ಗುರುವಾರ , ಮೇ 19, 2022
23 °C

ಭಂಡಾರದಲ್ಲಿ ಮಿಂದೆದ್ದ ಭಕ್ತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಳ್ನಾವರ: ಸಮೀಪದ ಕುಂಬಾರಕೊಪ್ಪ ಗ್ರಾಮದಲ್ಲಿ ಯುಗಾದಿ ಹಬ್ಬದ ನಿಮಿತ್ತ ಗ್ರಾಮದೇವಿ ಹಾಗೂ ಗ್ರಾಮದ ಎಲ್ಲ ದೇವಸ್ಥಾನದಲ್ಲಿ ಉಡಿ ತುಂಬುವ ಕಾರ್ಯಕ್ರಮ ಗ್ರಾಮಸ್ಥರಿಂದ ಶ್ರದ್ಧಾ, ಭಕ್ತಿಯಿಂದ ನಡೆಯಿತು.

ಭಕ್ತರು ಭಂಡಾರ ಹಚ್ಚಿಕೊಂಡು ಭಕ್ತಿಯ ಸೇವೆ ಸಲ್ಲಿಸಿದರು. ಗ್ರಾಮದೇವಿಯರಾದ ಶ್ರೀ ಲಕ್ಷ್ಮಿ ಹಾಗೂ ದುರ್ಗಾ ದೇವಿಯರಿಗೆ ವಿಶೇಷ ಪೂಜೆ ನಡೆಯಿತು. ನಂತರ ಗ್ರಾಮದ ಎಲ್ಲ ಬೀದಿಯಲ್ಲಿ ಮೆರವಣಿಗೆ ಹೊರಟಿತು. ಮೆರವಣಿಗೆ ಸಾಗಿದ ಬೀದಿಯಲ್ಲಿ ಭಂಡಾರದ ಹಳದಿ ಬಣ್ಣದ ಚಿತ್ತಾರ ಮೂಡಿತ್ತು. ಕಮಲಾದೆವಿ ಪಲ್ಲಕ್ಕಿ ಮತ್ತು ಗ್ರಾಮದೇವಿಯರ ಪಲ್ಲಕ್ಕಿ ಹೊತ್ತು ಭಕ್ತರು ಸಾಗಿದರು.

ಸಿದ್ಧಾರೂಢ ಮಠದ ಬಸವಾನಂದ ಸ್ವಾಮೀಜಿ, ಶೇಖನಗೌಡ ಪಾಟೀಲ, ಮಂಜುನಾಥ ಸಣ್ಣಮನಿ, ಬಸಪ್ಪ ಕೋಲಕರ, ಗಂಗಪ್ಪ ತೊಟಗಿ, ನಾಗಪ್ಪ ತುಳಜಪ್ಪನವರ, ಶಾಂತಾರಾಮ ಸಾವಂತ, ಮಲ್ಲಪ್ಪ ಗಾಣಿಗೇರ, ಅಶೋಕ ಜೋಡಟ್ಟಿ, ಲಾಲಸಾಬ ಕಾಶಿನಕುಂಟಿ, ಶಿವಾಜಿ ಜಾಧವ, ಬಾಳಪ್ಪ ಗುಳೇದಕೊಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.