ಬೆಂಗಳೂರು: ಧಾರವಾಡದ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್ಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ಅಪರಾಧಿಗಳಾಗಿರುವ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಸೇರಿದಂತೆ ಒಟ್ಟು 16 ಜನ ತಪ್ಪಿತಸ್ಥರಿಗೆ ಜನಪ್ರತಿನಿಧಿಗಳ ಸೆಷನ್ಸ್ ನ್ಯಾಯಾಲಯ ಜೀವಾವಧಿ ವಿಧಿಸಿದ್ದು, ಇನ್ನೊಬ್ಬ ಅಪರಾಧಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ತಂದೆಗೆ ಜೀವಾವಧಿ ಶಿಕ್ಷೆ ಪ್ರಕಟವಾದ ಬೆನ್ನಲ್ಲೇ ವಿನಯ ಕುಲಕರ್ಣಿ ಅವರ ಮಗಳು ವೈಶಾಲಿ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ತಂದೆಯ ಜೊತೆಗಿದ್ದ ಬಾಲ್ಯದ ಫೋಟೊವನ್ನು ಹಂಚಿಕೊಂಡು, ಅದರ ಜೊತೆಗೆ ಅಪ್ಪನ ಕೆಲಸದ ಬಗ್ಗೆ ಬರೆದುಕೊಂಡಿದ್ದಾರೆ.
.ಯೋಗೀಶಗೌಡ ಕೊಲೆ ಕೇಸಲ್ಲಿ ವಿನಯ ಕುಲಕರ್ಣಿ ಅಪರಾಧಿ: ಪ್ರಕರಣ ಸಾಗಿ ಬಂದ ಹಾದಿ....ಶಿಕ್ಷೆ ಪ್ರಕಟಿಸಲಿರುವ ನ್ಯಾಯಾಧೀಶರಿಗೆ ವಿನಯ ಕುಲಕರ್ಣಿ ಹೇಳಿದ್ದಿಷ್ಟು....
ರಾಜ್ಯ ವನ್ಯಜೀವಿ ಮಂಡಳಿ ಸದಸ್ಯೆಯೂ ಆಗಿರುವ ವೈಶಾಲಿ ಅವರ ಪೋಸ್ಟ್ನಲ್ಲಿ ಏನಿದೆ?

‘ಉತ್ತರ ಕರ್ನಾಟಕದಾದ್ಯಂತ, ವಿದ್ಯಾರ್ಥಿ ನಾಯಕರಿಂದ ರಾಜ್ಯ ನಾಯಕರಾಗುವವರೆಗೆ ಅವರ ಪಯಣವನ್ನು ಜನರು ಸಾಕ್ಷಿಯಾಗಿ ನೋಡಿದ್ದಾರೆ. ರೈತ ಕುಟುಂಬದಲ್ಲಿ ಜನಿಸಿ, ಸಾವಿರಾರು ಪಶುಗಳೊಂದಿಗಿನ ದೊಡ್ಡ ಡೈರಿ ಕಾರ್ಯಾಚರಣೆಯನ್ನು ನಿರ್ಮಿಸಿ ನಿರ್ವಹಿಸಿದವರು. ಯುವ ರೈತರಿಗೆ ಪ್ರೇರಣೆಯಾದವರು. ಅವರು ಯಾವಾಗಲೂ ಎಲ್ಲ ವಯಸ್ಸಿನ ಜನರೊಂದಿಗೆ ಸರಳವಾಗಿ ಬೆರೆತವರು, ಗೌರವದಿಂದ ವರ್ತಿಸಿದವರು ಮತ್ತು ಸಹಾಯಕ್ಕೆ ಸದಾ ಸಿದ್ಧರಾಗಿದ್ದವರು’ ಎಂದಿದ್ದಾರೆ.

‘ಜನರಿಗಾಗಿ ಬದುಕಿದ ನಾಯಕನಾಗಿ, ಅವರು ತಮ್ಮ ಜೀವನವನ್ನೇ ಸಾರ್ವಜನಿಕ ಸೇವೆಗೆ ಅರ್ಪಿಸಿದ್ದಾರೆ. ಅನೇಕ ಕುಟುಂಬಗಳಿಗೆ ಅವರು ಕೇವಲ ನಾಯಕನಲ್ಲ, ತಮ್ಮವರಲ್ಲೊಬ್ಬರು. ನಾವು ಅವರನ್ನು ಯಾವಾಗಲೂ ಅವರ ಕೆಲಸಗಳಿಂದಲೇ ಗುರುತಿಸಿದ್ದೇವೆ. ಅವರು ಎಂದೆಂದಿಗೂ ನಮ್ಮ ನಾಯಕ, ನಮ್ಮ ಮಾರ್ಗದರ್ಶಕ ಮತ್ತು ನಮ್ಮ ಅತಿ ದೊಡ್ಡ ಹೆಮ್ಮೆ. ನಾವು ದೃಢವಾಗಿದ್ದೇವೆ. ಅವರ ನೈತಿಕತೆ ಮತ್ತು ಸತ್ಯದ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಈ ವಿಷಯಕ್ಕೆ ಸಾರ್ವಜನಿಕ ಗಮನ ಮತ್ತು ವಿಭಿನ್ನ ಅಭಿಪ್ರಾಯಗಳು ಸಾಕಷ್ಟು ಬಂದಿವೆ ಎಂಬುದನ್ನೂ ನಾವು ಅರಿತಿದ್ದೇವೆ. ನ್ಯಾಯಾಂಗ ಪ್ರಕ್ರಿಯೆಗೆ ನಾವು ಗೌರವ ನೀಡುತ್ತೇವೆ ಮತ್ತು ಮೇಲ್ಮನವಿ ನ್ಯಾಯಾಲಯಗಳತ್ತ ಪೂರ್ಣ ನಂಬಿಕೆಯಿಂದ ಮುಂದುವರಿಯುತ್ತಿದ್ದೇವೆ. ನಮಗೆ ದೊರೆತಿರುವ ಪ್ರೀತಿ, ಪ್ರಾರ್ಥನೆಗಳು ಮತ್ತು ಬೆಂಬಲಕ್ಕಾಗಿ ನಾವು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇವೆ. ಒಟ್ಟಾಗಿ, ನಾವು ಬಲವಾಗಿ ನಿಲ್ಲುತ್ತೇವೆ. ನಾವು ಇದನ್ನೂ ದಾಟುತ್ತೇವೆ. ಇದು ಕೂಡ ಸಾಗಿಹೋಗುತ್ತದೆ’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.