ಸಮ್ಮೇಳನದಲ್ಲಿ ಪರಿಷತ್ ಅಧ್ಯಕ್ಷರ ಭಾವಚಿತ್ರ: ಮುದ್ದುಕೃಷ್ಣ ಆಕ್ಷೇಪ

7

ಸಮ್ಮೇಳನದಲ್ಲಿ ಪರಿಷತ್ ಅಧ್ಯಕ್ಷರ ಭಾವಚಿತ್ರ: ಮುದ್ದುಕೃಷ್ಣ ಆಕ್ಷೇಪ

Published:
Updated:

ಧಾರವಾಡ: ಸುಗಮ ಸಂಗೀತ ಪ್ರಕಾರವನ್ನು ಸಾಹಿತ್ಯ ಪರಿಷತ್ತು ನಿರ್ಲಕ್ಷಿಸುತ್ತಿದೆ. ಸುಗಮ ಸಂಗೀತಕ್ಕಾಗಿ ಪ್ರತ್ಯೇಕ ಗೋಷ್ಠಿಯ ಮಾಡಬಹುದಿತ್ತು ಎಂದು ಹಿರಿಯ ಗಾಯಕ ವೈ.ಕೆ.ಮುದ್ದುಕೃಷ್ಣ ಅಭಿಪ್ರಾಯಪಟ್ಟರು.

ಸಮಾನಾಂತರ ವೇದಿಕೆ 2ರಲ್ಲಿ ನಡೆದ ಕಾವ್ಯ ಪ್ರಚಾರದ ವಿಭಿನ್ನ ನೆಲೆಗಳು ಗೋಷ್ಠಿಯಲ್ಲಿ ಮಾತನಾಡಿ, ಸುಗಮ ಸಂಗೀತಕ್ಕೆ ಪರಿಷತ್ತು ಪ್ರತ್ಯೇಕ ಗೋಷ್ಠಿ ಕೊಡುತ್ತಿಲ್ಲ ಏಕೆ’ ಎಂದು ಪ್ರಶ್ನಿಸಿದರು.

‘ನಾನು 40 ವರ್ಷಗಳಿಂದ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದೇನೆ. ಪರಿಷತ್ತಿನ ಅಧ್ಯಕ್ಷರು ಎಂದೂ ತಮ್ಮ ಭಾವಚಿತ್ರವನ್ನು ಸಮ್ಮೇಳನದಲ್ಲಿ ಬಳಸುತ್ತಿರಲಿಲ್ಲ. ಸಮ್ಮೇಳನದ ಅಧ್ಯಕ್ಷರ ಭಾವಚಿತ್ರಗಳು ಮಾತ್ರ ವೇದಿಕೆ, ಬ್ಯಾಕ್‌ಡ್ರಾಪ್ ಮತ್ತು ಬ್ಯಾನರ್‌ಗಳಲ್ಲಿ ಇರುತ್ತಿದ್ದವು. ಆದರೆ ಈ ಬಾರಿ ಹಾಗಾಗಿಲ್ಲ. ಪರಿಷತ್ತಿನ ಅಧ್ಯಕ್ಷರ ಭಾವಚಿತ್ರಗಳು ಎಲ್ಲೆಡೆ ರಾರಾಜಿಸುತ್ತಿವೆ’ ಎಂದರು.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !