ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆನಿಜುವೆಲಾ ಜೈಲಿನಿಂದ ಪರಾರಿಗೆ ಯತ್ನ: 68 ಕೈದಿಗಳು ಸಾವು

Last Updated 29 ಮಾರ್ಚ್ 2018, 14:32 IST
ಅಕ್ಷರ ಗಾತ್ರ

ವೆಲೆನ್ಸಿಯಾ, ವೆನಿಜುವೆಲಾ : ಇಲ್ಲಿನ ಜೈಲಿನಲ್ಲಿ ಸಂಭವಿಸಿದ ದೊಂಬಿ ಹಾಗೂ ಅಗ್ನಿ ಅನಾಹುತದಲ್ಲಿ 68 ಮಂದಿ ಕೈದಿಗಳು ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ಹಾಗೂ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕರಾಬೊಬೊ ರಾಜ್ಯದ ಪೊಲೀಸ್‌ ಕೇಂದ್ರ ಕಚೇರಿಯ ಜೈಲಿನಲ್ಲಿ ಈ ಅನಾಹುತ ಸಂಭವಿಸಿದೆ. ‘ಇಡೀ ಘಟನೆ ಕುರಿತಂತೆ ತನಿಖೆ ನಡೆಸಲು ನಾಲ್ವರು ಪ್ರಾಸಿಕ್ಯೂಟರ್‌ಗಳನ್ನು ನೇಮಿಸಲಾಗಿದೆ’ ಎಂದು ಮುಖ್ಯ ಪ್ರಾಸಿಕ್ಯೂಟರ್‌ ತಾರೆಕ್‌ ವಿಲ್ಲಿಯಂ ಸಾಬ್‌ ತಿಳಿಸಿದ್ದಾರೆ.

‘ಕೆಲವರು ಬೆಂಕಿಯಿಂದ ಸುಟ್ಟು ಸಾವನ್ನಪ್ಪಿದ್ದು, ಇನ್ನುಳಿದವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ’ ಎಂದು ಮಾನವ ಹಕ್ಕು ಸಂಘಟನೆಯಾದ ಉನಾ ವೆಂಟನಾ ಅ ಲಾ ಲಿಬರ್ಟಡ್‌ನ ಮುಖ್ಯಸ್ಥ ಕಾರ್ಲೊಸ್‌ ನಿಯಿಟೊ ತಿಳಿಸಿದ್ದಾರೆ.

ಘಟನೆ ನಡೆದ ವೇಳೆ ಜೈಲಿಗೆ ಭೇಟಿ ನೀಡಿದ್ದ ಇಬ್ಬರೂ ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ಅವರು ವಿವರಿಸಿದರು.

ಕೈದಿಗಳ ಸಾಮೂಹಿಕ ಸಾವಿಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಕರಾಬೊಬೊ ಗವರ್ವರ್‌ ರಫೇಲ್‌ ಲಕಾವಾ, ‘ಇಂತಹ ಘಟನೆಗೆ ಕಾರಣರಾದ ವ್ಯಕ್ತಿಗಳನ್ನು ಪತ್ತೆಹಚ್ಚಲು ಉನ್ನತಮಟ್ಟದ ಗಂಭೀರ ತನಿಖೆಗೆ ಆದೇಶ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT