ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಮಾನವ ರೈಲು ಸಂಚಾರ ತಾತ್ಕಾಲಿಕ ರದ್ದು

Last Updated 2 ಮಾರ್ಚ್ 2022, 2:52 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹಾವೇರಿ ಜಿಲ್ಲೆಯ ಸವಣೂರು–ಕರಜಗಿ ಮಾರ್ಗದಲ್ಲಿ ರೈಲ್ವೆ ಸಂಬಂಧಿತ ಕಾಮಗಾರಿ ನಡೆಯಲಿರುವ ಕಾರಣ ಹಲವು ರೈಲುಗಳ ಸಂಚಾರ ರದ್ದುಪಡಿಸಲಾಗಿದೆ.

ಮೈಸೂರು–ಬೆಳಗಾವಿ ನಡುವೆ ನಿತ್ಯ ಸಂಚರಿಸುವ ವಿಶ್ವಮಾನವ ಎಕ್ಸ್‌ಪ್ರೆಸ್‌ ರೈಲಿನ ಸಂಚಾರವನ್ನು ಮಾ. 2ರಿಂದ 7ರ ತನಕ ಮೈಸೂರಿನಿಂದ, ಮಾ. 3ರಿಂದ 8ರ ತನಕ ಬೆಳಗಾವಿಯಿಂದ ರದ್ದು ಪಡಿಸಲಾಗಿದೆ.

ಕೆಎಸ್‌ಆರ್‌ ಬೆಂಗಳೂರು–ಹುಬ್ಬಳ್ಳಿ ನಡುವೆ ನಿತ್ಯ ಸಂಚರಿಸುವ ಎಕ್ಸ್‌ಪ್ರೆಸ್‌ ರೈಲನ್ನು ಮಾ. 2ರಿಂದ 7ರ ತನಕ ಬೆಂಗಳೂರಿನಿಂದ, 3ರಿಂದ 8ರ ತನಕ ಹುಬ್ಬಳ್ಳಿಯಿಂದ, ಹುಬ್ಬಳ್ಳಿ–ಚಿತ್ರದುರ್ಗ ನಿತ್ಯ ಪ್ಯಾಸೆಂಜರ್‌ ಎಕ್ಸ್‌ಪ್ರೆಸ್ ರೈಲಿನ ಸಂಚಾರ ಮಾ. 4ರಿಂದ 8ರ ತನಕ ಎರಡೂ ಮಾರ್ಗದಿಂದ ರದ್ದು ಮಾಡಲಾಗಿದೆ.

ಭಾಗಶಃ ರದ್ದು: ಕೊಚುವೆಲಿ–ಹುಬ್ಬಳ್ಳಿ ನಡುವೆ ವಾರಕ್ಕೆ ಒಂದು ದಿನ ಸಂಚರಿಸುವ ಸೂಪರ್‌ಫಾಸ್ಟ್‌ ಎಕ್ಸ್‌ಫ್ರೆಸ್‌ ರೈಲು ಮಾ. 3ರಂದು ಕೊಚುವೆಲಿಯಿಂದ ಹೊರಡುವಾಗಿ ಹಾವೇರಿ–ಹುಬ್ಬಳ್ಳಿ ನಡುವೆ ರದ್ದಾಗಲಿದೆ.

4ರಿಂದ 8ರ ತನಕ ಕೆಎಸ್‌ಆರ್‌ ಬೆಂಗಳೂರು–ಹುಬ್ಬಳ್ಳಿ ಜನಶತಾಬ್ದಿ ನಿತ್ಯ ಎಕ್ಸ್‌ಪ್ರೆಸ್‌ ರೈಲು ಎರಡೂ ಮಾರ್ಗದಿಂದ ಹಾವೇರಿ–ಹುಬ್ಬಳ್ಳಿ ನಡುವೆ ರದ್ದಾಗಿದೆ. ಇದೇ ಅವಧಿಯಲ್ಲಿ ಅರಸೀಕೆರೆ–ಹುಬ್ಬಳ್ಳಿ ನಿತ್ಯ ಪ್ಯಾಸೆಂಜರ್‌ ವಿಶೇಷ ರೈಲಿನ ಸಂಚಾರ ಎರಡೂ ಮಾರ್ಗದಿಂದ ರಾಣೆಬೆನ್ನೂರು–ಹುಬ್ಬಳ್ಳಿ ನಡುವೆ ರದ್ದುಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT