ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಸಪ್ತಾಹ ಸಮಾರೋಪ

Last Updated 25 ಜನವರಿ 2022, 5:19 IST
ಅಕ್ಷರ ಗಾತ್ರ

ಹುಬ್ಬಳ್ಳಿ:ವಿವೇಕಾನಂದರ 159ನೇ ಜನ್ಮದಿನದ ಅಂಗವಾಗಿ ಐಇಎಂಎಸ್ ಮಹಾವಿದ್ಯಾಲಯದಲ್ಲಿ ನಡೆದ ಯುವ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸೋಮವಾರ ನಡೆಯಿತು.

ಎಬಿವಿಪಿ ರಾಜ್ಯ ಘಟಕದ ಅಧ್ಯಕ್ಷ ಪ್ರೊ. ಡಾ. ವೀರೇಶ ಬಾಳಿಕಾಯಿ ಮಾತನಾಡಿ ‘ವಿವೇಕಾನಂದರನ್ನು ಒಂದೇ ದೃಷ್ಟಿಕೋನದಲ್ಲಿ ನೋಡಲು ಸಾಧ್ಯವಿಲ್ಲ. ಅವರ ವಿದ್ವತ್ತು ಎಲ್ಲ ರಂಗಗಳಲ್ಲಿ ಹರಡಿತ್ತು. ಶಿಕ್ಷಣ, ಕ್ಷೇತ್ರ, ಅಧ್ಯಾತ್ಮಿಕ, ವೈಚಾರಿಕ ಹಾಗೂ ಸಾಂಸ್ಕೃತಿಕ ಸೇರಿದಂತೆ ಹಲವಾರು ರಂಗಗಳಲ್ಲಿ ಅವರ ನಡೆ, ನುಡಿ ಸದಾಕಾಲ ಆದರ್ಶ’ ಎಂದರು.

ಮಹಾವಿದ್ಯಾಲಯದ ನಿರ್ದೇಶಕ ಡಾ. ವೀರಣ್ಣ ಡಿ.ಕೆ. ಸ್ವಾಮಿ ಮಾತನಾಡಿ ’ ವಿವೇಕಾನಂದರು 159 ವರ್ಷಗಳ ನಂತರವೂ ಯುವಕರಿಗೆ ಆದರ್ಶವಾಗಿರುವುದು ಪವಾಡವೆಂದು ಭಾವಿಸಬಹುದು. ಇಂದಿನ ಯುವಕರು ವಿವೇಕಾನಂದರನ್ನು ಒಂದು ವ್ಯಕ್ತಿಯಾಗಿ ನೋಡದೆ ಶಕ್ತಿಯಾಗಿ ನೋಡಬೇಕು‘ ಎಂದರು.

ನಿವೇದಿತ ದೊಡ್ಡಗೌಡರ್, ಅವಿನಾಶ್ ರೆಡ್ಡಿ, ಸೌಮ್ಯ ಹಿರೇಮಠ, ಹೇಮಂತ ಅವರಿಗೆ ಬಹುಮಾನ ವಿತರಿಸಲಾಯಿತು ಅವಿನಾಶ್ ರೆಡ್ಡಿ, ಸೌಮ್ಯಾ, ಅರುಣ, ನಿವೇದಿತಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT