ಸೋಮವಾರ, ಜುಲೈ 4, 2022
23 °C

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ‘ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವವರಿಗಾಗಿ ಬೆಳಗಾವಿಯ ಟಾರ್ಗೆಟ್‌ ಕೋಚಿಂಗ್ ಸೆಂಟರ್‌ ಜುಲೈ 29ರಂದು ಮುಕ್ತ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಉಚಿತ ಕಾರ್ಯಾಗಾರ ಹಮ್ಮಿಕೊಂಡಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಕೃಷ್ಣ ಗುದಗೊಪ್ಪ ಹೇಳಿದರು.

‘ಕೆಎಎಸ್, ಪಿಎಸ್‌ಐ, ಪೊಲೀಸ್ ಪರೀಕ್ಷೆ ಕುರಿತು ಕಾರ್ಯಾಗಾರ ಜರುಗಲಿದೆ. ಜತೆಗೆ ಸ್ಪರ್ಧೆಯೂ ನಡೆಯಲಿದ್ದು, ಇದರಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ₹5555, ದ್ವಿತೀಯ ಬಹುಮಾನ ₹3333, ತೃತೀಯ ಬಹುಮಾನ ₹2222 ನೀಡಲಾಗುತ್ತಿದೆ. ಸಮಾಧಾನಕರ ಬಹುಮಾನವಾಗಿ 5 ಜನಕ್ಕೆ ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕ, ಹೆಚ್ಚಿನ ಅಂಕ ಗಳಿಸಿದ 20 ಜನರಿಗೆ ಉಚಿತ ತರಬೇತಿ, 50 ಜನರಿಗೆ ಪ್ರವೇಶ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುವುದು’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ನಗರದ ಸಪ್ತಾಪುರ ಬಳಿ ಇರುವ ಸತ್ಯಸಾಯಿ ಸಮುದಾಯ ಭವನದಲ್ಲಿ ಬೆಳಿಗ್ಗೆ 9.30ರಿಂದ ಈ ಕಾರ್ಯಾಗಾರ ನಡೆಯಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವವರಿಗೆ ಧಾರವಾಡದಲ್ಲಿ ಸಾಕಷ್ಟು ತರಬೇತಿ ಕೇಂದ್ರಗಳಿವೆ. ಆದರೆ ಟಾರ್ಗೆಟ್ ಕೋಚಿಂಗ್ ಸೆಂಟರ್‌ ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಬೆಳಗಾವಿಯಿಂದ ಧಾರವಾಡಕ್ಕೆ ಬರುವವರಿಗೆ ಈ ಕೇಂದ್ರ ಅನುಕೂಲಕರವಾಗಲಿದೆ’ ಎಂದರು.

‘ಕೇಂದ್ರದಲ್ಲಿ ಎಲ್ಲಾ ರೀತಿಯ ಸೌಲಭ್ಯವಿದ್ದು, ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಅನಾಥ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಪಡೆಯಲಾಗುತ್ತಿಲ್ಲ. ತಂದೆ ಇಲ್ಲದ ಅಭ್ಯರ್ಥಿಗಳಿಂದ ಅರ್ಧ ಶುಲ್ಕ ಮಾತ್ರ ಪಡೆಯಲಾಗುತ್ತಿದೆ’ ಎಂದು ಕೃಷ್ಣ ತಿಳಿಸಿದರು.

ಶಿವಾನಂದ, ಸಂದೀಪ, ಸದಾನಂದ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು