ಧಾರವಾಡ: 2016ರ ಜೂನ್ 15ರಂದು (ಬುಧವಾರ) ಬೆಳಿಗ್ಗೆ ಎಂದಿನಂತೆ ವಿದ್ಯಾನಗರಿ ಧಾರವಾಡ ತನ್ನ ಚಟುವಟಿಕೆಗಳಿಗೆ ತೆರೆದುಕೊಳ್ಳುತ್ತಿತ್ತು. ಅಷ್ಟರಲ್ಲಿ ಇಲ್ಲಿನ ಸಪ್ತಾಪುರದಲ್ಲಿದ್ದ ಜಿಮ್ ಒಂದರಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರೊಬ್ಬರ ಬರ್ಬರ ಹತ್ಯೆಯಾಗಿದೆ ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಆತಂಕದ ಛಾಯೆ ಮೂಡಿಸಿತ್ತು.

ಎಂದಿನಂತೆ ಬೆಳಿಗ್ಗೆ ತನ್ನದೇ ಆದ ಜಿಮ್ಗೆ ಹೋಗಿದ್ದ ಹೆಬ್ಬಳ್ಳಿ ಜಿಲ್ಲಾ ಪಂಚಾಯ್ತಿ ಬಿಜೆಪಿ ಸದಸ್ಯ ಯೋಗೀಶಗೌಡ ಗೌಡರ (35) ಅವರನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು.

ಬೆಳಿಗ್ಗೆ ಯೋಗೀಶಗೌಡ ಜಿಮ್ಗೆ ಹೋಗುವ ಮೊದಲು ಅಲ್ಲಿ 8 ಬೈಕ್ ಮತ್ತು ಒಂದು ಕಪ್ಪು ಕಾರಿನಲ್ಲಿ ಹಲವು ಜನ ತಲವಾರು, ಮಚ್ಚು ಹಿಡಿದುಕೊಂಡು ಜಿಮ್ ಪಕ್ಕದ ರಸ್ತೆಯಲ್ಲಿ ಹೋದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.
.ಶಾಸಕ ವಿನಯ ಕುಲಕರ್ಣಿ ಜಿಲ್ಲಾಪಂಚಾಯಿತಿ ಸದಸ್ಯ ಯೋಗೀಶ್ಗೌಡ ಕೊಲೆ ಪ್ರಕರಣದ ಅಪರಾಧಿ.
ಜಿಮ್ ಸೆಂಟರ್ನಲ್ಲಿ ಪ್ರತಿದಿನ ಇರುವವರೂ ಇರಲಿಲ್ಲ...

ಬೆಳಿಗ್ಗೆ 6.30 ರಿಂದ 7.30ರ ವರೆಗೆ ಮಹಿಳೆಯರು ಜಿಮ್ ಮಾಡಲು ಅವಕಾಶ ಇದ್ದು, ಆ ಸಮಯದಲ್ಲಿ ಮೂರ್ನಾಲ್ಕು ಜನ ಹೆಣ್ಣು ಮಕ್ಕಳು ಮಾತ್ರ ಇದ್ದರು. ಗಂಡು ಮಕ್ಕಳು ಇರಲಿಲ್ಲ. ಬೆಳಗಿನ ಜಾವ 7.45ರ ಸುಮಾರಿಗೆ ಈ ಘಟನೆ ನಡೆದಿದ್ದು, ಆ ಕಾಂಪ್ಲೆಕ್ಸ್ನಲ್ಲಿನ ಯಾವುದೇ ಅಂಗಡಿಗಳು ತೆರೆದಿರಲಿಲ್ಲ.

ಆದರೆ ಕೊಲೆಯ ಮಾಹಿತಿ ಕಾಳ್ಗಿಚ್ಚಿನಂತೆ ಹರಡಿದ್ದರಿಂದ 8.30ರ ಹೊತ್ತಿಗೆ ಹೊತ್ತಿಗೆ ಇಡೀ ಆವರಣವೇ ಜನಸಾಗರದಿಂದ ತುಂಬಿತ್ತು. ಜನರನ್ನು ನಿಯಂತ್ರಿಸುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು.
.ಯೋಗೀಶಗೌಡ ಕೊಲೆ ಕೇಸಲ್ಲಿ ವಿನಯ ಕುಲಕರ್ಣಿ ಅಪರಾಧಿ: ಪ್ರಕರಣ ಸಾಗಿ ಬಂದ ಹಾದಿ....
ಸುಳಿವಿಗಾಗಿ ಪೊಲೀಸರ ಹುಡುಕಾಟ..

ಆರೋಪಿಗಳು ಘಟನೆ ನಡೆದ ಸ್ಥಳದಲ್ಲಿ ಯಾವುದೇ ಸುಳಿವು ಬಿಟ್ಟು ಹೋಗಿರಲಿಲ್ಲ. ಅಲ್ಲಿದ್ದ ಯೋಗೀಶಗೌಡ ಅವರ ಚಪ್ಪಲಿಗಳು ಹಾಗೂ ಕೆಲ ವಸ್ತುಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ್ದ ಅಂದಿನ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ, ‘ಐದಾರು ಜನರ ತಂಡವೊಂದು ಯೋಗೀಶಗೌಡ ಅವರ ಮೇಲೆ ಆಕ್ರಮಣ ಮಾಡಿ ಕೊಲೆ ಮಾಡಿರುವ ಮಾಹಿತಿ ಗೊತ್ತಾಗಿದೆ. ಕೊಲೆಗೆ ಕಾರಣ ಏನು ಎಂಬುದು ಸ್ಪಷ್ಟವಾಗಿ ಗೊತ್ತಾಗಿಲ್ಲ’ ಎಂದಿದ್ದರು.

26 ಕಡೆಗಳಲ್ಲಿ ಹೊಡೆತ...

ಕೊಲೆಗೆ ದುಷ್ಕರ್ಮಿಗಳು ತಲವಾರ ಹಾಗೂ ಚಾಕುಗಳನ್ನು ಬಳಸಿದ್ದರು. ಯೋಗೀಶಗೌಡ ಅವರ ತಲೆ, ಕೈ, ಕುತ್ತಿಗೆ ಹಾಗೂ ಕಾಲು ಸೇರಿದಂತೆ ಒಟ್ಟು 26 ಕಡೆಗಳಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಹಣೆ ಮೇಲೆ 4 ಬಲವಾದ ಹೊಡೆತಗಳು, ಕುತ್ತಿಗೆಗೆ ಮೂರು, ಎದೆಯ ಮೇಲೆ, ಬಲಗೈಗೆ, ಪಕ್ಕಡಿಗಳಿಗೆ, ಮೊಣಕಾಲಿಗೆ ಸೇರಿದಂತೆ ಒಟ್ಟು 26 ಕಡೆಗಳಲ್ಲಿ ದುಷ್ಕರ್ಮಿಗಳು ಹೊಡೆದಿದ್ದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ್ದ ಪತ್ನಿ ಮಲ್ಲಮ್ಮ ಮತ್ತು ಸಹೋದರ ಗುರುನಾಥಗೌಡ ಅವರ ರೋದನ ಮುಗಿಲುಮುಟ್ಟಿತ್ತು. ಶವವನ್ನು ಜಿಲ್ಲಾ ಆಸ್ಪತ್ರೆ ಸಾಗಿಸಲಾಯಿತ್ತು. ನಂತರ ಮರಣೋತ್ತರ ಪರೀಕ್ಷೆ ನಡೆಸಿ ಅಲ್ಲೇ ಸಾರ್ವಜನಿಕ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.