ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ವ್ಯಾಪಾರಿಗಳ ಕೊಡುಗೆ ಅಪಾರ: ಸೋಮಶೇಖರ ಜಾಡರ

Last Updated 10 ಮಾರ್ಚ್ 2022, 3:03 IST
ಅಕ್ಷರ ಗಾತ್ರ

ಅಳ್ನಾವರ: ಬಿಸಿಲು, ಮಳೆ, ಚಳಿ ಲೆಕ್ಕಿಸದೆ ಸದಾ ಬೀದಿಯಲ್ಲಿ ಕುಳಿತು ಜನರಿಗೆ ಬೇಕಾದ ವಸ್ತುಗಳನ್ನು ಕೈಗೆಟಕುವ ದರದಲ್ಲಿ ಮಾರಾಟ ಮಾಡುವ ಬೀದಿ ಬದಿ ವ್ಯಾಪಾರಿಗಳು ಸಮಾಜದ ಆರ್ಥಿಕ ಸ್ಥಿತಿಯ ಬಲವರ್ಧನೆಗೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾ ಪ್ಯಾನಲ್ ವಕೀಲ ಸೋಮಶೇಖರ ಜಾಡರ ಹೇಳಿದರು.

ಇಲ್ಲಿನ ಪಟ್ಟಣ ಪಂಚಾಯ್ತಿ ಸಭಾ ಭವನದಲ್ಲಿ ಬುಧವಾರ ಆರಂಭವಾದ ಎರಡು ದಿನಗಳ ಸಾಮರ್ಥ್ಯ ಅಭಿವೃದ್ಧಿ ಹಾಗೂ ಮಾಹಿತಿ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು. ನಿಮಗಾಗಿ ಹಲವು ಯೋಜನೆಗಳನ್ನು ಸರ್ಕಾರ ಜಾರಿ ಮಾಡಿದೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ಈ ಕಾರ್ಯಾಗಾರ ನಡೆದಿದೆ. ನಿಮ್ಮ ಕಷ್ಟಕರ ಬದುಕು ದೂರವಾಗಿ ಸುಂದರ ಬದುಕು ಕಟ್ಟಿಕೊಳ್ಳಲು ಸರ್ಕಾರ ನಿಮಗಾಗಿ ಹಲವಾರು ಕಾನೂನುಗಳನ್ನು ರಚಿಸಿದೆ ಎಂದರು.

ಜಿಲ್ಲಾ ಪ್ಯಾನಲ್ ವಕೀಲರಾದ ಬಸಮ್ಮ ಹೊಸಮನಿ ಮಾತನಾಡಿ, ಈ ಭಾಗದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿ ಬದಿ ವ್ಯಾಪಾರ ಮಾಡುತ್ತಾರೆ. ಅಂತರರಾಷ್ಟ್ರಿಯ ಮಹಿಳಾ ದಿನಾಚರಣೆ ನಿಮಗೆಲ್ಲ ಪ್ರೇರಣೆ ನೀಡಲಿ. ಸರ್ಕಾರ ನಿಮಗೆ ಉಚಿತ ಕಾನೂನು ನೆರವು ನೀಡುತ್ತಿದೆ ಅದರ ಲಾಭ ಪಡೆದುಕೊಳ್ಳಿ ಎಂದರು. ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ನದೀಮ ಕಾಂಟ್ರ್ಯಾಕ್ಟರ ಮಾತನಾಡಿದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಮಂಗಳಾ ರವಳಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಸಕ್ಕುಬಾಯಿ ಗೊಂದಳಿ, ಸರಸ್ವತಿ ನಿಪ್ಪಾಣಿಕರ, ಎಸ್.ಆರ್. ಹಿರೇಹಾಳ, ಶಾಂತವ್ವ ಕಾಂಬಳಿ, ಪರಶುರಾಮ ಗೊಂದಳಿ, ರವಿ ಕೊಂಕಣಿ, ನಾಗರಾಜ ಗುರ್ಲಹುಸೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT