ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿಯಿಂದ ತಿರಂಗಾ ಬೈಕ್ ರ‍್ಯಾಲಿ

Published 11 ಆಗಸ್ಟ್ 2024, 15:55 IST
Last Updated 11 ಆಗಸ್ಟ್ 2024, 15:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬಿಜೆಪಿ ಹು–ಧಾ ಮಹಾನಗರ ಜಿಲ್ಲಾ ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಬೃಹತ್‌ ತಿರಂಗಾ ಬೈಕ್‌ ರ‍್ಯಾಲಿಗೆ  ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನಗರದ ದುರ್ಗದಬೈಲ್‌ನಲ್ಲಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ನಮ್ಮ ದೇಶ, ರಾಷ್ಟ್ರಧ್ವಜ, ಸ್ವಾತಂತ್ರ್ಯ ಹೋರಾಟದ ಇತಿಹಾಸ ಕುರಿತು ಜಾಗೃತಿ ಮೂಡಿಸುವುದು ಹಾಗೂ ರಾಷ್ಟ್ರೀಯ ಚಿಹ್ನೆಗಳೊಂದಿಗೆ ಜನರ ಭಾವನಾತ್ಮಕ ಸಂಬಂಧ ಬೆಳೆಸುವ ಉದ್ದೇಶದಿಂದ ರ‍್ಯಾಲಿ ನಡೆಸಲಾಗಿದೆ. ಆಗಸ್ಟ್‌ 15ರಂದು ಪ್ರತಿ ಕಟ್ಟಡದ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಎಲ್ಲರೂ ದೇಶ ಪ್ರೇಮ ಮೆರೆಯಬೇಕು’ ಎಂದು ಹೇಳಿದರು.

ಜೋಶಿ ತ್ರಿವರ್ಣ ಧ್ವಜ ಹಿಡಿದು ಸ್ಕೂಟರ್‌ನಲ್ಲಿ ಸ್ವಲ್ಪ ದೂರ ಸಾಗಿದರು. ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ ಸಾಥ್‌ ನೀಡಿದರು. ಪಕ್ಷದ ಮುಖಂಡರು, ಕಾರ್ಯಕರ್ತರು ಚನ್ನಮ್ಮ ವೃತ್ತದವರೆಗೆ ರ‍್ಯಾಲಿ ನಡೆಸಿದರು. ವಾರಾಂತ್ಯ, ಶ್ರಾವಣ ಮಾಸದ ಅಂಗವಾಗಿ ಹೆಚ್ಚು ಜನರು ಮಾರುಕಟ್ಟೆಯಲ್ಲಿ ಸೇರಿದ್ದರು. ವಾಹನ ದಟ್ಟಣೆಯೂ ಹೆಚ್ಚಿತ್ತು.

ಮುಖಂಡರಾದ ಅಶೋಕ ಕಾಟವೆ, ಡಾ.ಕ್ರಾಂತಿ ಕಿರಣ್, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಪ್ರಭು ನವಲಗುಂದಮಠ, ಸತೀಶ ಶೇಜ್ವಾಡ್ಕರ್, ಸಿದ್ದು ಮೊಗಲಿಶೆಟ್ಟರ್,  ರವಿ ನಾಯಕ್, ರಾಜು ಜರತಾರಘರ, ಅನೂಪ್ ಬಿಜವಾಡ, ಜಗದೀಶ್ ಬಳ್ಳಾನವರ, ಶಿವಯ್ಯ ಹಿರೇಮಠ, ರಂಗಾ ಬದ್ಧಿ, ಉಮಾ ಮುಕುಂದ, ಮೇನಕಾ ಹುರಳಿ, ಪ್ರತಿಭಾ ಪವಾರ್, ಸುನೀತಾ ಚವ್ವಾಣ್, ಮೇಘನಾ ಶಿಂದೆ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT