ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇ ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಸನ್ಮಾನ

Last Updated 10 ಸೆಪ್ಟೆಂಬರ್ 2020, 16:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ವತಿಯಿಂದ ನಗರದ ಸಿದ್ಧಾರೂಢ ಸ್ವಾಮಿ ಪ್ರೌಢಶಾಲೆಯಲ್ಲಿ ಬುಧವಾರ ಶಿಕ್ಷಕರ ದಿನ ಆಚರಿಸಲಾಯಿತು. ಸಿದ್ಧಾರೂಢ ಶಾಲೆ ಮತ್ತು ಗುರುದೇವ ವಿದ್ಯಾಸಮಿತಿ ಕನ್ನಡ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಎನ್‌ಎಸ್‌ಯುಐ ಜಿಲ್ಲಾ ಘಟಕದ ಕಾರ್ಯದರ್ಶಿ ಹಾಗೂ ಸಿದ್ಧಾರೂಢ ಶಾಲೆ ಹಳೆ ವಿದ್ಯಾರ್ಥಿ ರೋಹಿತ್‌ ಘೋಡಕೆ ’ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ಪ್ರಜೆಗಳಾಗಿ ರೂಪಿಸುವ ಶಿಕ್ಷಕರ ಶ್ರಮಕ್ಕೆ ಯಾವ ಪುರಸ್ಕಾರವೂ ಸಾಟಿಯಾಗುವುದಿಲ್ಲ. ಗುರು ಎಂದರೆ ವ್ಯಕ್ತಿಯಷ್ಟೇ ಅಲ್ಲ; ಸುಜ್ಞಾನದೆಡೆಗೆ ಕರೆದೊಯ್ಯವ ಶಕ್ತಿ’ ಎಂದರು.

ಸಿದ್ಧಾರೂಢ ಶಾಲೆಯ ಮುಖ್ಯ ಶಿಕ್ಷಕ ಪಿ.ಜಿ. ಹಿರೇಮಠ ಮಾತನಾಡಿ ‘ನಮ್ಮ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಈಗ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕಲಿಸಿದ ಶಿಕ್ಷಕರನ್ನು ನೆನಪಿನಲ್ಲಿಟ್ಟುಕೊಂಡು ಗೌರವ ಸಲ್ಲಿಸಿದ್ದು ಖುಷಿ ನೀಡಿದೆ’ ಎಂದರು.

ಅಂತಹ ಟುಟೋರಿಯಲ್‌ ಅಧ್ಯಕ್ಷ ನಂದಕುಮಾರ ಪಾಟೀಲ, ಶಿಕ್ಷಕರಾದ ಆರ್.ಸಿ. ಸರ್ವಂದ, ಶ್ರೀನಿವಾಸ ವಾಲಿ, ಎಲ್.ಎಸ್. ಹೊಸಮನಿ, ಕೆ.ಆರ್. ಹೆಗಡೆಕರ್, ಕೆ.ಐ. ಡವಳೆ, ಆರ್.ವಿ. ಮಾಲ್ಲದಿನಿ, ಶಕುಂತಲಾ ಪಾಟೀಲ, ಎಸ್.ಜಿ.ಕಲಾಲ, ಜೆ.ಎನ್. ದೇವಮಿತ್ರಾ, ಎಸ್.ಕೆ. ಸೊನ್ನಸ, ಸಿ.ಎಸ್.ಹೊಟಗಿ, ಎಂ.ಸಿ. ಬಿರಾದಾರ, ಆರ್.ಎನ್. ದೊಡಮನಿ, ಎಂ.ಬಿ. ಪಾಟೀಲ, ಆರ್.ಎಚ್. ತಳವಾರ, ಎಚ್.ಕರಬಸಪ್ಪ, ಎಂ. ಕಂಬಾರ, ಪ್ರಭು ತಳವಾರ, ಎಂ.ಹಡಪದ ಅವರನ್ನು ಸನ್ಮಾನಿಸಲಾಯಿತು.

ಗುರುದೇವ ವಿದ್ಯಾಸಮಿತಿ ಕಾರ್ಯದರ್ಶಿ ನಂದಕುಮಾರ ಘೋಡಕೆ, ಧರ್ಮದರ್ಶಿ ಜಿ.ಆರ್.ರಾಜೇಂದ್ರ, ಮಹಾಂತೇಶ ಪಟ್ಟಣದ ಹಾಗೂ ಎನ್‌ಎಸ್‌ಯುಐ ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT