ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಕ್‌ ಟರ್ಮಿನಲ್‌: ದಶಕದಿಂದ ನನೆಗುದಿಗೆ

ಅಂಚಟಗೇರಿ ಬಳಿ ಜಾಗ: ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧ
Last Updated 22 ಡಿಸೆಂಬರ್ 2021, 4:38 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತಾಲ್ಲೂಕಿನ ಅಂಚಟಗೇರಿ ಬಳಿ ನಿರ್ಮಿಸಲು ಉದ್ದೇಶಿಸಿರುವ ಲಾಜಿಸ್ಟಿಕ್‌ ಟ್ರಕ್‌ ಟರ್ಮಿನಲ್‌ ನಿರ್ಮಾಣ ಇಚ್ಛಾಶಕ್ತಿಯ ಕೊರತೆಯಿಂದ ನನೆಗುದಿಗೆ ಬಿದ್ದಿದೆ. ದಶಕದಿಂದ ಟ್ರಕ್‌ ಟರ್ಮಿನಲ್‌ ನಿರ್ಮಾಣದ ಮಾತುಗಳು ಕೇಳಿ ಬರುತ್ತಿವೆಯೇ ಹೊರತು ನಿರ್ಮಾಣ ಆರಂಭವಾಗಿಲ್ಲ.

ದಿ. ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಸಂಸ್ಥೆಗೆ ಅಂಚಟಗೇರಿ ಬಳಿ 56 ಎಕರೆ ಟ್ರಕ್‌ ಟರ್ಮಿನಲ್‌ ನಿರ್ಮಾಣ
ಕ್ಕಾಗಿ ಜಾಗ ಹಸ್ತಾಂತರಿಸಲಾಗಿದೆ. 2012ರಲ್ಲಿ ಟರ್ಮಿನಲ್‌ ನಿರ್ಮಾಣ ಜಾಗಕ್ಕೆ ಹೋಗಲು ಒಂದು ಎಕರೆಯಷ್ಟು ಭೂಮಿಯನ್ನೂ ವಶಪಡಿಸಿಕೊಳ್ಳ
ಲಾಗಿದೆ. ಟ್ರಕ್‌ ಟರ್ಮಿನಲ್‌ ಹಾಗೂ ವೇರ್‌ ಹೌಸ್‌ ನಿರ್ಮಾಣಕ್ಕೆಂದು ಅನುದಾನ ತೆಗೆದಿರಿಸಲಾಗಿದೆ.

ಅಂಚಟಗೇರಿ ಬಳಿಯ ಜಾಗದಲ್ಲಿ ಟ್ರಕ್‌ ಟರ್ಮಿನಲ್‌ ನಿರ್ಮಾಣಕ್ಕೆಂದು ಕಾಮಗಾರಿ ಆರಂಭಕ್ಕೆ ಹೋದಾಗಲೆಲ್ಲ ಗ್ರಾಮಸ್ಥರ ವಿರೋಧ ಎದುರಿಸಿ ಅಧಿಕಾರಿ
ಗಳು ಹಿಂತಿರುಗಿದ್ದಾರೆ. ಆಗ, ಗ್ರಾಮಸ್ಥ
ರನ್ನು ಕರೆದು ಸಭೆ ಮಾಡಿ, ಸಮಸ್ಯೆಯನ್ನು ಇತ್ಯರ್ಥ ಮಾಡುವ ಭರವಸೆಗಳನ್ನು ನೀಡಲಾಗುತ್ತದೆ. ನಂತರ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮರೆತು ಬಿಡುತ್ತಾರೆ.

ಪುಣೆ–ಬೆಂಗಳೂರು, ಅಂಕೋಲಾ–ಗೂಟಿ, ಹುಬ್ಬಳ್ಳಿ–ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಜೊತೆಗೆ ಹಲವು ರಾಜ್ಯ ಹೆದ್ದಾರಿಗಳೂ ಇಲ್ಲಿಂದ ಹಾದು ಹೋಗುತ್ತವೆ. ವಿವಿಧ ಸಾಮಗ್ರಿಗಳನ್ನು ಸಾಗಿಸುವ ವಾಹನಗಳನ್ನು ನಿಲ್ಲಿಸಲು ಟ್ರಕ್‌ ಟರ್ಮಿನಲ್‌ ಅವಶ್ಯಕತೆ ಇದೆ. ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲೊಂದು ಟರ್ಮಿನಲ್‌ ಇದೆ. ಆದರೆ, ಹುಬ್ಬಳ್ಳಿಯಲ್ಲಿ ನಿರ್ಮಿಸಿಲ್ಲ. ಟ್ರಕ್‌ ಟರ್ಮಿನಲ್‌ ಬೇಕು ಎಂಬ ಬೇಡಿಕೆ ಬಹಳ ದಿನಗಳಿಂದ ಇದೆ.

ಟರ್ಮಿನಲ್‌ ನಿರ್ಮಾಣಕ್ಕೆ ಉದ್ದೇಶಿಸಿ
ರುವ ಪೈಕಿ ಎಂಟು ಎಕರೆ ಜಾಗದಲ್ಲಿ ಸ್ವಂತ ಭೂಮಿ ಹೊಂದಿರದ ಹಲವಾರು ಜನರು ಮನೆ, ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದಾರೆ. ಅವರನ್ನು ಅಲ್ಲಿಂದ ಸ್ಥಳಾಂತರ ಮಾಡಬಾರದು ಎಂದು ಗ್ರಾಮಸ್ಥರ ಒಕ್ಕೂರಲಿನ ಆಗ್ರಹ. ಗ್ರಾಮಸ್ಥರ ಆಗ್ರಹಕ್ಕೆ ಮಣಿದಿ
ರುವ ಅಧಿಕಾರಿಗಳು, ‘8 ಎಕರೆಯಷ್ಟು ಜಾಗದಲ್ಲಿ ನಿರ್ಮಿಸಿರುವ ಮನೆಗಳನ್ನು ತೆರುವುಗೊಳಿಸುವುದಿಲ್ಲ. ಉಳಿದ ಜಾಗದಲ್ಲಿ ಟರ್ಮಿನಲ್‌ ನಿರ್ಮಿಸಲಾಗು
ವುದು’ ಎಂಬ ಭರವಸೆ ನೀಡಿದ್ದಾರೆ.

‘ಟರ್ಮಿನಲ್‌ ಇಲ್ಲದ್ದರಿಂದ ಲೋಡಿಂಗ್‌ ಹಾಗೂ ಅನ್‌ಲೋಡಿಂಗ್‌ಗೆ ಹಗಲು ಹೊತ್ತಿನಲ್ಲಿಯೇ ನಗರದ ಒಳಗಡೆ ಹೋಗಬೇಕಾಗುತ್ತದೆ. ಟರ್ಮಿನಲ್‌ ಆದರೆ, ಹಗಲು ಹೊತ್ತು ಇಲ್ಲಿ ನಿಲ್ಲಿಸಿ, ರಾತ್ರಿ ಹೋಗಿ ಅನ್‌ಲೋಡಿಂಗ್‌ ಮಾಡಿ ಬರಬಹುದು. ಇದರಿಂದ ಟ್ರಾಫಿಕ್‌ ಸಮಸ್ಯೆ ಉಂಟಾಗುವು
ದಿಲ್ಲ. ಜತೆಗೆ ಲಾರಿಗಳ ಬಿಡಿ ಭಾಗ ಮಾರಾಟ ಮಾಡುವವರು, ದುರಸ್ತಿ ಮಾಡುವವರಿಗೂ ಅಲ್ಲಿ ಕೆಲಸ ದೊರೆಯುತ್ತದೆ’ ಎನ್ನುತ್ತಾರೆ ಉತ್ತರ ಕರ್ನಾಟಕ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಗೈಬುಸಾಬ್‌ ಹೊನ್ಯಾಳ.

‘ಒಂಬತ್ತು ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗವಿಲ್ಲ. ಶಾಲಾ ವಿದ್ಯಾರ್ಥಿಗಳಿಗೆ ಆಡಲು ಆಟದ ಮೈದಾನವಿಲ್ಲ. ಬಡವರೇ ಹೆಚ್ಚಾಗಿ ವಾಸಿಸುವ ಇಲ್ಲಿ, ಜನರಿಗೆ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗಿಲ್ಲ. ಹಾಗೆಯೇ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೂಮಿ ಬೇಕಾಗಿದೆ. ಇವುಗಳ ನಿರ್ಮಾಣಕ್ಕೆ ಆ ಜಾಗ ಬಳಕೆ ಮಾಡಬೇಕು’ ಎಂಬುದು ಮಂಜುನಾಥ ಗಾಣಿಗೇರ, ಭೀಮಣ್ಣ ವಾಲ್ಮೀಕಿ ಮತ್ತಿತರರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT