ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಝಗಮಗಿಸಿದ ಬೆಳಕು; ‘ಫ್ಯಾಷನ್‌’ ಅನಾವರಣ

ಗ್ಲಾಮ್‌ ಆ್ಯಂಡ್‌ ಗ್ಲಿಟ್ಜ್ ಫ್ಯಾಷನ್‌ ಶೋ
Last Updated 5 ಫೆಬ್ರುವರಿ 2022, 4:21 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಝಗಮಗಿಸುತ್ತಿದ್ದ ವಿದ್ಯುತ್‌ ಬೆಳಕು, ವಿವಿಧ ಬಣ್ಣಗಳ ಉಡುಗೆ ತೊಟ್ಟು ಆಕರ್ಷಿಸುತ್ತಿದ್ದ ಯುವತಿಯರು ಹಾಗೂ ಮಕ್ಕಳು. ಸಾಂಪ್ರದಾಯಿಕ ಬಟ್ಟೆಗಳನ್ನು ತೊಟ್ಟು ಬಂದವರಿಗೆ ಚಪ್ಪಾಳೆಯ ಕರತಾಡನ.

ದೇಶದಅತಿದೊಡ್ಡ ಖಾಸಗಿ ಎಫ್‌ಎಂ ನೆಟ್‌ವರ್ಕ್‌ಗಳಲ್ಲಿ ಒಂದಾದ ರೆಡ್ ಎಫ್ ಎಂ 93.5 ಹುಬ್ಬಳ್ಳಿ-ಧಾರವಾಡ ಜನರಿಗೆ ‘ಓಷನ್‌ ಪರ್ಲ್‌ ರೆಸಾರ್ಟ್‌’ನಲ್ಲಿ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ‘ರೆಡ್‌ ಎಫ್‌ಎಂ ಗ್ಲಾಮ್‌ ಆ್ಯಂಡ್‌ ಗ್ಲಿಟ್ಜ್‌–2022’ ಫ್ಯಾಷನ್‌ ಶೋ ಸ್ಪರ್ಧೆಯಲ್ಲಿ ಕಂಡು ಬಂದ ಚಿತ್ರಣವಿದು.

ಶೀತಲ್‌ ಗೋಲ್ಡ್‌ ಚಿನ್ನಾಭರಣ ಮಳಿಗೆ ಪ್ರಾಯೋಜಕತ್ವ ಹಾಗೂ ‘ಪ್ರಜಾವಾಣಿ’ ಸೇರಿದಂತೆ ವಿವಿಧ ಸಂಸ್ಥೆಗಳ ಪಾಲುದಾರಿಕೆ ಜೊತೆ ಆಯೋಜಿಸಲಾಗಿದ್ದ ಫ್ಯಾಷನ್‌ ಶೋ ಕಾರ್ಯಕ್ರಮದಲ್ಲಿ ವಿವಿಧ ವಯಸ್ಸಿನವರು ಪಾಲ್ಗೊಂಡಿದ್ದರು. ಕೆಲವರು ಚೂಡಿದಾರ ಧರಿಸಿ ರ‍್ಯಾಂಪ್‌ ವಾಕ್‌ ಮಾಡಿ ಗಮನ ಸೆಳೆದರು. ವಿವಿಧ ಕಲಾ ತಂಡಗಳ ನೃತ್ಯ ಆಕರ್ಷಿಸಿತು. ಅದರಲ್ಲೂ ಮಕ್ಕಳು ವಿಭಿನ್ನ ಶೈಲಿಯಿಂದ ನಡೆದುಕೊಂಡು ಬಂದು ‘ಫೋಸ್‌’ ಕೊಡುತ್ತಿದ್ದ ರೀತಿ ಪೋಷಕರು ಹಾಗೂ ಗಣ್ಯರ ಗಮನ ಸೆಳೆಯಿತು.

ಚಲನಚಿತ್ರ ಕಲಾವಿದರು, ಅವಳಿ ನಗರಗಳ ವಿವಿಧ ಕ್ಷೇತ್ರಗಳ ಗಣ್ಯರು,ಎ7 ಎಂಟರ್‌ಟೈನ್‌ಮೆಂಟ್‌ ನೇತೃತ್ವದಲ್ಲಿ ಜೀವಾ ಸ್ಟುಡಿಯೋದ ಪ್ರಸಿದ್ಧ ಮಾಡೆಲ್‌ಗಳು ಫಲ್ಗುಣಿಗೌಡ ಅವರ ನೃತ್ಯಸಂಯೋಜನೆ, ಡಿಸೈನರ್‌ ಮೋಹನ್‌ಗೌಡ ಅವರ ವೈವಿಧ್ಯಮಯ ವಿನ್ಯಾಸದ ಉಡುಪು ಹಾಗೂ ಬೆಂಗಳೂರಿನ ಡಿಜೆ ಡಿಆರ್‌ ಎ ಅವರ ಸಂಗೀತಕ್ಕೆ ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು.

ರೆಡ್ ಎಫ್ ಎಂ 93.5 ನಿರೂಪಕಿ ರುಬಿನಾ ಅವರು ನೆರೆದವರನ್ನು ಮೋಜಿನ ಪ್ರಶ್ನೆಗಳನ್ನು ಕೇಳಿ ಕಾರ್ಯಕ್ರಮದ ಕಳೆ ಹೆಚ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT