ಶುಕ್ರವಾರ, ಅಕ್ಟೋಬರ್ 7, 2022
28 °C
ಬಿ.ಎಸ್. ಯಡಿಯೂರಪ್ಪ ನಿವೃತ್ತಿ ಘೋಷಣೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ

ಬಿಎಸ್‌ವೈಗೆ ರಾಜಕೀಯ ಶಕ್ತಿ ಇದೆ; ನಿವೃತ್ತಿ ಘೋಷಿಸಬಾರದು- ಡಿ.ಕೆ. ಶಿವಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ನಿವೃತ್ತಿ ಘೋಷಿಸಬಾರದು. ಅವರಿಗೆ ಇನ್ನೂ ರಾಜಕೀಯ ಶಕ್ತಿ ಇದ್ದರೂ, ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸಿದರು. ಅವರ ನಾಯಕತ್ವದಲ್ಲೇ ಪಕ್ಷ ಹೆಚ್ಚು ಸೀಟುಗಳನ್ನು ಗೆದ್ದಿತ್ತೇ ವಿನಾ ಮತ್ತೊಬ್ಬರ ಹೆಸರಿನಿಂದಲ್ಲ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಬಿಎಸ್‌ವೈ ನಿವೃತ್ತಿ ಕುರಿತು ನಗರದಲ್ಲಿ ಶುಕ್ರವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಯಡಿಯೂರಪ್ಪ ಅವರ ಹೆಸರಲ್ಲೇ ಆಪರೇಷನ್ ಕಮಲ‌ ಮಾಡಿ, ಬಿಜೆಪಿಯವರು ಅಧಿಕಾರ ಹಿಡಿದರು. ಕಡೆಗೆ ಅವರೇ ಕಣ್ಣೀರು ಹಾಕಿಕೊಂಡು ರಾಜಭವನಕ್ಕೆ ಹೋಗಿ, ರಾಜೀನಾಮೆ ಕೊಟ್ಟು ಬರುವಂತೆ ಮಾಡಿದರು’ ಎಂದರು.

‘ಯಡಿಯೂರಪ್ಪ ಅವರು ಎಷ್ಟೇ ನೊಂದರೂ ತಮ್ಮ‌ ಪಕ್ಷದ ಪರವಾಗಿ ಅಭಿಮಾನದಿಂದಲೇ ಮಾತನಾಡಿಕೊಂಡು ಬಂದಿದ್ದಾರೆ. ಪಕ್ಷದ ಸಿದ್ಧಾಂತದ ಮೇಲೆ ನಂಬಿಕೆ‌‌ ಇಟ್ಟು ಕೆಲಸ ಮಾಡಿದ್ದಾರೆ. ಅವರು ಅನುಭವಿಸುತ್ತಿರುವ ನೋವು ಮತ್ತು ಕಿರುಕುಳ ಅವರಿಗೇ ಗೊತ್ತು. ಮಾನಸಿಕವಾಗಿ ಅವರೀಗ ಕುಗ್ಗಿದ್ದಾರೆ‌. ಆದರೆ, ಬಿಜೆಪಿ ಮಾತ್ರ ಅವರನ್ನು ಎಷ್ಟು ಬೇಕೋ ಅಷ್ಟು ಬಳಸಿಕೊಂಡು ಬಿಸಾಕಿದೆ’ ಎಂದು ಮರುಕ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು