ಧಾರವಾಡ: ‘ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಯೋಗೀಶಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ಜಯ ಸಿಕ್ಕಿದ್ದಕ್ಕೆ ಹೆಮ್ಮೆಯಾಗಿದೆ. ಈಗ ಮೊದಲ ಹಂತದ ಹೋರಾಟದ ಮುಗಿದಿದೆ’ ಎಂದು ಜನಜಾಗೃತಿ ವೇದಿಕೆ ಅಧ್ಯಕ್ಷ ಬಸವರಾಜ ಕೊರವರ ಪ್ರತಿಕ್ರಿಯಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಪ್ರಕರಣದಲ್ಲಿ ಆರಂಭದಿಂದಲೂ ಹೋರಾಟ ಮಾಡಿದ್ದೇನೆ. ಕೃತ್ಯ ಎಸಗಿದವರಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ. ಶಿಕ್ಷೆಗೆ ಗುರಿಯಾಗಿರುವವರು ಮೇಲ್ಮನವಿ ಸಲ್ಲಿಸಬಹುದು. ಗುರುನಾಥಗೌಡ (ಯೋಗೀಶಗೌಡ ಗೌಡರ್ ಸಹೋದರ) ಕುಟುಂಬದ ಪರವಾಗಿ ನಾವು ‘ಇಂಪ್ಲೀಡ್’ ಆಗಬೇಕಾಗುತ್ತದೆ. ಸುಪ್ರೀಂ ಕೋರ್ಟ್ ವರೆಗೂ ಹೋಗಬಹುದು. ಇದು ಎರಡನೇ ಹಂತದ ಹೋರಾಟ. ನಮ್ಮ ಹೋರಾಟ ನಿರಂತರ’ ಎಂದರು.

‘ಈ ಹಿಂದೆಯೂ ಜೀವ ಬೆದರಿಕೆ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ. ‘ಹೈ ಪ್ರೊಫೈಲ್’ ಪ್ರಕರಣಗಳ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರಿಗೆ ಇದೆಲ್ಲ ಸಹಜ. ನಮಗೆ ಭದ್ರತೆ ಒದಗಿಸುವ ಅಗತ್ಯ ಇಲ್ಲ’ ಎಂದು ಉತ್ತರಿಸಿದರು.
.ಯೋಗೀಶಗೌಡ ಕೊಲೆ ಕೇಸ್ನಲ್ಲಿ ಅಪರಾಧಿ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ .ಯೋಗೀಶಗೌಡ ಕೊಲೆ: ಇನ್ಸ್ಪೆಕ್ಟರ್ ಚನ್ನಕೇಶವ ಟಿಂಗರೀಕರ್ಗೆ 7 ವರ್ಷ ಜೈಲು ಶಿಕ್ಷೆ.
‘ಪತಿ ನೆನಪಿನಲ್ಲೇ ಬದುಕು ಸವೆಸುವೆ’

‘ಪತಿ ಯೋಗೀಶ್ಗೌಡ ಗೌಡರ್ ನೆನಪಿನಲ್ಲೇ ಜೀವನ ಮಾಡುತ್ತಿದ್ದೇನೆ. ಈಗಲೂ ಅವರು ನನ್ನ ಜತೆಯಲ್ಲೇ ಇದ್ದಾರೆ. ಮಕ್ಕಳ ಬೆನ್ನಹಿಂದೆಯೇ ಇದ್ದಾರೆ ಎಂದು ಭಾವಿಸಿದ್ದೇನೆ. ಪತಿಯ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದವರು ಜೈಲಿನಲ್ಲಿ ಅನುಭವಿಸುವುದಕ್ಕಿಂತ ನಾಲ್ಕು ಪಟ್ಟು ಹೆಚ್ಚು ನೋವನ್ನು 10 ವರ್ಷಗಳಲ್ಲಿ ಅನುಭವಿಸಿದ್ದೇನೆ’ ಎಂದು ಮಲ್ಲಮ್ಮ ಪ್ರತಿಕ್ರಿಯಿಸಿದರು.

ತೀರ್ಪಿನ ಹಿನ್ನೆಲೆಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ನಮ್ಮ ಜತೆಯಲ್ಲೇ ಇದ್ದ ಮಹಾಂಬಳೇಶ ಹೊಂಗಲ ಎಂಬಾತನೂ ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಶಿಕ್ಷೆಗೆ ಗುರಿಯಾಗಿದ್ದಾನೆ. ಆತ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬುದನ್ನು ನಂಬಿರಲಿಲ್ಲ, ಅವನು ಇದ್ದಿದ್ದು ಬಹಳ ನೋವುಂಟು ಮಾಡಿದೆ’ ಎಂದರು.

ವಿನಯ ಕುಲಕರ್ಣಿ ಪ್ರಕರಣದಲ್ಲಿ ನಾನು ಹೇಳಿದ ಮಾತೇ ಸತ್ಯ ಎಂಬುದು ಈಗ ಸಾಬೀತಾಗಿದೆ

ಬಿ.ಎಸ್. ಯಡಿಯೂರಪ್ಪ,ಬಿಜೆಪಿ ಸಂಸದೀಯ ಮಂಡಳಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.