ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಯುವ ದಿನಾಚರಣೆ

Last Updated 14 ಜನವರಿ 2022, 17:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸ್ವಾಮಿ ವಿವೇಕಾನಂದ ಅವರ ಜನ್ಮದಿನದ ಅಂಗವಾಗಿ ನಗರದ ವಿವಿಧೆಡೆ ವಿಶ್ವ ಯುವ ದಿನ ಆಚರಿಸಲಾಯಿತು.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಹಳೇಹುಬ್ಬಳ್ಳಿಯ ಆಯುರ್ವೇದ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್‌ ಘಟಕದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಡಾ. ಮಲ್ಲಿಕಾರ್ಜುನ ಬಾಳಿಕಾಯಿ ಮಾತನಾಡಿ ‘ಇಂದಿನ ದಿನಗಳಲ್ಲಿ ಯುವಕರು ಹೆಚ್ಚು ಜಾಗೃತಿಯಿಂದ ಇರಬೇಕು. ದೇಶವನ್ನು ಸಮರ್ಥವಾಗಿ ಮುನ್ನಡೆಸಲು ವಿವೇಕಾನಂದರು ಹಾಕಿಕೊಟ್ಟ ದಾರಿಯಲ್ಲಿ ಸಾಗಬೇಕು’ ಎಂದರು.

ಆಯುರ್ವೇದ ಸೇವಾ ಸಮಿತಿಯ ಸಭಾಪತಿ ಗೋವಿಂದ ಜೋಶಿ, ಪ್ರಾಚಾರ್ಯ ಡಾ. ಪ್ರಶಾಂತ್ ಎ.ಎಸ್., ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್‌ ಸದಸ್ಯ ಜೆ.ಆರ್. ಜೋಶಿ, ಪ್ರಾಧ್ಯಾಪಕ ಎಸ್.ಜಿ. ಚವ್ಹಾಣ, ಡಾ.ಸಿ. ತ್ಯಾಗರಾಜ, ಎನ್‌ಎಸ್‌ಎಸ್‌ ಘಟಕ ಸಂಯೋಜಕ ಡಾ. ಪ್ರಕಾಶ ರಾಠೋಡ, ಡಾ. ಮಧುಸೂದನ ಕುಲಕರ್ಣಿ ಇದ್ದರು.

ಐಇ..ಎಂ.ಎಸ್ ಕಾಲೇಜಿನಲ್ಲಿ ವಿವೇಕಾನಂದರ ಜನ್ಮದಿನ ಅಂಗವಾಗಿ ಒಂದು ವಾರ ವಿವಿಧ ಕಾರ್ಯಕ್ರಮಗಳು ನಡೆದವು. ಸಂಸ್ಥೆ ನಿರ್ದೇಶಕ ಡಾ. ವೀರಣ್ಣ ಡಿ.ಕೆ ಮಾತನಾಡಿ ‘ವಿವೇಕಾನಂದರು ಹರಿತವಾದ ಮಾತುಗಳಿಂದ ಎಲ್ಲ ಯುವಕರಿಗೂ ಸ್ಫೂರ್ತಿಯಾಗಿದ್ದಾರೆ’ ಎಂದರು.

ಪ್ರೊ. ವಿನಾಯಕ ಉಪರಾಟಿ, ವಿದ್ಯಾರ್ಥಿಗಳಾದ ಹೇಮಾ, ವಿಶಾಖ ನಾಯಕ, ಅವಿನಾಶ ರೆಡ್ಡಿ, ಆಕಾಶ ಕಂಕನವಾಡಿ, ಸೌಮ್ಯ ಹಿರೇಮಠ, ಶಕ್ತಿ ಆನಂದ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT