ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವರ್ಕರ್‌ ಕ್ಷಮಾಪತ್ರ ನೀಡಿದ್ದು ಜೀವ ಭಯದಿಂದಲ್ಲ: ಸಾತ್ಯಕಿ

Last Updated 26 ಜುಲೈ 2022, 20:46 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ವಿ.ಡಿ. ಸಾವರ್ಕರ್‌ ಅವರು ರಾಜತಾಂತ್ರಿಕ ಭಾಗವಾಗಿ ಬ್ರಿಟಿಷರಿಗೆ ಕ್ಷಮಾಪತ್ರ ಕೊಟ್ಟಿದ್ದೇ ಹೊರತು ಜೀವ ಭಯದಿಂದ ಅಲ್ಲ’ ಎಂದು ಅವರ ಮರಿಮೊಮ್ಮಗ ಸಾತ್ಯಕಿ ಸಾವರ್ಕರ್ ಹೇಳಿದರು.

ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ನಿರಾಮಯ ಫೌಂಡೇಷನ್ ಮಂಗಳವಾರ ಹಮ್ಮಿಕೊಂಡಿದ್ದ ‘ಕಾರ್ಗಿಲ್ ವಿಜಯ ದಿವಸ್ ಮತ್ತು ಅಮೃತ ಸ್ವಾತಂತ್ರ್ಯೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಾವರ್ಕರ್‌→ಅವರು→ರಾಜತಂತ್ರದಿಂದ→ಬ್ರಿಟಿಷರ ವಿರುದ್ಧ→ಹಿಂದೂಗಳನ್ನು→ಒಗ್ಗೂಡಿಸುವಲ್ಲಿ
ಮುಂದಾಗಿದ್ದರು. ಇದನ್ನು ಅರಿಯದೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. 25 ವರ್ಷಗಳ ಎರಡು ಅವಧಿಯ ಅಂಡಮಾನ್ ಜೈಲುಶಿಕ್ಷೆ ವಿಧಿಸಿದಾಗ, ಅಲ್ಲಿಂದ ಬದುಕಿ ಬರುವ ಸಾಧ್ಯತೆ ಇರಲಿಲ್ಲ. ಸ್ವಾತಂತ್ರ್ಯ ಹೋರಾಟದ ಉದ್ದೇಶಕ್ಕೆ ಕ್ಷಮಾಪತ್ರ ನೀಡಿದ್ದರು. ಈಗ ಅದನ್ನೇ ತಿರುಚಿ ಹೇಳಲಾಗುತ್ತಿದೆ’ ಎಂದರು.

‘ಭಾರತದ ಭವಿಷ್ಯದ ದೃಷ್ಟಿಯಲ್ಲಿ ಅಗ್ನಿಪಥ ಯೋಜನೆ ಪ್ರಮುಖವಾಗಿದ್ದು, ಹಿಂದೂ ಯುವಕರು ಹೆಚ್ಚಿನ ಲಾಭ ಪಡೆಯಬೇಕು. ಸೈನ್ಯ, ಪೊಲೀಸ್ ಮತ್ತು ರಾಜಕೀಯದಲ್ಲಿ ಹಿಂದೂಪರ ಮನಸ್ಥಿತಿ ಇದ್ದರೆ ಮಾತ್ರ ದೇಶದಲ್ಲಿ ತ್ರಿವರ್ಣ ಧ್ವಜ ಶಾಶ್ವತವಾಗಿ ಇರಲು ಸಾಧ್ಯ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT