ಆಯುಕ್ತರಿಗೆ ಶಿಕ್ಷಕಿ ಬರೆದ ಪತ್ರದಲ್ಲಿ ಸಾಲು, ಸಾಲು ತಪ್ಪುಗಳು

7

ಆಯುಕ್ತರಿಗೆ ಶಿಕ್ಷಕಿ ಬರೆದ ಪತ್ರದಲ್ಲಿ ಸಾಲು, ಸಾಲು ತಪ್ಪುಗಳು

Published:
Updated:
Deccan Herald

ಧಾರವಾಡ: ಶಿಕ್ಷಕಿಯೊಬ್ಬರು ಆರೋಗ್ಯಕ್ಕೆ ಸಂಬಂಧಿಸಿದಂತೆ ವರ್ಗಾವಣೆ ರದ್ದುಪಡಿಸುವಂತೆ ಕೋರಿ ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತರಿಗೆ ಬರೆದ ಪತ್ರದಲ್ಲಿ ಸಾಕಷ್ಟು ತಪ್ಪುಗಳಿದ್ದು, ಈ ಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಹುಬ್ಬಳ್ಳಿಯ ಮಂಟೂರು ರಸ್ತೆಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎಸ್‌.ಎನ್.ಬಾಳೇಕುಂದ್ರಿ ಎಂಬುವವರು ಈ ಪತ್ರ ಬರೆದಿದ್ದು, ಹನ್ನೊಂದು ಸಾಲುಗಳ ಈ ಪತ್ರದಲ್ಲಿ ಹನ್ನೊಂದು ಕಾಗುಣಿತ ದೋಷ ಇದೆ. ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರ ಹೆಸರನ್ನು ತಪ್ಪಾಗಿ ಬರೆದಿರುವ ಶಿಕ್ಷಕಿ, ಒತ್ತಕ್ಷರ, ವಾಕ್ಯ ರಚನೆಯಲ್ಲೂ ಸಾಕಷ್ಟು ತಪ್ಪು ಮಾಡಿದ್ದಾರೆ. 

‘ತಾನು ಗರ್ಭಧರಿಸಿರುವುದರಿಂದ ಜನಿಸುವ ಮಗುವಿನ ಭವಿಷ್ಯದ ಚಿಂತೆ ಇದೆ’ ಎಂದು ಬರೆದಿರುವ ಈ ಪತ್ರದ ಎಲ್ಲಾ ತಪ್ಪುಗಳನ್ನು ಗುರುತು ಮಾಡಿ, ’ನನಗೆ ಶಾಲಾ ಮಕ್ಕಳ ಭವಿಷ್ಯದ ಚಿಂತೆ ಇದೆ’ ಎಂದು ಬರೆದು ಹಿರೇಮಠ ಅವರು ಸಹಿ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ‘ಪತ್ರ ನೋಡಿ ಶಿಕ್ಷಕಿಯೊಬ್ಬರು ಇಷ್ಟೊಂದು ತಪ್ಪುಗಳಿರುವ ಪತ್ರ ಬರೆಯಲು ಸಾಧ್ಯವೇ ಎಂದು ಆಶ್ಚರ್ಯವಾಯಿತು. ಜತೆಗೆ ಅವರ ಪಾಠ ಕೇಳುವ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಚಿಂತೆಯಾಯಿತು. ಆದರೆ ಈ ಪತ್ರವನ್ನು ಅವರೇ ನೇರವಾಗಿ ತಂದು ನೀಡಿಲ್ಲ. ಹೀಗಾಗಿ ಇದು ಅವರೇ ಬರೆದಿದ್ದೇ ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ. ಒಂದೊಮ್ಮೆ ನಿಜವಾಗಿದ್ದಲ್ಲಿ ಅವರ ಶೈಕ್ಷಣಿಕ ಅರ್ಹತೆ ಕುರಿತು ಪರಿಶೀಲಿಸಬೇಕಾಗುತ್ತದೆ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !