ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈದಾನದಲ್ಲಿ ಆಟವಾಡಿ ಮತ ಕೇಳಿದ ವಿನಯ

Last Updated 8 ಏಪ್ರಿಲ್ 2019, 15:30 IST
ಅಕ್ಷರ ಗಾತ್ರ

ಧಾರವಾಡ: ಲೋಕಸಭಾ ಚುನಾವಣೆಯ ಧಾರವಾಡ ಕ್ಷೇತ್ರದ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಅವರು ಭಾನುವಾರ ಇಲ್ಲಿನ ಕರ್ನಾಟಕ ಕಾಲೇಜು ಮೈದಾನಕ್ಕೆ ಭೇಟಿ ನೀಡಿ ಆಟೋಟಗಳಲ್ಲಿ ಪಾಲ್ಗೊಂಡು ಮತಯಾಚನೆ ಮಾಡಿದರು.

ಮುಂಜಾನೆ ಆಟೋಟಗಳಿಗೆ ಬಂದ ಜನರೊಂದಿಗೆ ಬೆರೆತು ಕ್ರೀಡೆಗಳಲ್ಲಿ ಪಾಲ್ಗೊಂಡರು. ಕೆಲಹೊತ್ತು ಕ್ರಿಕೆಟ್ ಆಡಿ ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಂಡರು. ನಂತರ ಕರಪತ್ರ ನೀಡಿ ಮತಯಾಚಿಸಿದರು. ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಪ್ರಾರ್ಥಿಸಿದರು.

ನಂತರ ಸಾಧನಕೇರಿ, ಕಿತ್ತೂರು ಚೆನ್ನಮ್ಮ ಪಾರ್ಕ್‌, ಕೆಲಗೇರಿ ಉದ್ಯಾನಕ್ಕೂ ತೆರಳಿ ವಾಯು ವಿಹಾರಿಗಳನ್ನುಭೇಟಿ ಮಾಡಿ ಮತಯಾಚಿಸಿದರು. ನಂತರ ವಾರ್ಡ್ 14, 15ರಲ್ಲಿ ರೋಡ್ ಶೋ ನಡೆಸಿದರು. ಪಕ್ಷ ಅಧಿಕಾರಕ್ಕೆ ಬಂದಲ್ಲಿ ಪ್ರತಿ ತಿಂಗಳು ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ಮಾಸಿಕ ₹6ಸಾವಿರ ನೀಡಲಾಗುವುದು. ಬಡವರ ಕಲ್ಯಾಣವಾಗುವುದರಲ್ಲಿ ಸಂದೇಹವಿಲ್ಲ ಎಂದು ಭರವಸೆ ನೀಡಿದರು.

ರಾಜ್ಯದಲ್ಲಿದ್ದ ಹಿಂದಿನ ಸರ್ಕಾರದ ಸಾಧನೆಗಳನ್ನು ತಿಳಿಸಿದರು. ಈಗಿನ ಸರ್ಕಾರ ಮಾಡಿರುವ ಸಾಲ ಮನ್ನಾವನ್ನು ತಿಳಿಸಿದರು.ರೋಡ ಶೋ ಹಾಗೂ ವಾರ್ಡಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತಯಾಚಿಸಿದ ವಿನಯ ಬಳಿ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.

ಪಾಲಿಕೆ ಸದಸ್ಯ ರಘುನಾಥ, ಲಕ್ಕಣ್ಣವರ, ಇಸ್ಮಾಯಿಲ್ ತಮಟಗಾರ, ಬಸವರಾಜ ಮಲಕಾರಿ, ಆನಂದ ಸಿಂಗನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT