ಭಾನುವಾರ, ಸೆಪ್ಟೆಂಬರ್ 25, 2022
30 °C

ಅಂಜುಮನ್‌ಗೆ ಈದ್ಗಾ ಮೈದಾನ ಹಸ್ತಾಂತರಿಸಿ: ಐ.ಎಂ. ತೊರಗಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ನಗರದ ಈದ್ಗಾ ಮೈದಾನವನ್ನು ಅಂಜುಮನ್ ಎ ಇಸ್ಲಾಂ ಸಂಸ್ಥೆ ಅಥವಾ ವಕ್ಫ್‌ ಮಂಡಳಿಗೆ ಖರೀದಿಗೆ ಕೊಡಬೇಕು. ಇದರಿಂದಾಗಿ ಸಮಾಜದ ಶಾಂತಿ ಕದಡುವ ಪ್ರಯತ್ನಗಳಿಗೆ ಕಡಿವಾಣ ಬೀಳಲಿದೆ’ ಎಂದು ಜಯ ಭಾರತ ಜನ ಸೇವಾ ಸಂಘದ ಅಧ್ಯಕ್ಷ ಐ.ಎಂ. ತೊರಗಲ್ಲ ಹೇಳಿದರು.

‘ಮೈದಾನವನ್ನು ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಜಾಗವನ್ನು ಅಳತೆ ಮಾಡಿ ಸದ್ಯದ ಮಾರುಕಟ್ಟೆ ದರದಲ್ಲಿ ಅಂಜುಮನ್ ಅಥವಾ ವಕ್ಫ್ ಮಂಡಳಿ ಖರೀದಿಸಬೇಕು. ಅದಕ್ಕೆ ತಗಲುವ ವೆಚ್ಚವನ್ನು ಸಂಘವು ಚಂದಾ ಸಂಗ್ರಹಿಸಿ ಭರಿಸಲಿದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಘದ ಜೆ.ಎಂ. ಗೋಕಾಕ, ಅಫಜಲಖಾನ ಪಠಾಣ, ಮಹಮ್ಮದ ರಫೀಕ ಜವಳಿ, ಮಲ್ಲಿಕಾರ್ಜುನ ತಗ್ಗಿಮನಿ, ಕಾಸೀಂಸಾಬ ಮುಲ್ಲಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು