ಟ್ರ್ಯಾಕ್‌ ಮೆಂಟೇನರ್‌ಗಳ ಸಂಘಟನೆ ಅಸ್ತಿತ್ವಕ್ಕೆ

7

ಟ್ರ್ಯಾಕ್‌ ಮೆಂಟೇನರ್‌ಗಳ ಸಂಘಟನೆ ಅಸ್ತಿತ್ವಕ್ಕೆ

Published:
Updated:
Deccan Herald

ಹುಬ್ಬಳ್ಳಿ: ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿರುವ ರೈಲು ಹಳಿ ನಿರ್ವಹಣೆ ಮಾಡುವ ಕಾರ್ಮಿಕರ ಸಂಘಟನೆ ಆಲ್‌ ಇಂಡಿಯಾ ರೈಲ್ವೆ ಟ್ರ್ಯಾಕ್‌ ಮೆಂಟೇನರ್ಸ್‌ ಯೂನಿಯನ್‌ (ಎಐಆರ್‌ಟಿಯು)ಗೆ ಭಾನುವಾರ ಇಲ್ಲಿನ ಭಗಿನಿ ಮಂಡಳದಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕಾಂತರಾಜು ಎ.ವಿ. ಚಾಲನೆ ನೀಡಿದರು.

ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.

ನಂತರ ಮಾತನಾಡಿದ ಅವರು, ‘ಟ್ರ್ಯಾಕ್‌ಮನ್‌ಗಳ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಯುತ್ತಿದೆ. ರೈಲ್ವೆ ಇಲಾಖೆ ನಿಯಮಿತವಾಗಿ ನಮ್ಮ ವೇತನ, ರಜೆ ಹಾಗೂ ಇತರೆ ಭತ್ಯೆಗಳನ್ನು ಏರಿಕೆ ಮಾಡುತ್ತಿಲ್ಲ. ನಮಗೆ ನೀಡಲಾದ ಸೌಲಭ್ಯಗಳನ್ನೂ ಉನ್ನತ ಅಧಿಕಾರಿಗಳು ನಮಗೆ ತಲುಪಿಸುತ್ತಿಲ್ಲ’ ಎಂದು ಆರೋಪಿಸಿದರು.

ವಿಭಾಗೀಯ ಅಧ್ಯಕ್ಷ ಸಂತೋಷ ಅಂಬಿಗೇರ, ಕಾರ್ಯಕಾರಿ ಅಧ್ಯಕ್ಷ ಗಣೇಶ ಬಿಲ್ಲವ, ಸಂಘಟನಾ ಕಾರ್ಯದರ್ಶಿ ಪರಶುರಾಮ ಹರನಾಳ, ಸಹ ಕಾರ್ಯದರ್ಶಿಗಳಾದ ರವಿ ಕೆಂಗನಾಳ, ರೇವಪ್ಪ ಯಳಮೇಲಿ, ಶಾಖಾ ಕಾರ್ಯದರ್ಶಿ ಎಂ.ಎಚ್‌.ನದಾಫ, ವಿಭಾಗೀಯ ಕಾರ್ಯದರ್ಶಿ ಮಂಜುನಾಥ ಗುಣಣ್ಣವರ, ಸಹಕಾರ್ಯದರ್ಶಿ ಸತೀಶ ನಾಯಕ ಇದ್ದರು.

ಶಿವಾನಂದ ಈರಪ್ಪಗೋಳ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !