ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೇಕಾರರು ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಿ: ಹನಮಂತ ಮಾವಿನಮರದ

Published : 27 ಸೆಪ್ಟೆಂಬರ್ 2024, 14:08 IST
Last Updated : 27 ಸೆಪ್ಟೆಂಬರ್ 2024, 14:08 IST
ಫಾಲೋ ಮಾಡಿ
Comments

ಗುಳೇದಗುಡ್ಡ: ಮನುಷ್ಯನ ಅಂಗಗಳಲ್ಲಿ ಕಣ್ಣು ಪ್ರಮುಖವಾದದು ಅದನ್ನು ಸರಿಯಾಗಿ ಸಂರಕ್ಷಿಸಿಕೊಳ್ಳಬೇಕು. ಅದರಲ್ಲಿಯೂ ನೂಲಿನ ಕೆಲಸ ಮಾಡುವ ನೇಕಾರ ವರ್ಗದ ಜನ ಬಹುಬೇಗ ಕಣ್ಣಿನ ದೃಷ್ಠಿ ಕಳೆದುಕೊಳ್ಳುವುದು ಸ್ವಾಭಾವಿಕ. ನೇಕಾರರು ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಬಹು ಮುಖ್ಯವಾಗಿದೆ ಎಂದು ಕೋಟೆಕಲ್ ಪಿಕೆಪಿಎಸ್ ಅಧ್ಯಕ್ಷ ಹನಮಂತ ಮಾವಿನಮರದ ಹೇಳಿದರು.

ಅವರು ಮಂಗಳವಾರ ಕೋಟೆಕಲ್ ಪಿಕೆಪಿಎಸ್, ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಸಹಯೋಗದಲ್ಲಿ ಪಟ್ಟಣದ ಕೈಮಗ್ಗ ನೇಕಾರರ ಉತ್ಪನ್ನಗಳ ಉತ್ಪಾದನಾ ಕೇಂದ್ರದ ನೇಕಾರ ಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣೆ ಮತ್ತು ಕನ್ನಡಕ ವಿತರಣಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ನೇಕಾರ ಕೇಂದ್ರದ ಕಾರ್ಮಿಕರು ಆರೋಗ್ಯದ ಕಡೆ ವಿಶೇಷ ಗಮನ ಹರಿಸಬೇಕು. ಅದರಲ್ಲಿಯೂ ಕಣ್ಣಿನ ದೃಷ್ಠಿ ಹೀನತೆಯನ್ನು ಬೇಗನೇ ಅರಿತು ಅದಕ್ಕೆ ಚಿಕಿತ್ಸೆ ಪಡೆಯಬೇಕು. ನಿರ್ಲಕ್ಷದಿಂದ ಅದೆಷ್ಟೋ ನೇಕಾರರು ತಮ್ಮ ಕಣ್ಣುಗಳ ದೃಷ್ಠಿಯನ್ನೇ ಕಳೆದುಕೊಂಡ ಉದಾಹರಣೆಗಳಿವೆ. ಅದಕ್ಕಾಗಿ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಎಂದು ಹೇಳಿದರು.

ನೇತ್ರ ತಜ್ಞ ವೈದ್ಯ ಡಾ.ಎನ್.ಎಚ್.ಕಿತ್ತಲಿ, ಎಂ.ಪಿ.ಪಾಗದ, ಪ್ರೊ.ಸಿ.ಎಂ.ಜೋಶಿ ಮಾತನಾಡಿದರು. ಸುಮಾರು 55 ಜನರಿಗೆ ನೇತ್ರ ತಪಾಸಣೆ ಮತ್ತು ಬಿ.ಪಿ., ಶುಗರ್ ತಪಾಸಣೆ ಮಾಡಲಾಯಿತು. ಸುಮಾರು 25 ಜನ ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಿಸಲಾಯಿತು. ಪುರಸಭೆ ಸದಸ್ಯ ಸಂತೋಷ ನಾಯನೇಗಲಿ, ಪಿಕೆಪಿಎಸ್ ವ್ಯವಸ್ಥಾಪಕ ಚಂದ್ರಮೋಹನ ಕಲ್ಯಾಣಿ, ಆರೋಗ್ಯ ಇಲಾಖೆಯ ಮಂಜು ಪದರಾ, ಪರಶು ಮಾದರ, ಶಕುಂತಲಾ ಹೊಸಮನಿ, ಬಾದಾಮಿ ಆರೋಗ್ಯ ಇಲಾಖೆಯ ಆರ್.ಬಿ.ಎಸ್.ಕೆ. ಯೋಜನೆಯ ನೇತ್ರಾಧಿಕಾರಿಗಳಾದ ತ್ರಿವೇಣಿ ಮಾಗಿ, ಅನುಷ್ಯಾ ಐಹೊಳ್ಳಿ ನೇತ್ರ ತಪಾಸಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT