ಉಪ್ಪಿನಬೆಟಗೇರಿ: ಸಮೀಪದ ಕುರುಬಗಟ್ಟಿ ಗ್ರಾಮದ ಆಂಜನೇಯ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್, ಸಾಧನಕೇರಿ ವಿದ್ಯಾ ಸಂಸ್ಥೆ, ಟಾಟಾ ಹಿಟಾಚಿ ಹಾಗೂ ಟಿ.ಬಿ. ಲುಲ್ಲಾ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ನಿರ್ಮಿಸಿದ ಹೈಟೆಕ್ ಶೌಚಾಲಯ ಹಾಗೂ ಶುದ್ದ ಕುಡಿಯುವ ನೀರಿನ ಘಟಕವನ್ನು ಈಚೆಗೆ ಉದ್ಘಾಟಿಸಲಾಯಿತು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ರೋಟರಿ ಕ್ಲಬ್ನ ಜಿಲ್ಲಾ ಪ್ರಾಂತಪಾಲ ಶರದ್ ಪೈ ಅವರು, ‘₹28 ಲಕ್ಷ ವೆಚ್ಚದಲ್ಲಿ ಇವುಗಳನ್ನು ನಿರ್ಮಿಸಲಾಗಿದೆ. ಸಮರ್ಪಕವಾಗಿ ಉಪಯೋಗಿಸುವ ಜೊತೆಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಯೋಜನೆಯ ಅಧಿಕಾರಿ ಗೌರಿ ಮದಲಭಾವಿ ಮಾತನಾಡಿ, ‘ಶಾಲೆಯ ಪರಿಸರದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸಾರ್ವಜನಿಕರ ಆಸ್ತಿಯನ್ನು ಕಾಪಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಶಾಲೆಯ ಅಧ್ಯಕ್ಷ ಎಚ್.ವಿ. ಡಂಬಳ, ಎಸ್.ಡಿ.ಎಂ.ಸಿ ಅಧ್ಯಕ್ಷ ಪುಂಡಲೀಕ ಗುಂಡಗೋವಿ, ಟಾಟಾ ಹಿಟಾಚಿಯ ಡಿ.ಜಿ.ಎಂ ಪ್ರಶಾಂತ ದೀಕ್ಷಿತ, ಮುಖ್ಯಶಿಕ್ಷಕ ಕೊಡ್ಲಿ, ನಾಗರಾಳ, ಸರಸ್ವತಿ ನಾಯ್ಕ, ಸುನೀತಾ ಗಾಡಗೋಳಿ, ರವಿ ಹುಂಜೆ, ನರಸಿಂಹ ಜೋಶಿ, ಮಾಧುರಿ ಬಿರಾದಾರ, ಪಲ್ಲವಿ ದೇಶಪಾಂಡೆ, ತಾರಾದೇವಿ ವಾಲಿ, ಸ್ಮಿತಾ ಮಂತ್ರಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-24-576439075

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.