ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮೂವರು

ಬುಧವಾರ, ಏಪ್ರಿಲ್ 24, 2019
33 °C

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮೂವರು

Published:
Updated:
Prajavani

ಧಾರವಾಡ: ಕಲಘಟಗಿ ವಿಧಾನಸಭಾ ಕ್ಷೇತ್ರದ ಮೂವರು ಬಿಜೆಪಿ ಮುಖಂಡರು ಮಂಗಳವಾರ ಕಾಂಗ್ರೆಸ್ ಸೇರಿದರು.

ಸಂತೋಷ್ ಲಾಡ್ ಅವರ ಧಾರವಾಡ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಘಟಗಿ ತಾಲ್ಲೂಕು ಕಾಂಗ್ರೆಸ್ ಮತ್ತು ಜೆಡಿಎಸ್‌ ಮುಖಂಡರು ಬಿಜೆಪಿ ತೊರೆದ ನಿಗದಿಯ ಮಲ್ಲನಗೌಡ ಪಾಟೀಲ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ದಶರಥ ದೇಸಾಯಿ, ಶಿವರುದ್ರ ಪಾಟೀಲ ಅವರನ್ನು ಬರ ಮಾಡಿಕೊಂಡರು.

ಮೈತ್ರಿ ಪಕ್ಷದ ಅಭ್ಯರ್ಥಿ ವಿನಯ ಕುಲಕರ್ಣಿ ಅವರು ಈ ಮೂವರನ್ನು ಕಾಂಗ್ರೆಸ್ ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಬರ ಮಾಡಿಕೊಂಡರು. ಈ ವೇಳೆ ಮಾತನಾಡಿದ ಅವರು, ‘ಬಿಜೆಪಿಯಲ್ಲಿನ ಕುತಂತ್ರ ರಾಜಕಾರಣದಿಂದ ಅಲ್ಲಿನ ಕಾರ್ಯಕರ್ತರಿಗೆ ಮುಖಂಡರಿಗೆ ಆ ಪಕ್ಷದಲ್ಲಿ ಇರಲು ಆಗುತ್ತಿಲ್ಲ. ಆಂತರಿಕ ಪ್ರಜಾಪ್ರಭುತ್ವವೇ ಸತ್ತು ಹೋಗಿದೆ. ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಅಲ್ಲಿ ಕಿಡಿ ಹೊತ್ತಿದ್ದು, ಇನ್ನೂ ಸಾಕಷ್ಟು ಮುಖಂಡರು ಕಾಂಗ್ರೆಸ್ ಕಡೆ ಬರಲಿದ್ದಾರೆ’ ಎಂದರು.

‘ಬಿಜೆಪಿಯಲ್ಲಿನ ಉಸಿರುಗಟ್ಟಿಸುವ ವಾತಾವರಣದಿಂದ ಬೇಸತ್ತು ಪಕ್ಷ ತೊರೆದಿದ್ದೇವೆ. ವಿನಯ ಕುಲಕರ್ಣಿ ಅವರ ನಾಯಕತ್ವಕ್ಕೆ ಮಾರು ಹೋಗಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದೇವೆ. ಮೈತ್ರಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಹಗಲಿರುಳು ಶ್ರಮಿಸುತ್ತೇವೆ’ ಎಂದು ಮಲ್ಲನಗೌಡ ಪಾಟೀಲ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !