ಬುಧವಾರ, ಡಿಸೆಂಬರ್ 1, 2021
21 °C
ಪ್ರೌಢಶಾಲೆ, ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ನಡೆದ ಸ್ಪರ್ಧೆ

ಹುಬ್ಬಳ್ಳಿ: ಉಷಾ, ಮೃತ್ಯುಂಜಯಾ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಪರಿಸರ ದಿನದ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆಯ ಪ್ರೌಢಶಾಲಾ ವಿದ್ಯಾರ್ಥಿಗಳ ವಿಭಾಗದಲ್ಲಿ ಧಾರವಾಡದ ಬಾಸೆಲ್‌ ಮಿಷನ್‌ ಬಾಲಕಿಯರ ಶಾಲೆಯ ಉಷಾ ಬಿ. ಮೂಲಿಮನಿ ಮತ್ತು ಪದವಿ ವಿದ್ಯಾರ್ಥಿಗಳ ವಿಭಾಗದಲ್ಲಿ ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೃತ್ಯುಂಜಯ ಕಬ್ಬೂರ ಮೊದಲ ಸ್ಥಾನ ಪಡೆದಿದ್ದಾರೆ.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹುಬ್ಬಳ್ಳಿ ಘಟಕ, ಕರ್ನಾಟಕ ವಿಶ್ವವಿದ್ಯಾಲಯ ಕಾಲೇಜು ಗ್ರಂಥಪಾಲಕರ ಸಂಘ ಮತ್ತು ಶಿವರುದ್ರ ಟ್ರಸ್ಟ್‌  ಜಂಟಿಯಾಗಿ ಸ್ಪರ್ಧೆ ಆಯೋಜಿಸಿತ್ತು.

ಪ್ರೌಢಶಾಲಾ ವಿಭಾಗಕ್ಕೆ ’ಜನಸಂಖ್ಯಾ ಸ್ಪೋಟ ಮತ್ತು ಪರಿಸರ’ ವಿಷಯದ ಕುರಿತ ಪ್ರಬಂಧದಲ್ಲಿ ಧಾರವಾಡದ ಮಂಜುನಾಥೇಶ್ವರ ಇಂಗ್ಲಿಷ್‌ ಮಾಧ್ಯಮ ಶಾಲೆಯ ದೀಪಕ ಶೆಣೈ (ದ್ವಿತೀಯ), ಹುಬ್ಬಳ್ಳಿಯ ಎಫ್‌.ಎಚ್‌. ಕಟ್ಟಿಮನಿ ಕನ್ನಡ ಪ್ರೌಢಶಾಲೆಯ ರಾಧಿಕಾ ದ. ದೇಸಾಯಿ (ತೃತೀಯ) ಮತ್ತು ರಾಯಾಪುರದ ಕೆ.ಎಲ್‌.ಇ. ಶಾಲೆಯ ಶಿವಾನಿ ಮಹಾಂತೇಶ ಹುರಳಿ (ತೃತೀಯ) ಸ್ಥಾನಗಳನ್ನು ಪಡೆದಿದ್ದಾರೆ.

ಪದವಿ ವಿಭಾಗಕ್ಕೆ ’ಪರಿಸರದ ಮೇಲೆ ಕೊರೊನಾ ಪ್ರಭಾವ’ ಕುರಿತ ವಿಷಯದಲ್ಲಿ ಧಾರವಾಡದ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಗೀತಾ ಎಸ್‌.ಬಳ್ಳಾರಿ (ದ್ವಿತೀಯ), ನಗರದ ಎಚ್‌.ಎಸ್‌. ಕೋತಂಬ್ರಿ ವಿಜ್ಞಾನ ಸಂಸ್ಥೆಯ ‌ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯದ ಸಚಿತಾ ಬಿ. ಪಾಟೀಲ (ತೃತೀಯ) ಮತ್ತು ಹುಬ್ಬಳ್ಳಿಯ ಮಹೇಶ ಪದವಿಪೂರ್ವ ಕಾಲೇಜಿನ ನಿಧಿ ಉಮಾರಾಣಿ (ತೃತೀಯ) ಸ್ಥಾನ ಗಳಿಸಿದ್ದಾರೆ. ಮೊದಲ ಸ್ಥಾನ ಪಡೆದವರಿಗೆ ‌₹3,000, ದ್ವಿತೀಯ ಸ್ಥಾನಕ್ಕೆ ₹2,000 ಮತ್ತು ತೃತೀಯ ಸ್ಥಾನಗಳನ್ನು ಸಂಪಾದಿಸಿದವರಿಗೆ ತಲಾ ₹1,000 ಬಹುಮಾನ ನೀಡಲಾಯಿತು.

ಸಕಾರಾತ್ಮಕ ವಿಚಾರಗಳಿರಲಿ: ಪ್ರಶಸ್ತಿ ಪ್ರದಾನ ಮಾಡಿದ ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ವಿದ್ಯಾರ್ಥಿಗಳು ಸಕಾರಾತ್ಮಕ ವಿಚಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಜ್ಞಾನದ ಹರವು ವಿಸ್ತರಿಸಿಕೊಳ್ಳಬೇಕು’ ಎಂದರು‌‌.

'ವಿದ್ಯಾರ್ಥಿಗಳು ನಿಯಮಿತವಾಗಿ ದಿನಪತ್ರಿಕೆ, ನಿಯತಕಾಲಿಕೆಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಅಂಕಿ ಅಂಶಗಳೊಂದಿಗೆ ಸವಿಸ್ತಾರವಾಗಿ ಪ್ರಬಂಧ ಬರೆಯುವ ಶೈಲಿ ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪಾಲಿಕೆ ಮುಖ್ಯ ವೈದ್ಯಾಧಿಕಾರಿ ಶ್ರೀಧರ ದಂಡೆಪ್ಪನವರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಪ್ರೊ. ಕೆ. ಎಸ್. ಕೌಜಲಗಿ, ಕರ್ನಾಟಕ ವಿಶ್ವವಿದ್ಯಾಲಯ ಕಾಲೇಜು ಗ್ರಂಥಪಾಲಕರ ಸಂಘದ ಅಧ್ಯಕ್ಷ ಡಾ. ಮಹೇಶ ಡಿ. ಹೊರಕೇರಿ, ಕಾರ್ಯದರ್ಶಿ ಬಿ.ಎಸ್. ಮಾಳವಾಡ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು