ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಟ್ಟೀರ,ಬಟ್ಟೀರ ತಂಡಕ್ಕೆ ರೋಚಕ ಗೆಲುವು

ನಾಪೋಕ್ಲು: ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ
Last Updated 24 ಏಪ್ರಿಲ್ 2018, 10:31 IST
ಅಕ್ಷರ ಗಾತ್ರ

ನಾಪೊಕ್ಲು: ಇಲ್ಲಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ಟೂರ್ನಿಯ ಸೋಮವಾರದ ಪಂದ್ಯಗಳಲ್ಲಿ ಮಲ್ಚೀರ ಮಾರ್ಚಂಡ ಇಟ್ಟೀರ, ಮೇಕೇರಿರ, ಕಾಳೆಂಗಡ, ನಾಯಕಂಡ, ಮಾಪಂಗಡ, ಬಿದ್ದಾಟಂಡ, ಕಾಳಿಮಾಡ ಹಾಗೂ ಬಟ್ಟೀರ ತಂಡಗಳು ಗೆಲುವು ಸಾಧಿಸಿ ಮುಂದಿನ ಹಂತ ಪ್ರವೇಶಿಸಿದವು.

ಮಣವಟ್ಟೀರ ಹಾಗೂ ಬಯವಂಡ ತಂಡಗಳ ನಡುವಿನ ಪಂದ್ಯಗಳು ಮುಂದೂಡಲ್ಪಟ್ಟಿವೆ. ಮೈದಾನ 1ರಲ್ಲಿ ಮಲ್ಚೀರ ಮತ್ತು ಪಾಂಡಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಲ್ಚೀರ ತಂಡವು ಪಾಂಡಂಡ ತಂಡದ ವಿರುದ್ಧ 5-0 ಅಂತರದ ಭರ್ಜರಿ ಗೆಲುವು ಸಾಧಿಸಿತು. ಮಲ್ಚೀರ ತಂಡದ ಆಟಗಾರರಾದ ಬೋಪಯ್ಯ ಮೂರು ಗೊಲು ಹೊಡೆದರೆ ಹರ್ಷ ಹಾಗೂ ತಶ್ವಿನ್ ತಲಾ ಒಂದು ಗೋಲು ಹೊಡೆದು ತಂಡಕ್ಕೆ ಗೆಲುವು ತಂದಿಟ್ಟರು.

ಮಾರ್ಚಂಡ ಮತ್ತು ಅಪ್ಪಚಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಾರ್ಚಂಡ ತಂಡವು 4-0 ಅಂತರದ ಭರ್ಜರಿ ಗೆಲವು ಸಾಧಿಸಿತು. ಮಾರ್ಚಂಡ ತಂಡದ ಆಟಗಾರ ಜೋಯಪ್ಪ 2 ಗೋಲು ಗಳಿಸಿದರು. ಸೋಮಣ್ಣ ಹಾಗೂ ನಾಚಪ್ಪ ತಲಾ ಒಂದು ಗೋಲು ಗಳಿಸಿದರು. ಮಾದಂಡ ಮತ್ತು ಇಟ್ಟೀರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಇಟ್ಟೀರ ತಂಡವು ಮಾದಂಡ ತಂಡದ ವಿರುದ್ಧ 1-0 ಅಂತರದ ಗೆಲುವು ಸಾಧಿಸಿತು. ಇಟ್ಟೀರ ನಾಚಪ್ಪ ತಂಡದ ಪರ ಒಂದು ಗೋಲು ದಾಖಲಿಸಿದರು. ಮೇಕೇರಿರ ಮತ್ತು ಅಮ್ಮಣಿಚಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಮ್ಮಣಿಚಂಡ ತಂಡವು ಮೇಕೇರಿರ ತಂಡದ ಎದುರು ಸೋಲು ಅನುಭವಿಸಿತು.

ಮೇಕೇರಿರ ತಂಡದ ನಿತಿನ್ತಿಮ್ಮಯ್ಯ ಹಾಗೂ ನೇಹಲ್ ತಮ್ಮಯ್ಯ ತಲಾ ಎರಡು ಗೋಲು ಗಳಿಸಿದರೆ ಅಭಿನವ್ ಗಣಪತಿ ಒಂದು ಗೋಲು ಹೊಡೆದು ತಂಡದ ಗೆಲುವಿಗೆ ಕಾರಣರಾದರು. ಕಾಳೆಂಗಡ ಮತ್ತು ಕರವಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಾಳೆಂಗಡ ತಂಡವು ಕರವಂಡ ತಂಡದ ವಿರುದ್ದ 2-1 ಅಂತರದ ಗೆಲುವು ಸಾಧಿಸಿತು. ಕಾಳೆಂಗಡ ತಂಡದ ಆಟಗಾರ ಪವನ್ ಚೆಂಗಪ್ಪ 2 ಗೋಲು ಹೊಡೆದರು.

ಮೈದಾನ 2ರಲ್ಲಿ ನಡೆದ ಮೊದಲ ಪಂದ್ಯದಲ್ಲಿ ನಾಯಕಂಡ ತಂಡವು ಕುಂಚೆಟ್ಟೀರ ತಂಡದ ವಿರುದ್ಧ 2-0 ಅಂತರದ ಗೆಲುವು ಸಾಧಿಸಿತು.

ನಾಯಕಂಡ ಜೋಯಪ್ಪ ಹಾಗೂ ಜೀವನ್ ಬೋಪಣ್ಣ ತಲಾ ಒಂದು ಗೋಲು ಗಳಿಸಿ ತಂಡದ ಗೆಲುವಿಗೆ ಕಾರಣರಾದರು.

ಎರಡನೆಯ ಪಂದ್ಯದಲ್ಲಿ ತಡಿಯಂಗಡ ತಂಡವು ಮಾಪಂಗಡ ತಂಡದ ವಿರುದ್ಧ ಸೋಲು ಅನುಭವಿಸಿತು. ಮಾಪಂಗಡ ತಂಡವು 3-0 ಅಂತರದ ಮುನ್ನಡೆ ಸಾಧಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿತು. ಮಾಪಂಗಡ ತಂಡದ ಆಟಗಾರ ಅಪ್ಪಣ್ಣ ಹ್ಯಾಟ್ರಿಕ್ ಗೋಲು ಗಳಿಸಿ ತಂಡದ ವಿಜಯಕ್ಕೆ ಕಾರಣರಾದರು.

ಮೂರನೇ ಪಂದ್ಯದಲ್ಲಿ ಬಿದ್ದಾಟಂಡ ತಂಡವು ಪಾರುವಂಗಡ ತಂಡದ ವಿರುದ್ಧ 2-1 ಅಂತರದ ಗೆಲುವು ಸಾಧಿಸಿತು. ಬಿದ್ದಾಟಂಡ ತಂಡದ ಪರ ಗಿರೀಶ್‌ಪೂಣಚ್ಚ ಎರಡು ಗೋಲು ಗಳಿಸಿದರು. ಪಾರುವಂಗಡ ತಂಡದ ಕೀರ್ತನ್ ಪೊನ್ನಪ್ಪ ಒಂದು ಗೋಲು ಹೊಡೆದರು.

ನಾಲ್ಕನೇ ಪಂದ್ಯದಲ್ಲಿ ಕಾಳಿಮಾಡ ತಂಡವು ಮೊಣ್ಣಂಡ ತಂಡದ ವಿರುದ್ಧ 4-0 ಅಂತರದ ಗೆಲುವು ಸಾಧಿಸಿತು. ಕಾಳಿಮಾಡ ತಂಡದ ಡ್ಯಾನಿ ಹಾಗೂ ಕುಶಾಲಪ್ಪ ತಲಾ ಒಂದು ಗೋಲು ದಾಖಲಿಸಿದರೆ ಕಿರಣ್ 2ಗೋಲು ಹೊಡೆದು ತಂಡದ ಗೆಲುವಿಗೆ ಕಾರಣರಾದರು.

ಐದನೇ ಪಂದ್ಯ ಬೊಳ್ಳಚೆಟ್ಟೀರ ಮತ್ತು ಬಟ್ಟೀರ ತಂಡಗಳ ನಡುವೆ ನಡೆಯಿತು. ಬಟ್ಟೀರ ತಂಡವು 4-0 ಅಂತರದ ಭರ್ಜರಿ ಗೆಲುವು ಸಾಧಿಸಿತು. ಬಟ್ಟೀರ ತಂಡದ ಮಧುಮಾಚಯ್ಯ ಮೂರು ಗೋಲು ದಾಖಲಿಸಿದರು. ಕೀರ್ತನ್ ಒಂದು ಗೋಲು ಹೊಡೆದರು.

ಮಂಗಳವಾರದ ಪಂದ್ಯಗಳು
ಮೈದಾನ-1
ಬೆ. 9ಕ್ಕೆ ಮೂವೆರ -ಪಳೆಯಂಡ
10ಕ್ಕೆ ಮದ್ರಿರ -ಬಡ್ಡಿರ
11ಕ್ಕೆ ಪೊರ್ಕೋವಂಡ -ಚಂದುರ
12ಕ್ಕೆ ಮುರುವಂಡ -ಮುಂಡಚಾಡಿರ
1ಕ್ಕೆ ಮಂಡೆಯಂಡ -ಕುತ್ತಿಯಂಡ
2ಕ್ಕೆ ಚೇನಿರ -ನಾಗಂಡ

ಮೈದಾನ-2

9ಕ್ಕೆ ಕಂಬೆಯಂಡ -ನುಚ್ಚಿಮಣಿಯಂಡ
10ಕ್ಕೆ ಪುಚ್ಚಿಮಂಡ -ಚಂಗೇಟಿರ
11ಕ್ಕೆ ಪಾಡೆಯಂಡ -ಮಂಡಗಡ
12ಕ್ಕೆ ಮಣವಟ್ಟಿರ -ಬಯವಂಡ
1ಕ್ಕೆ ಅಪ್ಪಚೆಟ್ಟೋಳಂಡ -ಪಟ್ರಪಂಡ
2ಕ್ಕೆ ಕುಂಡ್ಯೋಳಂಡ -ಕೋಳೆರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT