಬ್‌ನಲ್ಲಿ ನಡೆದ ಸಿಂಫೋನಿ ಲಿಮಿಟೆಡ್‌ನ ವಿತರಕರ ಸಭೆಯಲ್ಲಿ ಹೊಸದಾಗಿ ಸಿದ್ಧಪಡಿಸಲಾದ ಕೂಲರ್‌ ಹಾಗೂ ಫ್ಯಾನ್‌ ಬಿಡುಗಡೆ ಮಾಡಲಾಯಿತು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಂಪನಿಯ ಸಿಇಒ ಅಮಿತ್‌ ಕುಮಾರ್, ಏರ್‌ ಕೂಲರ್‌ಗಳ ಉತ್ಪಾದನೆಯಲ್ಲಿ ಸಿಂಫೋನಿ ಮುಂಚೂಣಿಯಲ್ಲಿದೆ. 60 ಬಗೆಗೆ ಕೂಲರ್‌ ಹಾಗೂ ಫ್ಯಾನ್‌ಗಳನ್ನು ಹೊಂದಿದೆ ಎಂದರು.

ವಿಶ್ವದ 60ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ವ್ಯಾಪಾರ ಮಾಡಲಾಗುತ್ತಿದೆ. ಮೊದಲ ಎರಡು ಕೋವಿಡ್‌ ಅಲೆಗಳೂ ಬೇಸಿಗೆ ಸಂದರ್ಭದಲ್ಲಿಯೇ ಬಂದಿದ್ದರಿಂದ ವ್ಯಾಪಾರಕ್ಕೆ ತೊಂದರೆಯಾಗಿತ್ತು. ಈಗ ಚೇತರಿಸಿಕೊಂಡಿದೆ. ಗ್ರಾಹಕರ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹೊಸದಾಗಿ ಎರಡು ಮಾಡೆಲ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಡ್ಯುಯಟ್‌ ಕೂಲಿಂಗ್‌ ಫ್ಯಾನ್‌ ಅನ್ನು ಕೂಲರ್‌ ಹಾಗೂ ಟವರ್‌ ಫ್ಯಾನ್‌ ಆಗಿ ಬಳಸಬಹುದಾಗಿದೆ. 180 ಡಿಗ್ರಿಯಲ್ಲಿ ತಿರುಗಲಿದೆ. ಅದರಲ್ಲೂ ರಿಮೋಟ್‌ ಹಾಗೂ ವಿಥೌಟ್‌ ರಿಮೋಟ್‌ ಎರಡು ಬಗೆಯಲ್ಲಿವೆ. ಸರೌಂಡಿಂಗ್‌ ಟವರ್‌ ಫ್ಯಾನ್‌ ಎಂಬ ಮತ್ತೊಂದು ಉತ್ಪನ್ನ ಬಿಡುಗಡೆ ಮಾಡುತ್ತಿದ್ದು, 25 ಅಡಿಯವರೆಗೆ ಗಾಳಿ ಬರುತ್ತದೆ. ಬ್ಲೇಡ್‌ಲೆಸ್‌ ಆಗಿರುವುದರಿಂದ ಮಕ್ಕಳಿದ್ದರೂ ಯಾವುದೇ ರೀತಿ ಅಪಾಯಕಾರಿಯಲ್ಲಿ. ಸಂಪೂರ್ಣ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಹುಬ್ಬಳ್ಳಿ ಟ್ರಿನಿಟಿ ಮಾರ್ಕೇಟಿಂಗ್‌ ಮಾಲೀಕ ವಿಲ್ಸನ್‌ ಮಾತನಾಡಿ, ಸಿಂಫೋನಿಯು ವಿತರಕರನ್ನು ತನ್ನ ಅವಿಭಾಜ್ಯ ಅಂಗವೆಂದು ಭಾವಿಸುತ್ತದೆ ಎಂದರು. ಉಪಾಧ್ಯಕ್ಷ ಕುಮಾರ ಪಂಕಜ್‌, ಹುಬ್ಬಳ್ಳಿ ಶಾಖೆ ಮುಖ್ಯಸ್ಥ ಆರೀಫ್‌ ಹುಸೇನ್‌ ಶೇಖ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT