‘ಡಿಸಿಸಿ ಬ್ಯಾಂಕ್‌ನಿಂದ ಡಿಜಿಟಲ್ ವಹಿವಾಟು’

7
ಮೊಬೈಲ್ ಎಟಿಎಂ ವ್ಯಾನ್‌ಗೆ ಚಾಲನೆ ನೀಡಿದ ನಬಾರ್ಡ್‌ನ ಸಹಾಯಕ ವ್ಯವಸ್ಥಾಪಕಿ ರಾಜಪ್ರಿಯ ಮುರುಗನ್

‘ಡಿಸಿಸಿ ಬ್ಯಾಂಕ್‌ನಿಂದ ಡಿಜಿಟಲ್ ವಹಿವಾಟು’

Published:
Updated:
Deccan Herald

ವಿಜಯಪುರ:  ‘ಜಿಲ್ಲೆಯ ಜನರನ್ನು ಡಿಜಿಟಲ್‌ ವ್ಯವಹಾರಗಳತ್ತ ಕರೆದೊಯ್ಯುವ ನಿಟ್ಟಿನಲ್ಲಿ ವಿಜಯಪುರ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಶ್ರಮಿಸುತ್ತಿದೆ’ ಎಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಉಪಾಧ್ಯಕ್ಷ ಬಿ.ಎಸ್.ಪಾಟೀಲ ಯಾಳಗಿ ಹೇಳಿದರು.

ನಗರದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಕೇಂದ್ರ ಕಚೇರಿಯಲ್ಲಿ ಬುಧವಾರ ನಬಾರ್ಡ್‌ ಸಹಯೋಗದಲ್ಲಿ ಆರಂಭಗೊಂಡ ಮೊಬೈಲ್ ಎಟಿಎಂ ವ್ಯಾನ್‌ ಉದ್ಘಾಟಿಸಿ ಮಾತನಾಡಿದ ಅವರು, ‘ಗ್ರಾಮೀಣ ಪ್ರದೇಶಗಳಲ್ಲಿ ವ್ಯವಸ್ಥಿತ ಎಟಿಎಂಗಳಿಲ್ಲದ ಕಾರಣ, ಅಲ್ಲಿನ ಜನರು ದೂರದ ಪ್ರದೇಶಗಳಿಗೆ ಹೋಗಿ ಹಣ ಪಡೆಯಬೇಕಾಗುತ್ತದೆ. ಈ ಸಮಸ್ಯೆ ನಿವಾರಣೆಗಾಗಿ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಮೊಬೈಲ್ ಎಟಿಎಂ ವ್ಯಾನ್‌ ಆರಂಭಿಸಿದೆ’ ಎಂದರು.

‘ಈ ಮೊಬೈಲ್ ಎಟಿಎಂ ವ್ಯಾನ್‌ ಎಲ್ಲ ಹಳ್ಳಿ-ಹಳ್ಳಿಗೂ ಸಂಚರಿಸಲಿದ್ದು, ಯಾವುದೇ ಬ್ಯಾಂಕಿನ ಎಟಿಎಂ ಕಾರ್ಡ್‌, ರೂಪೆ ಕಾರ್ಡನ್ನು ಬಳಸಿ ಹಣ ಪಡೆಯಬಹುದು. ಬ್ಯಾಂಕಿಂಗ್ ವ್ಯವಹಾರದ ಕುರಿತು ವಿಡಿಯೋ ಸ್ಕ್ರೀನ್ ಮೂಲಕ ತಿಳಿವಳಿಕೆ ನೀಡಲಾಗುವುದು. ರೂಪೆ ಕಾರ್ಡ್‌ ಚಲಾವಣೆ- ವ್ಯವಹಾರದಲ್ಲಿಯ ತೊಂದರೆಗಳನ್ನು ಪರಿಹರಿಸುವುದು. ಎಲ್ಲ ರೀತಿಯ ವ್ಯವಸ್ಥೆಗಳನ್ನೊಳಗೊಂಡ ಮೊಬೈಲ್ ಎಟಿಎಂ ವ್ಯಾನ್‌ಗಾಗಿ ₹ 26,38 ಲಕ್ಷ ವೆಚ್ಚ ಮಾಡಲಾಗಿದೆ. ನಬಾರ್ಡ್‌ ಸಂಸ್ಥೆ ₹ 15 ಲಕ್ಷ ಅನುದಾನ ಮಂಜೂರು ಮಾಡಿದ್ದು, ಉಳಿದ ಅನುದಾನ ಡಿಸಿಸಿ ಬ್ಯಾಂಕ್‌ ಭರಿಸಿದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಹಾಗೂ ಬ್ಯಾಂಕ್‌ನಲ್ಲಿ ಒಟ್ಟು 1.80 ಲಕ್ಷ ರೈತರು ಬೆಳೆ ಸಾಲ ಪಡೆದಿದ್ದು, ಈಗಾಗಲೇ 1.60 ಲಕ್ಷ ರೈತರಿಗೆ ಕೆಸಿಸಿ ರೂಪೆ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಉಳಿದ ರೈತರಿಗೆ ಕಾರ್ಡ್‌ ವಿತರಣೆ ಪ್ರಗತಿಯಲ್ಲಿದೆ’ ಎಂದು ಮಾಹಿತಿ ನೀಡಿದರು.

ನಬಾರ್ಡ್‌ನ ಬೆಂಗಳೂರು ಶಾಖೆಯ ಸಹಾಯಕ ವ್ಯವಸ್ಥಾಪಕಿ ರಾಜಪ್ರಿಯ ಮುರುಗನ್ ಮೊಬೈಲ್ ಎಟಿಎಂ ವ್ಯಾನ್‌ಗೆ ಚಾಲನೆ ನೀಡಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸಂಜಯ ಪಾಟೀಲ, ಎಸ್.ಜಿ.ಇಜೇರಿ, ಟಿ.ಆರ್.ಮೂಲಿಮನಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಬಿ.ರಾಜಣ್ಣ, ಮುಖ್ಯ ವ್ಯವಸ್ಥಾಪಕ ಎಂ.ವಿ.ಗೊಳಸಂಗಿ, ಜೆ.ಬಿ.ಪಾಟೀಲ, ಟಿ.ವೈ.ಬರಕಡೆ, ಆರ್.ಎಂ.ಪಾಟೀಲ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !