ಮಂಗಳವಾರ, ನವೆಂಬರ್ 30, 2021
20 °C

ಪುಣೆ–ಧಾರವಾಡ ನಡುವೆ ರೈಲು ಸಂಚಾರ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೋವಿಡ್‌ ಪ್ರಕರಣಗಳು ವರದಿಯಾದ ಬಳಿಕ ರದ್ದಾಗಿದ್ದ ರೈಲುಗಳು ಮತ್ತು ಪರೀಕ್ಷಾರ್ಥವಾಗಿ ಕೆಲ ರೈಲುಗಳನ್ನು ಆರಂಭಿಸಲು ನೈರುತ್ಯ ರೈಲ್ವೆ ಸಜ್ಜಾಗಿದೆ. ಸೆ. 5ರಿಂದ ಪುಣೆ–ಧಾರವಾಡ ನಡುವೆ ವಿಶೇಷ ರೈಲಿನ ಸಂಚಾರ ಆರಂಭವಾಗಲಿದೆ.

ಶನಿವಾರ ಸಂಜೆ 5.05ಕ್ಕೆ ಪುಣೆಯಿಂದ ಹೊರಡುವ ರೈಲು ಮರುದಿನ ಬೆಳಿಗ್ಗೆ 5.50ಕ್ಕೆ ಧಾರವಾಡಕ್ಕೆ ತಲುಪಲಿದೆ. ಈ ರೈಲು ಸಾತಾರ, ಸಾಂಗ್ಲಿ, ಮೀರಜ್‌, ಬೆಳಗಾವಿ ಮತ್ತು ಲೋಂಡಾ ಮಾರ್ಗದ ಮೂಲಕ ಸಂಚರಿಸಲಿದೆ. 6ರಂದು ಧಾರವಾಡದಿಂದ ರಾತ್ರಿ 8 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 7.50ಕ್ಕೆ ಪುಣೆ ಮುಟ್ಟಲಿದೆ.

5ರಂದು ಕೊಲ್ಹಾಪುರದ ಛತ್ರಪತಿ ಶಾಹು ಮಹಾರಾಜ ನಿಲ್ದಾಣದಿಂದ ರಾತ್ರಿ 10 ಗಂಟೆಗೆ ಹೊರಡುವ ರೈಲು ಮರುದಿನ ಬೆಳಿಗ್ಗೆ 4.50ಕ್ಕೆ ಧಾರವಾಡಕ್ಕೆ ಬರಲಿದೆ. 6ರಂದು ಧಾರವಾಡದಿಂದ ರಾತ್ರಿ 11 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 4 ಗಂಟೆಗೆ ಕೊಲ್ಹಾಪುರ ತಲುಪಲಿದೆ. ಇದು ಮೀರಜ್‌, ಬೆಳಗಾವಿ ಮತ್ತು ಲೋಂಡಾ ಮಾರ್ಗದಲ್ಲಿ ಸಂಚರಿಸಲಿದೆ.

5ರಂದು ಬೆಳಿಗ್ಗೆ 11.05ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್‌ನಿಂದ ಹೊರಡುವ ರೈಲು ಮರುದಿನ ಮಧ್ಯಾಹ್ನ 4 ಗಂಟೆಗೆ ಮಡಗಾಂವ್‌ ತಲುಪಲಿದೆ. ಈ ರೈಲು 6ರಂದು ‌ಮಡಗಾಂವ್‌ನಿಂದ ರಾತ್ರಿ 8 ಗಂಟೆಗೆ ಹೊರಟು ಮರುದಿನ 1.05ಕ್ಕೆ ಮುಂಬೈಗೆ ತಲುಪಲಿದೆ. ಈ ರೈಲು ದಾದರ್‌, ಕಲ್ಯಾಣ್‌, ಲೋನಾವಾಲಾ, ಪುಣೆ, ಸಾತಾರ, ಸಾಂಗ್ಲಿ, ಮೀರಜ್‌, ಬೆಳಗಾವಿ ಮತ್ತು ಲೋಂಡಾ ಮಾರ್ಗದಲ್ಲಿ ಚಲಿಸಲಿದೆ.

5ರಂದು ಕೊಲ್ಹಾಪುರದಿಂದ ರಾತ್ರಿ 7.30ಕ್ಕೆ ಹೊರಡುವ ವಿಶೇಷ ರೈಲು ಮರುದಿನ ಬೆಳಗಿನ ಜಾವ 4.30ಕ್ಕೆ ಮಡಗಾಂವ್‌ ಮುಟ್ಟಲಿದೆ. ಇದೇ ರೈಲು ಮಡಗಾಂವ್‌ನಿಂದ ರಾತ್ರಿ 8.30ಕ್ಕೆ ಹೊರಟು ಮರುದಿನ ಬೆಳಿಗ್ಗೆ 5.30ಕ್ಕೆ ಕೊಲ್ಹಾಪುರಕ್ಕೆ ಮುಟ್ಟಲಿದೆ. ಈ ರೈಲು ಲೋಂಡಾ, ಬೆಳಗಾವಿ ಮತ್ತು ಮೀರಜ್‌ ಮಾರ್ಗದಲ್ಲಿ ಸಂಚರಿಸಲಿದೆ.

ಸಮಯ ಬದಲಾವಣೆ: ತಾಂತ್ರಿಕ ಕಾರಣದಿಂದಾಗಿ ಸೆ. 5ರಿಂದ 9ರ ತನಕ ಬೆಳಗಾವಿ–ಶೆಡಬಾಳ ಪ್ಯಾಸೆಂಜರ್‌ ರೈಲಿನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

ಬೆಳಿಗ್ಗೆ 7.55ಕ್ಕೆ ಬೆಳಗಾವಿಯಿಂದ ಹೊರಡುವ ಈ ರೈಲು 10.20ಕ್ಕೆ ಶೆಡಬಾಳ ತಲುಪಲಿದ್ದು, ಶೆಡಬಾಳದಿಂದ ಮಧ್ಯಾಹ್ನ 4.15ಕ್ಕೆ ಹೊರಟು ಸಂಜೆ 6.40ಕ್ಕೆ ಮುಟ್ಟಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು