ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಗಾದಿ, ರಾಮನವಮಿ: ಏ. 2ರಿಂದ ಧಾರ್ಮಿಕ ಕಾರ್ಯಕ್ರಮ

Last Updated 30 ಮಾರ್ಚ್ 2022, 16:33 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಎಸ್.ಎಸ್.ಕೆ ಸಮಾಜ ಚಿಂತನ ಮಂಥನ ಸಮಿತಿಯಿಂದ ಯುಗಾದಿ ಹಬ್ಬದ ಅಂಗವಾಗಿ ಏ.2ರಿಂದ 10ರ ರಾಮನವಮಿವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಸಮಿತಿ ಅಧ್ಯಕ್ಷ ಹನುಮಂತ ನಿರಂಜನ ಹೇಳಿದರು.

‘2ರಂದು ಹರ್ ಘರ್ ಭಗವಾ ಘರ್ ಘರ್ ಭಗವಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ8ಕ್ಕೆವಿಶೇಷ ಪೂಜೆ ನಡೆಯಲಿದ್ದು, 2 ಸಾವಿರ ಧ್ವಜಗಳನ್ನು ವಿತರಿಸಲಾಗುವುದು’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘3ರಂದು ಕಮರಿಪೇಟೆಯ ರಾಮಮಂದಿರದಲ್ಲಿ ಸಂಜೆ6.30ರಿಂದ 8ರವರೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ ಸು. ರಾಮಣ್ಣ ಅವರಿಂದ ಕೌಟುಂಬಿಕ ಮೌಲ್ಯಗಳ ಕುರಿತು ಉಪನ್ಯಾಸ ನಡೆಯಲಿದೆ. 4ರಂದು ಡಾ.ಎ.ಸಿ. ವಾಲಿ ಮಹಾರಾಜ ಅವರಿಂದ ಶ್ರೀರಾಮ ಚಿಂತನ ಪ್ರವಚನ ನಡೆಯಲಿದೆ’ ಎಂದರು.

‘ರಾಮ ನವಮಿ ಅಂಗವಾಗಿ 10ರಂದು ಸಂಜೆ4ಕ್ಕೆ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀರಾಮ ಶೋಭಾಯಾತ್ರೆ ಹಾಗೂಮೂರುಸಾವಿರ ಮಠದ ಆವರಣದಲ್ಲಿ ಸಾರ್ವಜನಿಕ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಡಾ.ಎ.ಸಿ. ವಾಲಿ ಮಹಾರಾಜ, ಎಸ್.ಎಸ್.ಕೆ ಸಮಾಜದ ಆಧ್ಯಾತ್ಮಿಕ ಚಿಂತಕರಾದ ವಿಜಯಾ ಮಾತಾ, ಭಾರತ ವರ್ಷ ಗುರೂಜೀ, ಎಸ್.ಎಸ್.ಕೆ ಸಮಾಜ ಮುಖ್ಯ ಧರ್ಮದರ್ಶಿ ನೀಲಕಂಠ ಜಡಿ ಭಾಗವಹಿಸುವರು’ ಎಂದು ಹೇಳಿದರು.

ಸಮಿತಿಯ ಅಭಿಷೇಕ ನಿರಂಜನ, ನೀತಾ ಮೇತ್ರಾಣಿ, ಶ್ರೀಕಾಂತ ಹಬೀಬ ಹಾಗೂ ವಿನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT