ಅಮಾನತು ಮಾಡಿದ ಅಧ್ಯಕ್ಷನೇ ಅಮಾನತು

7
ಪ್ರಚಾರದ ಗೀಳಿಗೆ ಬೆಲೆ ತೆತ್ತ ಶಿವಕುಮಾರ ರಾಯನಗೌಡ್ರ?

ಅಮಾನತು ಮಾಡಿದ ಅಧ್ಯಕ್ಷನೇ ಅಮಾನತು

Published:
Updated:

ಹುಬ್ಬಳ್ಳಿ: ಭಾರತ್ ಬಂದ್ ವೇಳೆ ಗದ್ದಲ ಮಾಡಿದ ಆರೋಪದ ಮೇಲೆ ಯುವ ಕಾಂಗ್ರೆಸ್ ಪದಾಧಿಕಾರಿಗಳನ್ನು ಅಮನಾತು ಮಾಡಿದ್ದ ಹುಬ್ಬಳ್ಳಿ– ಧಾರವಾಡ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ ರಾಯನಗೌಡ್ರ ಈಗ ಅಮಾನತುಗೊಂಡಿದ್ದಾರೆ!

ಪಕ್ಷದ ವೇದಿಕೆಯಲ್ಲಿ ಚರ್ಚಿಸದೆ ಏಕಾಏಕಿ ನಿರ್ಧಾರ ಕೈಗೊಂಡಿದ್ದು ಹಾಗೂ ಅದನ್ನು ಪತ್ರಿಕೆಗಳಿಗೆ ಕಳುಹಿಸಿಕೊಟ್ಟು ಪಕ್ಷಕ್ಕೆ ಮುಜುಗರ ಉಂಟು ಮಾಡಿದ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿರುವ ಯುವ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಅಮಾನತು ಆದೇಶ ಹೊರಡಿಸಿದ್ದಾರೆ.

ಹೋಟೆಲ್‌ನಲ್ಲಿ ದಾಂಧಲೆ ಮಾಡಿದ ಆರೋಪದ ಮೆಲೆ ಧಾರವಾಡದ ಯುವ ಕಾಂಗ್ರೆಸ್‌ನ ಪದಾಧಿಕಾರಿಗಳಾದ ಇಮ್ರಾನ್ ಯಲಿಗಾರ, ಪ್ರಕಾಶ ಬುರಬುರೆ, ಪ್ರವೀಣ ಶಲವಡಿ, ಇಮ್ರಾನ್ ಕಡೂರ, ನಾಗಾರ್ಜುನ ಕತ್ರಿಮಲ್ ಅವರನ್ನು ಅಮಾನತು ಮಾಡಲಾಗಿತ್ತು. ಅಮಾನತು ಮಾಡಿಲ್ಲ ಎಂದು ಹುಬ್ಬಳ್ಳಿ– ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ಅವರು ಮರು ದಿನವೇ ಸ್ಪಷ್ಟನೆ ನೀಡಿದ್ದರು.

ನೇರ ಪ್ರಸಾರದಲ್ಲಿ ಭರವಸೆ ನೀಡಿದ್ದರು: ಬಂದ್ ದಿನ ಬೆಳಿಗ್ಗೆ ಆರು ಗಂಟೆಗೆ ಚನ್ನಮ್ಮ ವೃತ್ತಕ್ಕೆ ಬಂದಿದ್ದ ಶಿವಕುಮಾರ ಮತ್ತು ಕಾರ್ಯಕರ್ತರು ಟಯರ್‌ಗೆ ಬೆಂಕಿ ಹಚ್ಚಿದ್ದರು. ಈ ದೃಶ್ಯಗಳು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮಧ್ಯಾಹ್ನದ ವರೆಗೆ ಪ್ರಸಾರವಾಗಿ, ಭಾರಿ ಪ್ರಚಾರ ಸಿಕ್ಕಿತ್ತು. ಇದರಿಂದ ಪ್ರೇರೇಪಿತರಾದ ಅವರು ಬಾಗಿಲು ತೆರೆದಿದ್ದ ಹೋಟೆಲ್‌ಗಳಿಗೆ ನುಗ್ಗಿ ಗದ್ದಲ ಮಾಡಿದ್ದರು. ಅಲ್ಲದೆ ಬಲವಂತದ ಬಂದ್‌ ಬಗ್ಗೆ ಚರ್ಚಿಸುತ್ತಿದ್ದ ಖಾಸಗಿ ಸುದ್ದಿ ವಾಹಿನಿಯವರು ಶಿವಕುಮಾರ ಅವರಿಗೆ ಕರೆ ಮಾಡಿದಾಗ, ‘ತಪ್ಪು ಮಾಡಿದ ಪದಾಧಿಕಾರಿಗಳನ್ನು ಅಮಾನತು ಮಾಡುತ್ತೇನೆ’ ಎಂದು ಭರವಸೆ ನೀಡಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !