ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೈಮಗ್ಗ ನೇಕಾರರ ಸಂಘದಿಂದ ಪ್ರತಿಭಟನೆ

7

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೈಮಗ್ಗ ನೇಕಾರರ ಸಂಘದಿಂದ ಪ್ರತಿಭಟನೆ

Published:
Updated:

ಹುಬ್ಬಳ್ಳಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಕೈಮಗ್ಗ ನೇಕಾರರ ಸಂಘ, ಗ್ರಾಮ ಸೇವಾ ಸಂಘದಿಂದ ಇಲ್ಲಿಯ ವಿದ್ಯಾನಗರ ಕೈಮಗ್ಗ ನಿಗಮದ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ‌ಮಾತನಾಡಿದ ಕೈಮಗ್ಗ ಪರ ಹೋರಾಟಗಾರ ಪ್ರಸನ್ನ ಹೆಗ್ಗೋಡು, ಸರ್ಕಾರ ದೊಡ್ಡ ಉದ್ಯಮ ಸ್ಥಾಪಿಸಲು ಮುಂದಾಗುತ್ತಿರುವದರಿಂದ ನೇಕಾರರು ಬೀದಿಗೆ ಬೀಳುತ್ತಿದ್ದಾರೆ. ನೇಕಾರ ಗೋದಾಮುಗಳನ್ನು ಒಂದೊಂದಾಗಿ ಬೆಂಗಳೂರಿನಲ್ಲಿ ಬಾಡಿಗೆ ಕೊಡುತ್ತಿದ್ದಾರೆ. ಇದರಿಂದಾಗಿ ಬೆಂಗಳೂರಿನಲ್ಲಿ ಕೈಮಗ್ಗ ಬಟ್ಟೆಯನ್ನು ಬೀದಿಯಲ್ಲಿ ಮಾರಿ ಹೋರಾಟ ಮಾಡಿದ್ದಾರೆ.  ಈ ಉದ್ಯಮ ಉಳಿಸುವಂತೆ ಉ.ಕರ್ನಾಟಕದಲ್ಲಿ ಪ್ರತಿಭಟನೆ, ಧರಣಿ ನಡೆಸುತ್ತೇವೆ' ಎಂದರು.

ಅಖಿಲ ಕರ್ನಾಟಕ ಕೈಮಗ್ಗ ನೇಕಾರರ ಸಂಘದ ಉಪಾಧ್ಯಕ್ಷ ವಿಠ್ಠಪ್ಪ ಗೋರಂಟ್ಲಿ, ಹೋರಾಟಗಾರರಾದ ಸಿದ್ದನಗೌಡ ಪಾಟೀಲ, ಶಂಕರ ಹಲಗತ್ತಿ, ಭಾಗ್ಯ ನಗರದ ನೇಕಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !