ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣವಿಗೆ ಮರಣೋತ್ತರ ರಾಷ್ಟ್ರಕವಿ ಪ್ರಶಸ್ತಿ ಘೋಷಿಸಲಿ: ತೋಂಟದಾರ್ಯ ಶ್ರೀ

Last Updated 16 ಫೆಬ್ರುವರಿ 2022, 8:44 IST
ಅಕ್ಷರ ಗಾತ್ರ

ಧಾರವಾಡ: ನಾಡಿನ ಶ್ರೇಷ್ಠ ಕವಿ ನಾಡೋಜ ಡಾ. ಚನ್ನವೀರ ಕಣವಿ ಅವರು, ಪ್ರಾಚೀನ ಸಾಹಿತ್ಯ ಹಾಗೂ ಆಧುನಿಕ ಕಾಲದ ಪರಂಪರೆಯ ಕೊಂಡಿಯಾಗಿ ಸಾಹಿತ್ಯ ಕೃಷಿ ಮಾಡಿದ್ದರು. ಇಂತಹ ಸಾಧನೆ ಮಾಡಿದ್ದ ಅವರು, ಶಿಸ್ತು ಸೌಜನ್ಯದ ವ್ಯಕ್ತಿಯಾಗಿದ್ದರು. ಅವರ ನಾಡು ನುಡಿಯ ಸೇವೆ ಮತ್ತು ಕಾಳಜಿ ಅನನ್ಯವಾಗಿದೆ ಎಂದು ಗದುಗಿನ ತೋಂಟದಾರ್ಯ ಮಠದ ಡಾ. ತೊಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಇಲ್ಲಿನ ಕಲ್ಯಾಣ ನಗರದಲ್ಲಿರುವ ಕಣವಿ ಅವರ ನಿವಾಸದಲ್ಲಿ ಪಾರ್ಥೀವ ಶರೀರದ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಕರ್ನಾಟಕ ಎಂಬ ನಾಮಕರಣ ಮಾಡಿದ ಸಂದರ್ಭವನ್ನು ಕಣವಿ ಅವರು, ತಮ್ಮ ಕವಿತೆಯ ಮೂಲಕ ಜನರಿಗೆ ತಿಳಿಸಿದ್ದರು ಎಂದು ನೆನೆದರು.

ಕನ್ನಡ ಮಾದ್ಯಮದಲ್ಲಿ ಮಕ್ಕಳಿಗೆ ಶಿಕ್ಷಣ‌ ದೊರೆಯಬೇಕು ಎಂದು ಆಶಯ ಹೊಂದಿದ್ದರು. ಸರ್ಕಾರ ಅವರ ಆಶಯವನ್ನು ಈಡೇರಿಸುವ ಕೆಲಸ ಮಾಡಬೇಕು. ಕಣವಿ ಅವರಿಗೆ ಮರಣೋತ್ತರ ರಾಷ್ಟ್ರಕವಿ ಪ್ರಶಸ್ತಿ ಘೋಷಣೆ ಮಾಡಬೇಕು. ಕರ್ನಾಟಕ ರತ್ನ ಪ್ರಶಸ್ತಿಯನ್ನು ಸಹ ನೀಡಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT