ಕೆಲವೆಡೆ ರೈಲು ಸಂಚಾರ ರದ್ದು

7

ಕೆಲವೆಡೆ ರೈಲು ಸಂಚಾರ ರದ್ದು

Published:
Updated:

ಹುಬ್ಬಳ್ಳಿ: ಸುರಕ್ಷತಾ ಸಂಬಂಧ ‌ನಿರ್ವಹಣಾ ಕಾರ್ಯ ಇರುವ ಕಾರಣ ಕೆಲ ರೈಲುಗಳ ಸಂಚಾರವನ್ನು ನೈರುತ್ಯ ರೈಲ್ವೆ ತಾತ್ಕಾಲಿಕವಾಗಿ ರದ್ದು ಮಾಡಿದೆ.

ಫೆ. 6ರಿಂದ ಮಾ. 30ರ ತನಕ ಮೀರಜ್‌–ಕ್ಯಾಸಲ್‌ರಾಕ್‌ ಪ್ಯಾಸೆಂಜರ್‌ ರೈಲು, ಫೆ. 7ರಿಂದ ಮಾ. 31ರ ತನಕ ಕ್ಯಾಸಲ್‌ರಾಕ್‌–ಮೀರಜ್‌ ಪ್ಯಾಸೆಂಜರ್‌ ನಡುವಣ ಸಂಚಾರ ಸ್ಥಗಿತಗೊಳಿಸಲಾಗಿದೆ.

ಫೆ. 6ರಿಂದ ಮಾ. 31ರ ವರೆಗೆ ಮೀರಜ್‌–ಬೆಳಗಾವಿ ಮೀರಜ್‌ ಪ್ಯಾಸೆಂಜರ್‌ ಮತ್ತು ಫೆ. 6ರಿಂದ ಮಾ. 31ರಿಂದ ವಿಜಯವಾಡ–ಬೆಂಗಳೂರು ಕಂಟೋನ್‌ಮೆಂಟ್‌ ನಡುವಣ ಪ್ಯಾಸೆಂಜರ್‌ ರೈಲು ರದ್ದಾಗಿವೆ.

ಫೆ. 6ರಿಂದ ಮಾ. 30ರ ವರೆಗೆ ಸೊಲ್ಲಾಪುರ–ಗದಗ ಡೆಮೊ ರೈಲು ಮತ್ತು ಫೆ. 7ರಿಂದ ಮಾ. 31ರ ವರೆಗೆ ಗದಗ–ಸೊಲ್ಲಾಪುರ ನಡುವಣ ಡೆಮೊ ರೈಲು ಸಂಚಾರ ರದ್ದಾಗಿವೆ.

ಫೆ. 6ರಿಂದ ಮಾ. 31ರ ವರೆಗೆ ಸೊಲ್ಲಾಪುರ–ಹುಬ್ಬಳ್ಳಿ–ಸೊಲ್ಲಾಪುರ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌, ಫೆ. 6ರಿಂದ ಮಾ. 30ರ ವರೆಗೆ ಗುಂತಕಲ್‌–ಹಿಂದೂಪುರ ಡೆಮೊ, ಫೆ. 7ರಿಂದ ಮಾ. 31ರ ತನಕ ಹಿಂದೂಪುರ–ಗುಂತಕಲ್‌ ನಡುವಣ ಡೆಮೊ ರೈಲುಗಳನ್ನು ರದ್ದು ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !